ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ

ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇರೀತಿ ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ.

ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ
ಶೋಭಾ (ಎಡಚಿತ್ರ) ಗಾಯಗೊಂಡ ಲಕ್ಷ್ಮಿ (ಬಲಚಿತ್ರ)
Edited By: ವಿವೇಕ ಬಿರಾದಾರ

Updated on: Jul 26, 2023 | 10:06 AM

ಬಾಗಲಕೋಟೆ: ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇರೀತಿ ಬಾಗಲಕೋಟೆ (Bagalkot) ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ. ಖಜ್ಜಿಡೋಣಿ ಗ್ರಾಮದ ಶೋಭಾ ಹಂಚಿನಾಳ ಎಂಬುವರ ಮನೆಯಲ್ಲಿ ಬುಧುವಾರ (ಜು.19) ರಂದು ಕಳ್ಳತನವಾಗಿತ್ತು. ಖದೀಮರು ಹಾಡುಹಗಲೇ ಶೋಭಾ ಹಂಚಿನಾಳ ಮನೆಯಲ್ಲಿದ್ದ ತಿಜೋರಿ ಒಡೆದು 7.40 ಲಕ್ಷ ಮೌಲ್ಯದ ಚಿನ್ನವನ್ನು ‌ಕಳ್ಳತನ (Robbery) ಮಾಡಿದ್ದರು.

ಈ ಬಗ್ಗೆ ದೇವರ ಹೇಳಿಕೆ ಹೇಳುವ ತಾಯವ್ವ ಬಳಿ ಹೋಗಿ ನಮ್ಮ ಮನೆ ಕಳ್ಳತ ಮಾಡಿದವರು ಯಾರು ಎಂದು ಶೋಭಾ‌ ಮನೆಯವರು ಕೇಳಿದ್ದರು. ಇದಕ್ಕೆ ತಾಯವ್ವ ಮಾನೆ ನಿನ್ನ ಸ್ನೇಹಿತೆ ಲಕ್ಷ್ಮಿ ಪೆಟ್ಲೂರ (29) ಕಳ್ಳತನ ಮಾಡಿದ್ದಾಳೆ ಎಂದು ಹೇಳಿದ್ದಳು.

ಇದನ್ನೂ ಓದಿ: ಬಾಗಲಕೋಟೆ: ವಾತಾವರಣ ವೈಪರೀತ್ಯದಿಂದ ಬೆಳೆಗಳಿಗೆ ಕೀಟಗಳ ಕಾಟ; ರೈತರ ಅಳಲು

ಅಲ್ಲದೇ ಆಕೆ ಕಳ್ಳತನ ಮಾಡಿಲ್ಲ ಅಂದರೆ ಸುಡುವ ಎಣ್ಣೆಯಲ್ಲಿ ಕೈ ಎದ್ದಿ ಪರೀಕ್ಷೆ ಮಾಡಿ ಎಂದಿದ್ದಳು. ತಾಯವ್ವ ಮಾನೆ ಮಾತು ಕೇಳಿದ ಶೋಭಾ ಹಂಚಿನಾಳ ಹಾಗೂ ಕುಟುಂಬಸ್ಥರು, ಸೋಮವಾರ (ಜು.24) ರಂದು ಲಕ್ಷ್ಮಿ ಪೆಟ್ಲೂರ ಅವರಿಗೆ ಕರೆ ಮಾಡಿ ಶೋಭಾ ಮನೆಗೆ ಕರೆಸಿದ್ದಳು.ಮನೆಗೆ ಬಂದ ಲಕ್ಷ್ಮಿ ಅವರಿಗೆ ಶೋಭಾ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಅದಕ್ಕೆ ಲಕ್ಷ್ಮಿ ನಾನು ಕಳ್ಳತನ ಮಾಡಿಲ್ಲವೆಂದಿದ್ದಾರೆ.

ಅದಕ್ಕೆ ಶೋಭಾ ಹಾಗೂ ಕುಟುಂಬಸ್ಥರು ಮನೆಯಲ್ಲಿ ಸುಡುವ ಎಣ್ಣೆಯಲ್ಲಿ ಲಕ್ಷ್ಮಿ ಕೈ ಎದ್ದಿದ್ದಾರೆ. ಇದರಿಂದ ಲಕ್ಷ್ಮಿ ಅವರ ಎರಡು ಮುಂಗೈಗೆ ತೀರ್ವವಾಗಿ ಗಾಯವಾಗಿದ್ದು, ಕಲಾದಗಿ‌ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Loading...
Unable to load recommendations.
Follow Us