ದೇವಸ್ಥಾನದ ದ್ವಾರ ಬಾಗಿಲಲ್ಲೇ ಮಹಿಳೆ ದುರಂತ ಸಾವು, ಕಾರಣವಾಯ್ತು ಮಂಗ

|

Updated on: Jul 15, 2024 | 3:42 PM

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಚಂದ್ರಾದೇವಿ ದೇವಸ್ಥಾನದ ದ್ವಾರಬಾಗಿಲಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ದ್ವಾರ ಬಾಗಲಿನ ಕಲ್ಲು ತಲೆ ಮೇಲೆ ಬಿದ್ದು ತರಕಾರಿ ಮಾರುತ್ತಿದ್ದ ಮಹಿಳೆ ದುರಂತ ಸಾವನ್ನಪ್ಪಿದ್ದಾಳೆ. ಈ ಸಾವಿಗೆ ಒಂದು ಮಂಗ ಕಾರಣ. ತರಕಾರಿ ಮಾರುತ್ತಿದ್ದ ಸುರೇಖಾಗೆ ಇಂದು ತನ್ನ ಬದುಕಿನ ಕೊನೆಯ ದಿನ ಎನ್ನುವುದು ಸಣ್ಣ ಸುಳಿವು ಕೂಡ ಇರಲಿಲ್ಲ.

ದೇವಸ್ಥಾನದ ದ್ವಾರ ಬಾಗಿಲಲ್ಲೇ ಮಹಿಳೆ ದುರಂತ ಸಾವು, ಕಾರಣವಾಯ್ತು ಮಂಗ
ದೇಗುಲದ ದ್ವಾರ ಬಾಗಿಲ್ಲೇ ಮಹಿಳೆ ಸಾವು
Follow us on

ಬಾಗಲಕೋಟೆ, (ಜುಲೈ 15): ದೇವಸ್ಥಾನದ ದ್ವಾರ ಬಾಗಲಿನ ಕಲ್ಲು ಬಿದ್ದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ನಡೆದಿದೆ. ಆಲಗೂರ ಗ್ರಾಮದ ಚಂದ್ರಾದೇವಿ ದೇವಸ್ಥಾನದ ಮುಂದೆ ಇಂದು (ಜುಲೈ 15) ತರಕಾರಿ ಮಾರುತ್ತ ಕುಳಿತ್ತಿದ್ದ ಸುರೇಖಾ ಕಂಬಾರ (44) ತಲೆ ಮೇಲೆ ದ್ವಾರಬಾಗಿಲಿನ ಕಲ್ಲು ಬಿದ್ದಿದೆ. ಪರಿಣಾಮ ಸುರೇಖಾ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಆಲಗೂರು ಗ್ರಾಮದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಈ ಸಂತೆಯಲ್ಲಿ ತರಕಾರಿ ಮಾರಲು ಸುರೇಖಾ ಹೋಗುತ್ತಿದ್ದಳು. ತರಕಾರಿ ಮಾರಾಟದಿಂದ ಬಂದ ಹಣದಿಂದಲೇ ಜೀವನ ಕಟ್ಟಿಕೊಂಡಿದ್ದ ಅವರು, ಇಂದು ಕೂಡ ವ್ಯಾಪಾರಕ್ಕೆ ಹೋಗಿದ್ದರು. ಎಂದಿನಂತೆ ದೇವಾಲಯದ ದ್ವಾರ ಬಾಗಿಲನಲ್ಲಿ ತರಕಾರಿಗಳನ್ನು ಇಟ್ಟುಕೊಂಡು ಕೂತಿದ್ದರು. ಅದರಂತೆ ಇಂದೂ ಸಹ ಅದೇ ಸ್ಥಳದಲ್ಲಿ ಕುಳಿತುಕೊಂಡಿದ್ದರು. ಮತ್ತೊಂದೆಡೆ ದೇವಾಲಯದ ಬಳಿಯಿದ್ದ ಮಂಗಗಳು ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದವು. ಈ ವೇಳೆ ದ್ವಾರ ಬಾಗಿಲಿಗೆ ಮಂಗವೊಂದು ಜಿಗಿದಿದೆ. ಮಂಗ ಜಿಗಿಯುತ್ತಿದ್ದಂತೆಯೇ ದ್ವಾರಬಾಗಿಲಿನಲ್ಲಿ ಸಿಮೆಂಟ್ ಕಲ್ಲು ಸುರೇಖಾ ತಲೆ ಮೇಲೆ ಬಿದ್ದಿದೆ. ಪರಿಣಾಮ ಸುರೇಖಾ ನೆಲಕ್ಕೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುರೇಖಾ ತಲೆಯಿಂದ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.

ಇದನ್ನೂ ಓದಿ: ಗದಗ: ಪತ್ನಿ ಚುಡಾಯಿಸಿದ್ದನ್ನು ಪ್ರಶ್ನೆ ಮಾಡಿದಕ್ಕೆ ಪತಿ, ಕುಟುಂಬಸ್ಥರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಜಮಖಂಡಿ ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ. ದೇಗುಲದ ಆಡಳಿತ ಮಂಡಳಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಆಡಳಿತ ಮಂಡಳಿ ದ್ವಾರಬಾಗಿಲಿನ್ನು ಸರಿಯಾಗಿ ನಿರ್ಮಿಸಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:15 pm, Mon, 15 July 24