ಬಾಗಲಕೋಟೆ, (ನವೆಂಬರ್ 05): ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ಕರ್ನಾಟಕ ಕಾಂಗ್ರೆಸ್ನಲ್ಲಿ ಚರ್ಚೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯಾ ಹಾಗೂ ಡಿಕೆ ಶಿವಕುಮಾರ್ ಬಣಗಳ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ. ಸಚಿವ ಕೆಎನ್ ರಾಜಣ್ಣ ಅವರು ಮುಂದಿನ ಸಿಎಂ ಪರಮೇಶ್ವರ್ ಎನ್ನುವ ಮೂಲಕ ದಲಿಯ ಮುಖ್ಯಮಂತ್ರಿ ಎನ್ನುವ ಅರ್ಥದಲ್ಲಿ ಹೇಳಿದ್ದರು. ಇದರ ನಡುವೆ ಇದೀಗ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ದಲಿತ ಸಿಎಂ ಕೂಗು ಎಬ್ಬಿಸಿದ್ದಾರೆ.
ಬಾಗಲಕೋಟೆಯ ಕಲಾಭವನದಲ್ಲಿ ನಡೆದ ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ , .ಹಾಗೇ ರಾಜ್ಯದಲ್ಲಿ ದಲಿತ ಸಿಎಂ ಯಾಕೆ ಆಗಬಾರದು? ದಲಿತರು ಮತ ಬ್ಯಾಂಕ್ ಮಾತ್ರ ಅಗಿರಬೇಕಾ? ಸಿಎಂ ಹುದ್ದೆ ಕೆಲವೆ ಸಮುದಾಯಗಳ ಸ್ವತ್ತಾ? ಯಾರಾದ್ರೂ ಗುತ್ತಿ ಪಡೆದುಕೊಂಡಿದ್ದಾರಾ? ದಲಿತರು ಸಿಎಂ ಆಗಲಿ ಎನ್ನುವ ಔದಾರ್ಯ ಹೊಂದಿರದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು. ಇದರೊಂದಿಗೆ ಸ್ವಾಮೀಜಿಯಿಂದ ದಲಿತ ಸಿಎಂ ಕೂಗು ಮತ್ತೆ ಕೇಳಿಬಂದಿದೆ.
ಇದನ್ನೂ ಓದಿ: ಉಪಹಾರಕೂಟ ನೆಪದಲ್ಲಿ ಸಚಿವರೊಂದಿಗೆ ಸಿಎಂ, ಡಿಸಿಎಂ ಮಹತ್ವದ ಸಭೆ: ಇಲ್ಲಿದೆ ಸಭೆಯ ಇನ್ಸೈಡ್ ಡಿಟೇಲ್ಸ್
ಸಿದ್ದರಾಮಯ್ಯನವರ ಬಗ್ಗೆ ನಮಗೆ ಬಹಳ ಗೌರವ ಇದೆ. ಅವರು ಸಾಮಾಜಿಕ ನ್ಯಾಯದ ಹರಿಕಾರ. ಒಂದು ವೇಳೆ ರಾಜ್ಯದಲ್ಲಿ ಏನಾದ್ರು ಬೆಳವಣಿಗೆ ಆದರೆ ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾಗಲಿ. ಸತೀಶ ಜಾರಕಿಹೊಳಿ ಅವರಿಗೆ ಎಲ್ಲ ರೀತಿಯಲ್ಲಿ ನಾಡಿನ ಸಿಎಂ ಆಗಲು ಅರ್ಹತೆಗಳಿವೆ. ಅವರ ಬೆನ್ನಿಗೆ ನಾವೆಲ್ಲಾ ನಿಲ್ಲಬೇಕಿದೆ ಎಂದು ರಾಜನಹಳ್ಳಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ. ಹೇಳಿದರು.
ಈ ಹಿಂದೆ ಹಲವು ಬಾರಿ ಕರ್ನಾಟಕದಲ್ಲಿ ದಲಿತ ಸಿಎಂ ಕೇಳಿಬಂದಿದ್ದವು. ಆಗಾಗ ಕೇಳಿ ಬರುತ್ತಲ್ಲೇ ಇದೆ. ಇದೀಗ ಸ್ವಾಮೀಜಿಯೊಬ್ಬರ ಬಾಯಿಂದಲೇ ದಲಿತ ಸಿಎಂ ಕೂಗು ಕೇಳಿಬಂದಿದ್ದು, ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.