ಮೂರ್ನಾಲ್ಕು ತಿಂಗಳಿಂದ ವೇತನವಿಲ್ಲದೆ ಕಾರ್ಮಿಕರ ಪರದಾಟ: ನೀರು ಸರಬರಾಜು ಬಂದ ಮಾಡಿ ಪ್ರತಿಭಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 01, 2023 | 8:02 PM

ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್​ನ ನೀರು ಸಂಗ್ರಹಾರ ಘಟಕದ ಬಳಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನೀರು ಬಿಡುವ ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಡಿಯಲ್ಲಿ ನೀರು ವಾಟರ್ ಮನ್ ಗಳಾಗಿ ಕೆಲಸ ಮಾಡುವ ಕಾರ್ಮಿಕರು ಇಂದು ಪ್ರತಿಭಟನೆ ಹಾದಿ ಹಿಡಿದಿದ್ದರು. ಇದಕ್ಕೆ ಕಾರಣ ಕಳೆದ ಮೂರ್ನಾಲ್ಕು ತಿಂಗಳಿಂದ ವೇತನ ಆಗಿಲ್ಲ.

ಮೂರ್ನಾಲ್ಕು ತಿಂಗಳಿಂದ ವೇತನವಿಲ್ಲದೆ ಕಾರ್ಮಿಕರ ಪರದಾಟ: ನೀರು ಸರಬರಾಜು ಬಂದ ಮಾಡಿ ಪ್ರತಿಭಟನೆ
ನೀರು ಬಿಡುವ ಕಾರ್ಮಿಕರ ಪ್ರತಿಭಟನೆ
Follow us on

ಬಾಗಲಕೋಟೆ, ನವೆಂಬರ್​​​​ 01: ಅವರು ದಿನಾಲು ಹಗಲು ರಾತ್ರಿಯೆನ್ನದೆ ನಗರಕ್ಕೆ ನೀರು ಬಿಟ್ಟು ಜನರ ದಾಹ ತೀರಿಸುವ ಕಾರ್ಮಿಕರು. ಕಡಿಮೆ ವೇತನದಲ್ಲೇ ಕಷ್ಟಪಟ್ಟು ದುಡಿದು ಕುಟುಂಬ ನಿರ್ವಹಣೆ ಮಾಡುವ ಶ್ರಮಜೀವಿಗಳು. ಆದರೆ ಇಂತಹ ಶ್ರಮಿಕರಿಗೆ ಮೂರ್ನಾಲ್ಕು ತಿಂಗಳಾದರೂ ವೇತನವಾಗಿಲ್ಲ. ಇದರಿಂದ ಇಂದು ಆ ಕಾರ್ಮಿಕರು ಪ್ರತಿಭಟನೆ (protest) ಹಾದಿ ಹಿಡಿದಿದ್ದರು. ಎಲ್ಲಾ ಕಡೆ ಕನ್ನಡ ರಾಜ್ಯೋತ್ಸವ ಸಂಭ್ರಮವಿದ್ದರೆ ಅವರು ಹೋರಾಟದ ಮೂಲಕ ತಮ್ಮ ಸಂಕಷ್ಟವನ್ನು ಹೊರಹಾಕುತ್ತಿದ್ದರು.

ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್​ನ ನೀರು ಸಂಗ್ರಹಾರ ಘಟಕದ ಬಳಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನೀರು ಬಿಡುವ ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ. ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಡಿಯಲ್ಲಿ ನೀರು ವಾಟರ್ ಮನ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಂದು ಎಲ್ಲ ಕಡೆ ರಾಜ್ಯೋತ್ಸ ಸಡಗರ ಇದ್ರೆ ಇವರು ಪ್ರತಿಭಟನೆ ಹಾದಿ ಹಿಡಿದಿದ್ದರು. ಇದಕ್ಕೆ ಕಾರಣ ಕಳೆದ ಮೂರ್ನಾಲ್ಕು ತಿಂಗಳಿಂದ ಈ ಕಾರ್ಮಿಕರಿಗೆ ವೇತನೇ ಆಗಿಲ್ಲ.

ಇದರಿಂದ ಕುಟುಂಬವನ್ನು ನಿರ್ವಹಣೆ ಮಾಡಲಾಗದೆ ಈ ಬಡ ಕಾರ್ಮಿಕರು ಕಂಗಾಲಾಗಿದ್ದಾರೆ. ಎಷ್ಟು ಸಾರಿ ಅಧಿಕಾರಿಗಳಿಗೆ ತಿಳಿಸಿದರೂ ಇವರಿಗೆ ಸ್ಪಂದನೆ ನೀಡಿಲ್ಲ. ಇದರಿಂದ ಇಂದು ಈ ಕಾರ್ಮಿಕರು ನೀರು ಸರಬರಾಜು ಮಾಡುವ ಘಟಕದ ಎದುರು ಪ್ರತಿಭಟನೆ ಮಾಡಿದರು. ಬಾಗಲಕೋಟೆ ನವನಗರಕ್ಕೆ ನೀರು ಸರಬರಾಜು ಆಗದಂತೆ ವಾಲ್ವ್ ಬಂದ್ ಮಾಡಿ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ವರ್ಷಗಳೆ ಉರುಳಿದರು ಆರಂಭವಾಗದ 44.34 ಕೋಟಿ ರೂ. ವೆಚ್ಚದ ಸಿಇಟಿಪಿ ಘಟಕ: ವಿಷಕಾರಿ ನೀರೇ ಕುಡಿಯುತ್ತಿರುವ ಗ್ರಾಮಸ್ಥರು

ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ನವನಗರದ ಅಭಿವೃದ್ದಿ ಮೂಲಭೂತ ಸೌಲಭ್ಯ ಕಲ್ಪಿಸುವ ಹೊಣೆ ಹೊತ್ತಿರುವ ಪ್ರಾಧಿಕಾರ. ಇದರ ಅಡಿಯಲ್ಲಿ ಈ ಎಲ್ಲ ಕಾರ್ಮಿಕರು ವಾಟರ್ ಮನ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 20-25 ವರ್ಷಗಳಿಂದ ಕೆಲಸ ಮಾಡುತ್ತಿರುವ ಈ ಕಾರ್ಮಿಕರಿಗೆ ಮೇಲಿಂದ ಮೇಲೆ ವೇತನ ವಿಳಂಭ ಧೋರಣೆ ನಡೆಯುತ್ತಲೇ ಇದೆ. ಇದೀಗ ಕಳೆದ ಮೂರ್ನಾಲ್ಕು ತಿಂಗಳಿಂದ ವೇತನವೇ ಆಗಿಲ್ಲ. ಇದರಿಂದ ಇಂದು ಎಲ್ಲರೂ ಒಟ್ಟಾಗಿ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ನಮಗೆ ವೇತನ ಕೂಡ ನೀಡದ ಸ್ಥಿತಿಗೆ ಬಂದಿದೆ ಎಂದರು. ಕೂಡಲೆ ನಮ್ಮ ಬಾಕಿ ವೇತನ ನೀಡಬೇಕು ಇಲ್ಲದಿದ್ದರೆ ಮುಂದೆ ಇನ್ನು ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದರು. ಇನ್ನು ಈ ಬಗ್ಗೆ ಮಾತಾಡಿದ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಮುಖ್ಯ ಇಂಜಿನಿಯರ್, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದಲ್ಲಿ ಈಗ ಹಣರ ಕೊರತೆಯಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ 42 ಸ್ಟೋನ್ ಕ್ರಷರ್​ಗಳು ಬಂದ್

ಪ್ರಾಧಿಕಾರದಲ್ಲಿದ್ದ ಕಾರ್ಪಸ್ ಪಂಡ್ ಕೂಡ ಮರಳಿ ಸರಕಾರ ಪಡೆದುಕೊಂಡಿದೆ. ಈ ಹಿನ್ನೆಲೆ ವೇತನ ಕೊಡೋದಕ್ಕೆ ಆಗಿಲ್ಲ ಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಬಿಜೆ ಎನ್ ಎಲ್ ಬೋರ್ಡ್ ಸಿಎಮ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿದೆ. ಕಾರ್ಪಸ್ ಪಂಡ್ ಮರಳಿ ಬರುವ ವಿಶ್ವಾಸವಿದೆ. ಅದು ಬಂದರೆ ಕಾರ್ಮಿಕರ ವೇತನ ನೀಡೋದರ ಜೊತೆಗೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತದೆ ಅಂತಾರೆ.

ಒಂದು ತಿಂಗಳ ಹಿಂದಷ್ಟೆ ಕಸ ತುಂಬುವ ವಾಹನ ಕಾರ್ಮಿಕರು ವೇತನ ನೀಡದ ಕಾರಣ ಕಸ ಒಯ್ಯದೆ ಪ್ರತಿಭಟನೆ ಮಾಡಿದ್ದರು. ಈಗ ನೀರು ಬಿಡುವ ವಾಟರ್ ಮಗ್ ನಗಳು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಇದೆಲ್ಲವೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರಕ್ಕೆ ಕಾರ್ಪಸ್ ಪಂಡ್ ಇಲ್ಲದ ದುಃಸ್ಥಿತಿ ತೋರಿಸುತ್ತಿದೆ. ಸರಕಾರ ಕೂಡಲೆ ಬಿಟಿಡಿಎಗೆ ಆರ್ಥಿಕ ನೆರವು ನೀಡಿ ಇಂತಹ ಸಮಸ್ಯೆ ಸರಿಪಡಿಸಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.