ವರ್ಷಗಳೆ ಉರುಳಿದರು ಆರಂಭವಾಗದ 44.34 ಕೋಟಿ ರೂ. ವೆಚ್ಚದ ಸಿಇಟಿಪಿ ಘಟಕ: ವಿಷಕಾರಿ ನೀರೇ ಕುಡಿಯುತ್ತಿರುವ ಗ್ರಾಮಸ್ಥರು
ಬೀದರ್ ನಗರದ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ 35 ಎಕರೆಯಲ್ಲಿ 44.34 ಕೋಟಿ ರೂ. ವೆಚ್ಚದಲ್ಲಿ ಕಾಮನ್ ಎಪ್ಲೊಯೆಂಟ್ ಟ್ರಿಟ್ ಮೆಂಟ್ ಪ್ಲಂಟ್ ಘಟಕವನ್ನು ಆರಂಭಿಸಲಾಗಿದೆ. ಕಾಮಗಾರಿ ಮುಗಿದು ಎರಡು ವರ್ಷ ಕಳೆದರು ಕಾರ್ಯಾರಂಭ ಮಾಡದ ಕಾರಣ ಇದರ ಪರಿಣಾಮ ವಿಷಯುಕ್ತ ನೀರು ಅಂತರ್ಜಲ ಸೇರುತ್ತಿದೆ. ಕೂಡಲೇ ಸಿಇಪಿಟಿ ಘಟಕ ಆರಂಭಿಸಿ ಜಲಮಾಲಿನ್ಯ ವಾಯುಮಾಲಿನ್ಯವನ್ನ ಕಾಪಾಡಿ ಎಂದು ಜನರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಬೀದರ್, ನವೆಂಬರ್ 01: ಅಲ್ಲಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕೆಮಿಕಲ್ ಶುದ್ಧಿಕರಣ ಘಟಕ ನಿರ್ಮಿಸಲಾಗಿದೆ. ಕೆಮಿಕಲ್ ಶುದ್ಧಿಕರಣ ಘಟಕದ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಕೂಡ ಅದು ಕಾರ್ಯಾರಂಭಮಾಡಿಲ್ಲ. ಹೀಗಾಗಿ ಕಾರ್ಖಾನೆಯಿಂದ ಹೊರಬಿಡುವ ಕೆಮಿಕಲ್ ನೀರು (water) ಅಂತರ್ ಜಲ ಸೇರುತ್ತಿದ್ದು ಜನರ ಆರೋಗ್ಯ ಹದಗೆಡಿಸುತ್ತಿದೆ. ಕೆಮಿಕಲ್ ಕಾರ್ಖಾನೆಯ ಸುತ್ತಮುತ್ತಲಿನ ರೈತರ ಹೊಲದಲ್ಲಿರುವ ಬಾವಿ, ಬೋರ್ ವೆಲ್ ನೀರು ವಾಸನೆ ಬರುತ್ತಿದ್ದು ರೈತರ ಸಂಕಷ್ಟಕ್ಕೆ ತಳ್ಳಿದಂತಾಗಿದೆ.
ಕೆಮಿಕಲ್ ಕಾರ್ಖಾನೆಯಿಂದ ಆ ಭಾಗದ ರೈತರಿಗೆ ಜನರಿಗೆ ಸಮಸ್ಯೆಯಾಗುತ್ತಿತ್ತು. ಕೆಮಿಕಲ್ ಕಾರ್ಖಾನೆಯವರು ಪ್ರತಿದಿನವೂ ಸಾವಿರಾರು ಲೀಟರ್ ವಿಷಯುಕ್ತ ಕೆಮಿಕಲ್ ನೀರನ್ನ ಪಾಳು ಬಿದ್ದ ಬಾವಿ ಬೋರ್ ವೆಲ್ ನಲ್ಲಿ ತಂದು ಹಾಕಲಾಗುತ್ತಿತ್ತು. ಇದರಿಂದಾಗಿ ಪರಿಸರ ಮಾಲೀನ್ಯದ ಜೊತೆಗೆ ಜಲಮಾಲಿನ್ಯ ಕೂಡ ಆಗುತ್ತಿತ್ತು. ಹೀಗಾಗಿ ಕೆಮಿಕಲ್ ನೀರನ್ನ ಶುದ್ಧಗೊಳಿಸಿ ಮರು ಬಳಕೆ ಮಾಡಬೇಕು ಅನ್ನೋ ಉದ್ದೇಶದಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಕೇಂದ್ರ ಸರ್ಕಾರದ ಅನುದಾನದಲ್ಲಿ 44.34 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮನ್ ಎಪ್ಲೊಯೆಂಟ್ ಟ್ರಿಟ್ ಮೆಂಟ್ ಪ್ಲಂಟ್ (CETP) ಘಟಕವನ್ನ ಬೀದರ್ ನಗರದ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ 35 ಎಕರೆಯಲ್ಲಿ ಸ್ಥಾಪನೆ ಮಾಡಿದ್ದಾರೆ.
ಇಸಿಪಿಟಿ ಘಟಕದ ಕಾಮಗಾರಿ ಮುಗಿದು ಎರಡು ವರ್ಷ ಕಳೆದರು ಕಾರ್ಯಾರಂಭ ಮಾಡದ ಕಾರಣ ಇದರ ಪರಿಣಾಮ ವಿಷಯುಕ್ತ ನೀರು ಅಂತರ್ಜಲ ಸೇರುತ್ತಿದೆ. ಇದಿಂದಾಗಿ 2017-18ರಲ್ಲಿ ಕೈಗೆತ್ತಿಕೊಂಡಿದ್ದ ಕೆಲಸ ಎರಡು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಆದರೆ, ಇದುವರೆಗೆ ಅದು ಕೆಲಸವೇ ಆರಂಭಿಸಿಲ್ಲ. ಘಟಕದ ವಸ್ತುಗಳು ಸುತ್ತಮುತ್ತಲಿನ ಕೈಗಾರಿಕೆಗಳು ಹೊರಸೂಸುವ ಹೊಗೆ, ದೂಳಿನಿಂದ ಹಾಳಾಗುತ್ತಿವೆ.
ಇದನ್ನೂ ಓದಿ: ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ-ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಯಾವೂರು ಅದು?
ಸಿಇಪಿಟಿ ಘಟಕವು 1.2 ಎಂಎಲ್‌ಡಿ ರಾಸಾಯನಿಕ ನೀರನ್ನು ಸಂಸ್ಕರಿಸಿ ಪುನರ್ ಬಳಕೆಗೆ ಯೋಗ್ಯಗೊಳಿಸುವ ಸಾಮರ್ಥ್ಯ ಹೊಂದಿದೆ. ಕುಡಿಯಲು ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಸಂಸ್ಕರಿಸಿದ ನೀರು ಬಳಸಬಹುದಾಗಿದೆ. ಈ ಘಟಕ ಇನ್ನೂ ಕಾರ್ಯಾರಂಭ ಮಾಡದರ ಬಗ್ಗೆ ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶೈಲೆಂದ್ರ ಬೆಲ್ದಾಳೆ ಅವರನ್ನ ಕೇಳಿದರೆ ಸಿಪಿಟಿ ಘಟಕ ಕಾರ್ಯಾರಂಭ ಮಾಡದ್ದರಿಂದ ಈ ಭಾಗದ ರೈತರಿಗೆ ಸಮಸ್ಯೆಯಾಗುತ್ತಿದೆ ಈ ಬಗ್ಗೆ ಎಲ್ಲಾ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದನೇ ಆರಂಭಮಾಡಲಿಕ್ಕೆ ಏನು ಸಮಸ್ಯೆಯಿದೆ ಎಂದು ತಿಳಿದು ಶೀಘ್ರದಲ್ಲಿಯೇ ಘಟಕವನ್ನ ಆರಂಭಿಸಿ ಜನರಿಗೆ ಅನುಕೂಲ ಕಲ್ಲಿಸಿಕೊಡುವ ಭರವಸೆಯನ್ನ ನೀಡಿದ್ದರು.
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಿಇಪಿಟಿ ಘಟಕ ಆರಂಭಗೊಳ್ಳದ ಕಾರಣ ಕೈಗಾರಿಕೆಗಳವರು ಅನಿವಾರ್ಯವಾಗಿ ರಾಸಾಯನಿಕ ನೀರನ್ನು ಸಣ್ಣ ನಾಲೆಗಳ ಮೂಲಕ ನೇರವಾಗಿ ಬಯಲು ಪ್ರದೇಶಕ್ಕೆ ಹರಿಸುತ್ತಿದ್ದಾರೆ. ಮತ್ತೆ ಕೆಲವು ಕೈಗಾರಿಕೆಗಳು ಟ್ಯಾಂಕರ್‌ಗಳ ಮೂಲಕ ರಾಸಾಯನಿಕ ಕೊಳಚೆ ನೀರನ್ನು ತಡರಾತ್ರಿ ಹೊಲಗಳ ಸುತ್ತಮುತ್ತ ಹರಿಸಿ ಹೋಗುತ್ತಿದ್ದಾರೆ. ಮತ್ತೆ ಕೆಲವೆಡೆ ನೆಲದಲ್ಲಿ ಗುಂಡಿ, ಕೊಳವೆಬಾವಿಗಳನ್ನು ನಿರ್ಮಿಸಿ ಅದರೊಳಗೆ ವಿಷಕಾರಕ ನೀರು ಹರಿಸುತ್ತಿದ್ದಾರೆ.
ಇದನ್ನೂ ಓದಿ: ಬೀದರ್: ಕಾರ್ಖಾನೆ ರಾಸಾಯನಿಕ ಸೋರಿಕೆ, ಆತಂಕದಲ್ಲಿ ಕೊಳಾರ ಗ್ರಾಮಸ್ಥರು
ಮಳೆ ಬಂದಾಗ ವಿಷಯುಕ್ತ ನೀರು ಎಲ್ಲೆಡೆ ಹರಿದು ಸುತ್ತಮುತ್ತಲಿನ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದಕ್ಕೆ ತಾಜಾ ನಿದರ್ಶನವೆಂದ್ರೆ ಕೋಳಾರ, ಅಣದೂರು, ನಿಜಾಂಪುರ,ಕಮಲಪುರ ಹಜ್ಜರ್ಗಿ ಗ್ರಾಮದ ಸುತ್ತಮುತ್ತ ಎಲ್ಲಿಯೇ ಕೊಳವೆಬಾವಿ, ಬಾವಿಗಳನ್ನ ತೋಡಿದ್ರು ಅಲ್ಲಿ ನೀರು ಸಿಗುತ್ತಿಲ್ಲ ಬದಲಾಗಿ ವಿಷಕಾರಿ ಮೊಲಾಸಿಸ್ ಕೊಳವೆ ಬಾವಿಯಲ್ಲಿ ಬರುತ್ತಿದೆ. ದುರ್ವಾಸನೆ ಇರುವ, ಜೀವಕ್ಕೆ ಕಂಟಕವಾಗುವ ರಾಸಾಯನಿಕಗಳಿರುವ ದ್ರವ ಹೊರಬರುತ್ತಿದೆ.
ಜೀವ ಉಳಿಸುವ ನೀರು ಬರಬೇಕಾದ ಕೊಳವೆಬಾವಿಯಲ್ಲಿ ವಿಷ ಬರುತ್ತಿರುವುದನ್ನ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಮ್ಮ ಹೊಲದ ಬಾವಿ ನೀರಿನಲ್ಲಿ ದುರ್ವಾಸನೆ ಬರುತ್ತದೆ. ಇತರೆ ರೈತರ ಪರಿಸ್ಥಿತಿಯೂ ಹೀಗೆ ಇದೆ. ಹೊಲಕ್ಕೆ ನೀರು ಹರಿಸುವಾಗ ಮೈಮೇಲೆ ಬಿದ್ದು ತುರಿಕೆ ಶುರುವಾಗುತ್ತದೆ. ಇಳುವರಿ ಬಹಳಷ್ಟು ಕುಸಿದಿದೆ. ಹಿಂದೆ ಪ್ರತಿ ಎಕರೆಗೆ 50ರಿಂದ 60 ಟನ್ ಕಬ್ಬು ಬೆಳೆಯುತ್ತಿತ್ತು. ಈಗ ಅದು 25ರಿಂದ 30 ಟನ್‌ಗೆ ಕುಸಿದಿದೆ. ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ. ಈ ಕುರಿತು ಹಲವು ಸಲ ಹೇಳಿದರೂ ಪ್ರಯೋಜನವಾಗಿಲ್ಲ. ಸಿಇಟಿಪಿ ಘಟಕ ಆರಂಭಿಸಿದರೆ ಕೈಗಾರಿಕೆಗಳು ವಿಷಯುಕ್ತ ನೀರು ಬಯಲಿನಲ್ಲಿ ಹರಿಸುವುದು ನಿಲ್ಲಿಸಬಹುದು ಎಂದು ಕೊಳಾರದ ರೈತ ಕುಶಾಲರಾವ ಗೋಳು ತೋಡಿಕೊಂಡರು.
ಕೊಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ಕೆಮಿಕಲ್ ಶುದ್ಧಿಕರನ ಘಟಕ ಕಾರ್ಯಾರಂಭ ಮಾಡದೆ ಇರೋದರಿಂದ ರೈತರಿಗೆ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಕೂಡಲೇ ಸಿಇಪಿಟಿ ಘಟಕ ಆರಂಭಿಸಿ ಜಲಮಾಲಿನ್ಯ ವಾಯುಮಾಲಿನ್ಯವನ್ನ ಕಾಪಾಡಿ ಎಂದು ಜನರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.