ವಿತರಕರಿಂದ ಅಕ್ಕಿ ಸತ್ಯಾಗ್ರಹ: ನ.10 ರಿಂದ ಪಡಿತರ ಅಂಗಡಿಗಳು ಕ್ಲೋಸ್ ಆಗುವುದು ಗ್ಯಾರಂಟಿ, ಫ್ರೀಡಂ ಪಾರ್ಕಿನಲ್ಲಿ ಹೋರಾಟ
ಇನ್ನು ಇದೇ ತಿಂಗಳ 10 ರವರೆಗೂ ವಿತರಕರು ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ - ಕೊಡೋದಾದ್ರೇ, 10 ಕೆಜಿ ಅಕ್ಕಿ ಕೊಡಿ ಅದನ್ನು ಜನರಿಗೆ ತಲುಪಿಸುತ್ತೇವೆ, ಇದರಿಂದ ಜನರಿಗೂ ಸಹಾಯವಾಗ್ತದೆ, ನಮಗೂ ಕಮಿಷನ್ ಬರೋ ಮೂಲಕ ಸಹಾಯವಾಗ್ತದೆ. ಇಲ್ಲವಾದ್ರೇ ಪಡಿತರ ಅಂಗಡಿ ತೆಗೆಯೋದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಹೊಡೆತಕ್ಕೆ ( siddaramaiah government guarantee) ಶೀಘ್ರದಲ್ಲಿಯೇ ರಾಜ್ಯದಲ್ಲಿರೋ ಬಹುತೇಕ ಎಲ್ಲ ಪಡಿತರ ಅಂಗಡಿಗಳು ಕ್ಲೋಸ್ ಆಗೋ ಸಾಧ್ಯೆತೆಗಳು ಹೆಚ್ಚಾಗಿವೆ. ಯಾಕಂದ್ರೇ, ಕೇವಲ ಕೇಂದ್ರ ಸರ್ಕಾರದ ವತಿಯಿಂದ ಐದು ಕೆ.ಜಿ. ಅಕ್ಕಿ ಬರುತ್ತಿದ್ದು, ರಾಜ್ಯ ಸರ್ಕಾರದ ( Karnataka government) ಬಾಬತ್ತಿನಲ್ಲಿ ಅಕ್ಕಿ ಬರುತ್ತಿಲ್ಲ. ಐದೇ ಕೆಜಿ ಅಕ್ಕಿ ವಿತರಣೆ ಮಾಡೋದ್ರಿಂದ ಪಡಿತರ ವಿತರಕರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ತಿಂಗಳು ಗೋದಾಮಿನಿಂದ ಅಕ್ಕಿಯನ್ನು (rice) ಬಿಡಿಸದೇ ಇರಲು ನಿರ್ಧಾರ ಮಾಡಿದ್ದಾರೆ. ಮುಂದೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಪಡಿತರ ವಿತರಕರ ಸಮಸ್ಯೆ ಏನು..? ನಿಜಕ್ಕೂ ಬಂದ್ ಆಗುತ್ತವಾ ಪಡಿತರ ವಿತರಕ ಅಂಗಡಿಗಳು ? ಅನ್ನೋದರ ಕುರಿತಾದ ಒಂದು ವರದಿ ಇಲ್ಲಿದೆ. ರಾಜ್ಯದಲ್ಲಿ ಒಂದರ ಹಿಂದೆ ಒಂದು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರೋ ರಾಜ್ಯ ಸರ್ಕಾರ ಬಡವರಿಗೆ ( BPL below-poverty-line) family) ನೀಡಬೇಕಾದ ಅನ್ನಭಾಗ್ಯದ (Anna Bhagya distributors) ಅಕ್ಕಿಯನ್ನು ನೀಡ್ತಿಲ್ಲ. ಕೇವಲ ಕೇಂದ್ರ ಸರ್ಕಾರದಿಂದ ಬರುವ 5 ಕೆಜಿ ಅಕ್ಕಿ ಮಾತ್ರ ಬರುತ್ತಿದ್ದು, ಇದನ್ನೊಂದನ್ನೆ ಹಂಚಿಕೆ ಮಾಡಿದರೆ, ವಿತರಕರು ಆರ್ಥಿಕವಾಗಿ ನಷ್ಟಕ್ಕೆ ತುತ್ತಾಗಬೇಕಾಗುತ್ತದೆ.
ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಅಥವಾ ಜೋಳ, ರಾಗಿ ಏನ್ನಾದರೂ ಸೇರಿಸಿ ಒಟ್ಟು ಹತ್ತು ಕೆಜಿ ಬರೋ ಹಾಗೆ ಮಾಡಿ ಎನ್ನುತ್ತಿದ್ದಾರೆ ವಿತರಕರು. ಅಲ್ಲದೇ ರಾಜ್ಯ ಸರ್ಕಾರದ ವತಿಯಿಂದ ಐದು ಕೆಜಿ ಅಕ್ಕಿ ಬದಲಾಗಿ ಗ್ರಾಹಕರ ಖಾತೆಗೆ ಹಣವನ್ನು ನೇರ ಬ್ಯಾಂಕಿಗೆ ವರ್ಗಾವಣೆ (ಡಿಬಿಟಿ) ಮೂಲಕ ಹಾಕುತ್ತಿದೆ. ಆದ್ರೇ, ಇಲ್ಲೂ ಸಮಸ್ಯೆ ಇದೆ – ಈ ಹಣ ಕೆಲವರಿಗೆ ಬಂದ್ರೆ, ಕೆಲವರಿಗೆ ಬರುತ್ತಲೇ ಇಲ್ಲ.
ಅಷ್ಟೇ ಅಲ್ಲ; ಇಲ್ಲಿ ಇನ್ನೂ ಒಂದು ವಿಚಿತ್ರ ಪರಿಸ್ಥಿತಿ ತಲೆದೋರಿದೆ – ಕೆಲವರ ಖಾತೆಗಳಿಗೆ ಹೀಗೆ ಜಮೆಯಾಗುವ ಹಣವು ಅವರ ವೈಯಕ್ತಿಕ ಸಾಲ ಇರೋ ಹಿನ್ನೆಲೆ ಅಕ್ಕಿಯ ಹಣ ಬಂದೊಡನೆ ಬ್ಯಾಂಕಿನವರು ತಕ್ಷಣ ಕಡಿತಗೊಳಿಸುತ್ತಿದ್ದಾರೆ. ಆದರೆ ಇದನ್ನು ಅರಿಯದ ಗ್ರಾಹಕರು ನೇರವಾಗಿ ಬಂದು ವಿತರಕರ ಜೊತೆ ಜಗಳವಾಡುತ್ತಿದ್ದಾರೆ! ಹೀಗಾಗಿ ಗ್ರಾಹಕರಿಗೆ ಹಣ ನೀಡಿದ್ರೆ, ಒಂದು ಕಡೆ ವಿತರಕರಿಗೆ ಕಮಿಷನ್ ಹಣ ಬರೋದಿಲ್ಲ; ಮತ್ತೊಂದು ಕಡೆ ಗ್ರಾಹಕರಿಗೆ ನಷ್ಟವಾಗುತ್ತಿದೆ. ಹೀಗಾಗಿ ಹಣ ಬೇಡ ಅಕ್ಕಿಯನ್ನೇ ಕೊಟ್ಟುಬಿಡಿ ಎನ್ನುತ್ತಿದ್ದಾರೆ ವಿತರಕರು.
ಈ ಮೊದಲು ಸರ್ಕಾರದಿಂದ ಹತ್ತು ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರದಲ್ಲಿ ಅದು ಏಳು ಕೆಜಿಗೆ ಬಂತು. ಇದೀಗ ಐದು ಕೆಜಿಗೆ ಇಳಿದಿದೆ. ಇದು ಹೀಗೆಯೇ ಮುಂದುವರಿದ್ರೇ ಜೊತೆ ಕಮಿಷನ್ ಇಲ್ಲದೇ ಗ್ರಾಹಕರ ಜೊತೆಗೆ, ಪಡಿತರ ವಿತರಕರೂ ಸಹ ಬೀದಿಗೆ ಬರಲಿದ್ದಾರೆ. ಇನ್ನು ಇದೇ ನವೆಂಬರ್ ತಿಂಗಳ ಹತ್ತನೇ ತಾರಿಖಿನವರೆಗೂ ವಿತರಕರು ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ.
ಕೊಡೋದಾದ್ರೇ, ಹತ್ತು ಕೆಜಿ ಅಕ್ಕಿ ಕೊಡಿ ಅದನ್ನು ಜನರಿಗೆ ತಲುಪಿಸುತ್ತೇವೆ, ಇದರಿಂದ ಜನರಿಗೂ ಸಹಾಯವಾಗ್ತದೆ, ನಮಗೂ ಕಮಿಷನ್ ಬರೋ ಮೂಲಕ ಸಹಾಯವಾಗ್ತದೆ. ಇಲ್ಲವಾದ್ರೇ ಪಡಿತರ ಅಂಗಡಿ ತೆಗೆಯೋದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿರೋ ಎಲ್ಲಾ ಪಡಿತರ ವಿತರಕರು ಇದೇ ತಿಂಗಳ ಏಳನೇ ತಾರೀಖು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಪ್ರತಿಭಟನೆ ಮಾಡೋ ಪ್ಲಾನ್ ಮಾಡಿಕೊಂಡಿದ್ದಾರೆ.
ಇನ್ನೂ ಈಗಾಗಲೇ ಗೋದಾಮಿನಿಂದ ಅಕ್ಕಿ ಬಿಡಿಸದೇ ಇರೋ ವಿತರಕರು ಸರ್ಕಾರಕ್ಕೆ ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದಾರೆ. ಪ್ರತಿಭಟನೆಗೂ ಸರ್ಕಾರ ಜಗ್ಗದೆ ಇದ್ರೇ, ಹತ್ತನೇ ತಾರಿಖೀನಿಂದ ಪ್ರತಿಭಟನೆ ತೀವ್ರಗೊಳಿಸೋದರ ಜೊತೆಗೆ ಅಂಗಡಿಯನ್ನೇ ತೆಗೆಯದಿರಲು ನಿರ್ಧಾರ ಮಾಡೋದಾಗಿ ಹೇಳ್ತಿದ್ದಾರೆ.
ವರದಿ: ಸಂತೋಷ್ ಚಿನಗುಂಡಿ, ಟಿವಿ 9 ಬಳ್ಳಾರಿ
Published On - 5:24 pm, Sat, 4 November 23