ಬೀದರ್: ಕಾರ್ಖಾನೆ ರಾಸಾಯನಿಕ ಸೋರಿಕೆ, ಆತಂಕದಲ್ಲಿ ಕೊಳಾರ ಗ್ರಾಮಸ್ಥರು
ಬೀದರ್ ತಾಲೂಕಿನ ಕೋಳಾರ, ಅಣದೂರು, ನಿಜಾಂಪುರ, ಕಮಲಪುರ ಹಜ್ಜರ್ಗಿ ಗ್ರಾಮದ ಸುತ್ತಮುತ್ತ ಎಲ್ಲಿಯೇ ಕೊಳವೆಬಾವಿ, ಬಾವಿಗಳನ್ನ ತೋಡಿದ್ರು ಅಲ್ಲಿ ನೀರು ಸಿಗುತ್ತಿಲ್ಲ ಬದಲಾಗಿ ವಿಷಕಾರಿ ಮೊಲಾಸಿಸ್ ಕೊಳವೆ ಬಾವಿಯಲ್ಲಿ ಬರುತ್ತಿದೆ. ದುರ್ವಾಸನೆ ಇರುವ, ಜೀವಕ್ಕೆ ಕಂಟಕವಾಗುವ ರಾಸಾಯನಿಕಗಳಿರುವ ದ್ರವ ಹೊರಬರುತ್ತಿದೆ.
ಬೀದರ್, ಅಕ್ಟೋಬರ್ 30: ಬೀದರ್ (Bidar) ಜಿಲ್ಲೆಯ ಕೊಳಾರ ಕೈಗಾರಿಕೆ ಪ್ರದೇಶ (Kolhar Industrial Area) ಕೆಲವೊಬ್ಬರಿಗೆ ಬದುಕು ಕೊಟ್ಟರೆ ಅನೇಕರ ಆರೋಗ್ಯವನ್ನು ಹದೆಗೆಡಿಸುತ್ತಿದೆ. ರಾಸಾಯನಿಕ ಕಾರ್ಖಾನೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ. ಬಾವಿ, ಬೋರ್ ವೆಲ್ ನೀರು ಕೆಟ್ಟ ವಾಸನೆ ಬರುತ್ತಿದ್ದು, ಗ್ರಾಮದ ರೈತರು ಪಿಲ್ಟರ್ ನೀರು ಖರೀದಿಸಿ ಕುಡಿಯಬೇಕಾಗಿದೆ. ಕಾರ್ಖಾನೆಯಿಂದ ಪದೇ ಪದೇ ಕೆಮಿಕಲ್ ಸೋರಿಕೆ, ಗ್ಯಾಸ್ ಲೀಕೇಜ್ ಆತಂಕದಲ್ಲಿ ಗ್ರಾಮಸ್ಥರು ದಿನದೂಡುವಂತಾಗಿದೆ.
ಕಾರ್ಖಾನೆಗಳಿಂದ ನಿರಂತರ ಜಲ ಮಾಲಿನ್ಯ, ವಾಯು ಮಾಲಿನ್ಯವಾಗುತ್ತಿದ್ದರೂ ಜಿಲ್ಲಾಡಳಿತ, ವಾಯು ಮಾಲಿನ್ಯ ಇಲಾಖೆಯ ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿದ್ದಾರೆ. ಕೊಳಾರ ಕೈಗಾರಿಕೆ ಪ್ರದೇಶದಲ್ಲಿ 12 ಹೆಚ್ಚು ಕೆಮಿಕಲ್ ಕಾರ್ಖಾನೆಗಳಿದ್ದು ಅವುಗಳಿಂದ ನಿಂತರವಾಗಿ ವಿಷಕಾರಿ ಗಾಳಿ, ಗ್ಯಾಸ್ ಸೋರಿಕೆಯಿಂದ ಪ್ರದೇಶದಕ್ಕೆ ಹೊಂದಿಕೊಡಿರುವ ಗ್ರಾಮದ ಜನರು ಪ್ರತಿದಿನವೂ ಕೂಡಾ ವಿಷಕಾರಿ ನೀರು, ವಿಷಕಾರಿ ಗಾಳಿ ಸೇವಿಸುತ್ತಲೇ ಕಾಲಕಳೆಯ ಬೇಕಾದ ಸ್ಥಿತಿಯಿಲ್ಲಿ ನಿರ್ಮಾಣವಾಗಿದೆ.
ಗ್ರಾಮದಲ್ಲಿನ ಬಾವಿ ಹಾಗೂ ಬೋರ್ ವೆಲ್ ನೀರನ್ನ ಪರಿಕ್ಷೇಗೊಳಪಡಿಸಿದಾಗ ಇಲ್ಲಿನ ನೀರು ಕುಡಿಯಲು ಯೋಗ್ಯವಿಲ್ಲಾ ಎಂದು ವರದಿ ಬಂದಿದೆ ಆದರೂ ಕೂಡಾ ಇಲ್ಲಿನ ಕೆಮಿಕಲ್ ಕಾರ್ಖಾನೆಗಳನ್ನ ಕೆಮಿಕಲ್ ನೀರನ್ನ ಹಳ್ಳದಲ್ಲಿ ಬಾವಿ, ಬೋರ್ ನಲ್ಲಿ ತಂದು ಬಿಡುವುದನ್ನ ನಿಲ್ಲಿಸಲು ಯಾರಿದಂಲೂ ತಡೆಯಲು ಸಾಧ್ಯವಾಗುತ್ತಿಲ್ಲ. ನಿಂತರವಾಗಿ ಇಲ್ಲಿನ ಕಾರ್ಖಾನೆಗಳಿಂದ ಹೊರ ಬರುತ್ತಿರುವ ಹೊಗೆಯಿಂದ ಪರಿಸರ ಮಾಲಿಣ್ಯಕ್ಕೆ ದಕ್ಕೆಯಾಗುತ್ತಿದೆ. ನಿರಂತರವಾಗಿ ಕಾರ್ಖಾನೆಗಳಿಂದ ಹೊರ ಬರುವ ದಟ್ಟ ಹೊಗೆಯಿಂದ ಸುತ್ತಮುತ್ತಲಿನ ಜನರು ಸಾಕಷ್ಠು ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ.
ಹಗಲು ರಾತ್ರಿಯಿಡೀ ಕಾರ್ಖಾನೆಗಳಿಂದ ದಟ್ಟಹೊಗೆ ಹೊರಬರುತ್ತಿರುವುದರಿಂದ ಪರಿಸರ ಮಾಲಿನ್ಯಕ್ಕೆ ಧಕ್ಕೆಯಾಗುತ್ತಿದ್ದು ಪಕ್ಕದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಪಕ್ಷಿಗಳ ಮೇಲೆ ಹೊಗೆ ಪ್ರಭಾವ ಬೀರುತ್ತಿದೆ. ಕಾನೂನನ್ನ ಗಾಳಿಗೆ ತೂರಿ ಕಾರ್ಖಾನೆಗಳಿಂದ ಹೊಗೆ ಸೂಸುತ್ತಿದ್ದರು ಪರಿಸರ ಮಾಲಿನ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ಕುಳಿತು ಬಿಟ್ಟಿದ್ದಾರೆ. ಕೂಡಲೇ ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇಂತಹ ಕಾರ್ಖಾನೆಗಳನ್ನ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಹಲವು ಗ್ರಾಮಗಳ ಕೊಳವೆ ಬಾವಿಯಲ್ಲಿ ರಾಸಾಯನಿಕ!
ಬೀದರ್ ತಾಲೂಕಿನ ಕೋಳಾರ, ಅಣದೂರು, ನಿಜಾಂಪುರ, ಕಮಲಪುರ ಹಜ್ಜರ್ಗಿ ಗ್ರಾಮದ ಸುತ್ತಮುತ್ತ ಎಲ್ಲಿಯೇ ಕೊಳವೆಬಾವಿ, ಬಾವಿಗಳನ್ನ ತೋಡಿದ್ರು ಅಲ್ಲಿ ನೀರು ಸಿಗುತ್ತಿಲ್ಲ ಬದಲಾಗಿ ವಿಷಕಾರಿ ಮೊಲಾಸಿಸ್ ಕೊಳವೆ ಬಾವಿಯಲ್ಲಿ ಬರುತ್ತಿದೆ. ದುರ್ವಾಸನೆ ಇರುವ, ಜೀವಕ್ಕೆ ಕಂಟಕವಾಗುವ ರಾಸಾಯನಿಕಗಳಿರುವ ದ್ರವ ಹೊರಬರುತ್ತಿದೆ. ಜೀವ ಉಳಿಸುವ ನೀರು ಬರಬೇಕಾದ ಕೊಳವೆಬಾವಿಯಲ್ಲಿ ವಿಷ ಬರುತ್ತಿರುವುದನ್ನ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಗ್ರಾಮಗಳಲ್ಲಿ ಯಾವುದೇ ಬೋರ್ ಆನ್ ಮಾಡಿದ್ರೆ ಇಂತಹ ಕಲುಷಿತ ನೀರು ಹರಿಯುತ್ತಿದೆ. ಅಪ್ಪಿ ತಪ್ಪಿ ಇಂತಹ ನೀರನ್ನ ಕುಡಿದ್ರೆ ಯಮನ ಪಾದ ಸೇರೋದಂತೂ ಗ್ಯಾರಂಟಿ. ದಿನಕ್ಕೆ ಸಾವಿರಾರು ಲೀಟರ್ ಭೂಮಿ ಸೇರುವ ಮೊಲಾಸಿಸ್ ಇಂತಹದ್ದೊಂದು ಅನಾಹುತಕ್ಕೆ ಕಾರಣ ಅನ್ನೋದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಅಪಾರ ಪ್ರಮಾಣದ ತ್ಯಾಜ್ಯ ಭೂಮಿಯ ಒಡಲನ್ನ ಸೇರುತ್ತಿರುವುದರಿಂದ ವಿಷಕಾರಿ ರಾಸಾಯನಿಕಗಳು ಅಂತರ್ಜಲವನ್ನೂ ಕಲುಷಿತಗೊಳಿಸಿವೆ. ವಿಷಕಾರಿ ರಾಸಾಯನಿಕಗಳಾದ ಮ್ಯಾಂಗನೀಸ್, ಫಾಸ್ಫರಸ್, ಕ್ಲೋರೈಡ್, ಪೊಟ್ಯಾಸಿಯಂ, ಜಿಂಕ್ ನಂತಹ ಹತ್ತು ಹಲವಾರು ವಿಷಗಳು ಈ ನೀರಿನಲ್ಲಿ ಸೇರಿಕೊಂಡಿವೆ. ಅಪ್ಪಿ ತಪ್ಪಿ ಈ ನೀರನ್ನ ಸೇವಿಸಿದ್ರೆ ದೇವರ ಪಾದ ಸೇರೋದಂತೂ ಗ್ಯಾರಂಟಿ. ಈಗಾಗಲೇ ಗ್ರಾಮದಲ್ಲಿ ಹತ್ತಾರು ಜಾನುವಾರುಗಳು ಇಂತಹದ್ದೇ ನೀರನ್ನ ಸೇವಿಸಿ ಅಸುನೀಗಿವೆ. ಕುಡಿಯುವ ನೀರೇ ವಿಷವಾಗಿರುವಾಗ ಗ್ರಾಮಸ್ಥರಿಗೆ ಬೇರೆ ದಾರಿಯೇ ಕಾಣದಂತಾಗಿದೆ.
ಇದನ್ನೂ ಓದಿ: ಬೀದರ್-ಯಶವಂತಪುರ ಹೊಸ ರೈಲು ಸಂಚಾರ ಆರಂಭ: ಇಲ್ಲಿದೆ ವೇಳಾಪಟ್ಟಿ
ಇಲ್ಲಿನ ಸಮಸ್ಯೆಯ ಬಗ್ಗೆ ಹತ್ತಾರು ಭಾರೀ ಶಾಸಕರಿಗೆ, ಅಧಿಖಾರಿಗಳಿಗೆ ಹೇಳಿದರು ಕೂಡಾ ನಮ್ಮ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ ಎಂದು ಇಲ್ಲಿನ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ರೈತರಿಗೂ ಕೂಡಾ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಬಾವಿ ಬೋರ್ ವೆಲ್ ನೀರು ವಾಸನೆ ಬರುತ್ತಿದ್ದು ಆ ಕುಡಿಯುತ್ತಿಲ್ಲ ಮನೆಯಿಂದಾ ನೀರು ತಂದು ಕುಡಿಯುತ್ತೇವೆಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.
ಇಲ್ಲಿನ ಸಮಸ್ಯೆಯ ಬಗ್ಗೆ ಹತ್ತಾರು ಬಾರಿ ಶಾಸಕರಿಗೆ, ಅಧಿಕಾರಿಗಳಿಗೆ ಹೇಳಿದರು ಕೂಡಾ ನಮ್ಮ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ ಎಂದು ಇಲ್ಲಿನ ಜನರು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಬೀದರ್ ನ ಪೊಲ್ಯುಷನ್ ಕಂಟ್ರೋಲ್ ಬೋರ್ಡ ನ ಅಧೀಕಾರಿ ಆಪೀಸ್ ಗೆ ಬರೋದಿಲ್ಲ, ಮನೆಯಲ್ಲಿಯೇ ಕುಳಿತುಕೊಂಡು ಕೆಮಿಕಲ್ ಕಾರ್ಖಾನೆಯ ಮಾಲೀಕರ ಜೊತೆಗೆ ಶಾಮೀಲಾಗಿ ಕಾರ್ಖಾನೆಯ ಮಾಲೀಕರು ಏನು ಮಾಡಿದರು ಸುಮ್ಮನ್ನೇ ಕುಳಿತು ಬಿಟ್ಟಿದ್ದಾರೆಂದು ಇಲ್ಲಿನ ಗ್ರಾಮಸ್ಥರು ದೂರುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ