ಅಪರಾಧ ಆದ ಮೇಲೆ ಪೊಲೀಸರು ಬರ್ತಾರೆ ಎಂಬ ಮಾತಿಗೆ ವಿರುದ್ಧವಾಗಿ ಬಾಗಲಕೋಟೆ ನೈಟ್ ಬೀಟ್ ಪೊಲೀಸರು ಏನು ಮಾಡಿದರು ನೋಡಿ!

ಬಾಗಲಕೋಟೆ ನವನಗರ ಠಾಣೆ ನೈಟ್ ಬೀಟ್ ಪೊಲೀಸರು ಕರ್ತವ್ಯಪ್ರಜ್ಞೆ ತೋರದೇ ಹೋಗಿದ್ದರೆ, ಈ‌ ಡಕಾಯಿತರು ರಸ್ತೆಯಲ್ಲಿ ಹಾದುಹೋಗುತ್ತಿದ್ದ ಪ್ರಯಾಣಿಕರ ವಾಹನಗಳ ಆಡಗಟ್ಟಿ ಮಾರಕಾಸ್ತ್ರಗಳಿಂದ ಭಯ ಹುಟ್ಟಿಸಿ ಕಣ್ಣಲ್ಲಿ ಖಾರದಪುಡಿ ಎರಚಿ ವಾಹನ ಸವಾರರ ದರೋಡೆ ಮಾಡುವ ಸಾಧ್ಯತೆ ಇತ್ತು.

ಅಪರಾಧ ಆದ ಮೇಲೆ ಪೊಲೀಸರು ಬರ್ತಾರೆ ಎಂಬ ಮಾತಿಗೆ ವಿರುದ್ಧವಾಗಿ ಬಾಗಲಕೋಟೆ ನೈಟ್ ಬೀಟ್ ಪೊಲೀಸರು ಏನು ಮಾಡಿದರು ನೋಡಿ!
ಬಾಗಲಕೋಟೆ ನೈಟ್ ಬೀಟ್ ಪೊಲೀಸರು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on: Jul 14, 2023 | 1:41 PM

ಪೊಲೀಸರು ಯಾವಾಗಲೂ ಅಪರಾಧ ಕೃತ್ಯಗಳು ನಡೆದ ಮೇಲೆ ಬರುತ್ತಾರೆ ಎಂಬ ಮಾತು ಸಮಾಜದಲ್ಲಿ ಸಾಮಾನ್ಯವಾಗಿದೆ. ಆದರೆ ಅದೊಂದು ನಗರದಲ್ಲಿ ಅಪರಾಧ ಕೃತ್ಯ ನಡೆಯುವ ಮುನ್ನವೇ ಕಾನ್ಸ್​​ಟೇಬಲ್ ಗಳು ಎಂಟ್ರಿಯಾಗಿದ್ದಾರೆ. ತಮ್ಮ ಸಮಯಪ್ರಜ್ಞೆಯಿಂದ ನಡೆಯಬೇಕಿದ್ದ ಭಾರಿ ಅನಾಹುತವನ್ನು ತಡೆದಿದ್ದಾರೆ. ಕಾನ್ಸ್ಟೇಬಲ್ ಗಳ ಸಮಯಪ್ರಜ್ಞೆಯಿಂದ ಕಳ್ಳರು (dacoity gang) ತಮ್ಮ ಕೈಚಳಕ ತೋರುವ ಮುನ್ನವೇ ಕೈಗೆ ಕೋಳ ಹಾಕಿಸಿಕೊಂಡಿದ್ದಾರೆ. ಅಷ್ಟಕ್ಕೂ ಇಂತಹ ಘಟನೆ ನಡೆದಿದ್ದು ಎಲ್ಲಿ? ಏನಾಗಿದೆ ಇಲ್ಲಿದೆ ನೋಡಿ ಡೀಟೆಲ್ಸ್. ನೋಡಿದರೆನೇ ಭಯ ಹುಟ್ಟಿಸುವಂತಹ ಉದ್ದನೆಯ ತಲ್ವಾರ್, ಪಕ್ಕದಲ್ಲಿ ಡ್ರ್ಯಾಗರ್ ಜೊತೆಗೆ ಖಾರದಪುಡಿ, ಕಲ್ಲು, ಹಗ್ಗ, ಮೊಬೈಲ್ ಗಳು ಜೊತೆಗೆ ಒಂದು ಬೈಕ್! ಮುಖಕ್ಕೆ ಕಪ್ಪು ಬಟ್ಟೆಯನ್ನು ಹಾಕಿ ಕಳ್ಳರನ್ನು ಹಿಡಿದುಕೊಂಡು ಹೋಗುತ್ತಿರುವ (arrest) ಪೊಲೀಸರು. ಅಂದ ಹಾಗೆ ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ನಗರದಲ್ಲಿ (Bagalkot police).

ಹೌದು ಸಾಮಾನ್ಯವಾಗಿ ಎಲ್ಲರೂ ಹೇಳೋದು ಪೊಲೀಸರು ಎಲ್ಲ ಮುಗಿದ ಮೇಲೆ ಬರುತ್ತಾರೆ ಅಂತ. ಆದರೆ ಬಾಗಲಕೋಟೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್​​ಟೇಬಲ್ ಗಳು ಅಪರಾಧ ಕೃತ್ಯ ನಡೆಯುವ ಮುನ್ನವೇ ಖದೀಮರನ್ನು ಹಿಡಿದು ಭೇಷ್ ಎನ್ನಿಸಿಕೊಂಡಿದ್ದಾರೆ. ಕಾನ್ಸ್​​ಟೇಬಲ್ ಗಳ ಸಮಯಪ್ರಜ್ಞೆಯಿಂದ ನಡೆಯಬೇಕಿದ್ದ ಒಂದು ದೊಡ್ಡ ಅನಾಹುತ ತಪ್ಪಿದೆ.

ಅಪರಾಧ ಕೃತ್ಯ ನಡೆಯುವ ಮುನ್ನವೇ ಇಬ್ಬರು ಕಾನ್ಸ್​​ಟೇಬಲ್ ಗಳ ಸಮಯಪ್ರಜ್ಞೆಯಿಂದ ಕಳ್ಳರು ತಮ್ಮ ಕೈಗೆ ಕೊಳ ಹಾಕಿಸಿಕೊಂಡಿದ್ದಾರೆ. ಬಾಗಲಕೋಟೆಯ ನವನಗರ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಂತಹ ಪ್ರಕಾಶ್ ರಾಥೋಡ್ ಮತ್ತು ಬಸವರಾಜ ನಾಲತವಾಡ ಎಂಬ ಇಬ್ಬರು ಕಾನ್ಸ್​​ಟೇಬಲ್ ಗಳ ಕರ್ತವ್ಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಮೊನ್ನೆ ಬುಧವಾರ ರಾತ್ರಿ ಕರ್ತವ್ಯದ ಮೇಲಿದ್ದ ಪ್ರಕಾಶ್ ರಾಠೋಡ್ ಹಾಗೂ ಬಸವರಾಜ ನಾಲತವಾಡ ಎಂಬಿಬ್ಬರು ಬಾಗಲಕೋಟೆ ಹಾಗೂ ಸೀಮಿಕೇರಿ ಮಾರ್ಗ ಮಧ್ಯದ ರಸ್ತೆಯಲ್ಲಿ ತೇಜಸ್ ಅಂತರಾಷ್ಟ್ರೀಯ ಶಾಲೆಯ ಮುಂದೆ ಸಂಶಯಾಸ್ಪದವಾಗಿ ನಿಂತಿದ್ದ ಗುಂಪನ್ನ ನೋಡಿದ್ದರು. ಹಿಡಿದು ವಿಚಾರಣೆ ನಡೆಸಲಾಗಿ ಡಕಾಯಿತಿ ಪ್ರಕರಣ ಬೆಳಕಿಗೆ ಬಂದಿದೆ ‌. ಇಲ್ಲಿ ಐವರು ವ್ಯಕ್ತಿಗಳು ಡಕಾಯಿತಿಗೆ ಹೊಂಚು ಹಾಕಿ ನಿಂತಿದ್ದರು. ಬಂಧಿಸಿ ವಿಚಾರಣೆ ನಡೆಸಿದಾಗ ತಲ್ವಾರ್, ಡ್ರ್ಯಾಗರ್ ಖಾರದ ಪುಡಿ ಪ್ಯಾಕೆಟ್, ಕಲ್ಲು, ಹಗ್ಗ, ಮೊಬೈಲ್ ಗಳು ಪತ್ತೆಯಾಗಿದ್ದು ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿ ನವನಗರ ಠಾಣೆ ನೈಟ್ ಬೀಟ್ ಪೊಲೀಸರಿಬ್ಬರು ಕರ್ತವ್ಯಪ್ರಜ್ಞೆ ತೋರದೇ ಹೋಗಿದ್ದರೆ, ಈ‌ ಡಕಾಯಿತರು ರಸ್ತೆಯಲ್ಲಿ ಹಾದುಹೋಗುತ್ತಿದ್ದ ಪ್ರಯಾಣಿಕರ ವಾಹನಗಳನ್ನು ಆಡಗಟ್ಟಿ ತಲ್ವಾರ್ ಹಾಗೂ ಮಾರಕಾಸ್ತ್ರಗಳಿಂದ ಭಯ ಹುಟ್ಟಿಸಿ ಕಣ್ಣಲ್ಲಿ ಖಾರದಪುಡಿ ಎರಚಿ ವಾಹನ ಸವಾರರ ದರೋಡೆ ಮಾಡುವ ಸಾಧ್ಯತೆ ಇತ್ತು. ಇಲ್ಲವೇ ಪಕ್ಕದಲ್ಲಿಯೇ ನವನಗರಕ್ಕೆ ಎಂಟ್ರಿ ಕೊಟ್ಟು ಅಲ್ಲಿರುವ ಯಾವುದಾದರೂ ಮನೆಗೆ ಕನ್ನ ಹಾಕುವ ಸಾಧ್ಯತೆ ಇತ್ತು.

ಆದರೆ ಇಬ್ಬರು ಕಾನ್ಸ್​​ಟೇಬಲ್ ಗಳ ಸಮಯ ಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ಭಾರಿ ಅನಾಹುತ ತಪ್ಪಿದೆ. ಇಲ್ಲಿ ಪೊಲೀಸರಿಗೆ ತಗಲಾಕಿಕೊಂಡಿರುವ ಡಕಾಯಿತರ ಬಗ್ಗೆ ಹೇಳುವುದಾದರೆ ಇವರು ಹೆಸರು 22 ವರ್ಷದ ಸಮೀರ್, 19 ವರ್ಷದ ರಮೇಶ್, 21 ವರ್ಷದ ಆಕಾಶ್, 24 ವರ್ಷದ ಶಫಿ , 20 ವರ್ಷದ ನಿತೀಶ್ ಎಂಬುವವರಾಗಿದ್ದಾರೆ. ಇಲ್ಲಿ ಗಮನಿಸಬೇಕಾದಂತಹ ಪ್ರಮುಖ ಅಂಶವೆಂದರೆ ಇವರೆಲ್ಲರೂ ಕೂಡ ಬಾಗಲಕೋಟೆಯ ನವನಗರ ನಿವಾಸಿಗಳಾಗಿದ್ದು ಎಲ್ಲರೂ 24 ವರ್ಷದ ವಯೋಮಾನದವರಾಗಿದ್ದಾರೆ.

ಘಟನೆ ಬಗ್ಗೆ ಬಾಗಲಕೋಟೆ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಐವರನ್ನು ಕೂಡ ಬಾಗಲಕೋಟೆ ನವನಗರ ಪೊಲೀಸರು ಬಂಧಿಸಿ ಅವರಲ್ಲಿ ಇದ್ದ ಎಲ್ಲ ಮಾರಕಸ್ತ್ರಗಳು, ಮೊಬೈಲ್, ಗೋವಾ ಪಾಸಿಂಗ್ ಹೊಂದಿರುವ ಬೈಕ್ ಎಲ್ಲವನ್ನು ಕೂಡ ಜಪ್ತಿ ಮಾಡಿಕೊಂಡಿದ್ದಾರೆ. ಇಬ್ಬರು ಕಾನ್ಸ್ಟೇಬಲ್ ಗಳ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದ್ದು, ಪೊಲೀಸರ ಈ ಕಾರ್ಯಕ್ಕೆ ಬಾಗಲಕೋಟೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಒಟ್ಟಿನಲ್ಲಿ ಪೊಲೀಸರ ಕಾರ್ಯದಿಂದ ಬಾಗಲಕೋಟೆ ‌ನಗರದಲ್ಲಿ‌ ನಡೆಯುತ್ತಿದ್ದ ಅನಾಹುತ ತಪ್ಪಿದ್ದು ಸಮಾಧಾನ ತಂದಿದೆ. ಪೊಲೀಸ್ ಕಾನ್ಸ್‌ಟೇಬಲ್ ಗಳ ಕಾರ್ಯಕ್ಕೆ ಜನರು ಷಹಬ್ಬಾಸ್​ ಅಂತಿದ್ದಾರೆ.

ಬಾಗಲಕೋಟೆ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ