Ballari News: ಬ್ರೇಕ್​ ಫೇಲ್​ ಆಗಿ ಬಸ್​​ ಪಲ್ಟಿ, 8 ಪ್ರಯಾಣಿಕರಿಗೆ ಗಾಯ: ಓರ್ವನ ಸ್ಥಿತಿ ಚಿಂತಾಜನಕ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 05, 2022 | 2:25 PM

ನಕಲಿ ವೈದ್ಯನ ಅವೈಜ್ಞಾನಿಕ ಶಸ್ತ್ರಚಿಕಿತ್ಸೆಯಿಂದ ಗರ್ಭಾವಸ್ಥೆಯಲ್ಲಿದ್ದ ಎಮ್ಮೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕನಸಗೇರಿ ಗ್ರಾಮದಲ್ಲಿ ನಡೆದಿದೆ.

Ballari News: ಬ್ರೇಕ್​ ಫೇಲ್​ ಆಗಿ ಬಸ್​​ ಪಲ್ಟಿ, 8 ಪ್ರಯಾಣಿಕರಿಗೆ ಗಾಯ: ಓರ್ವನ ಸ್ಥಿತಿ ಚಿಂತಾಜನಕ
ಬ್ರೇಕ್​ ಫೇಲ್​ ಆಗಿ ಪಲ್ಟಿಯಾದ ಬಸ್​​
Follow us on

ಬಳ್ಳಾರಿ: ಬ್ರೇಕ್​ ಫೇಲ್​ (break Failure) ಆಗಿ ಬಸ್​​ ಪಲ್ಟಿಯಾಗಿದ್ದು, 8 ಪ್ರಯಾಣಿಕರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬೈರಾಪುರ ಕ್ರಾಸ್ ಬಳಿ ನಡೆದಿದೆ. ಬಸ್​ನಲ್ಲಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್​​ನ​​ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿಯಾಗಿದ್ದು, ಸಿಂಧನೂರಿನಿಂದ ಬಳ್ಳಾರಿಗೆ ಸಾರಿಗೆ ಬಸ್ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ತೆಕ್ಕಲಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ; ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆ: 11 ಆರೋಪಿಗಳ ಬಂಧನ, 2,664 ನಕಲಿ ಛಾಪಾ ಕಾಗದ ಜಪ್ತಿ

ನಕಲಿ ವೈದ್ಯನ ಅವೈಜ್ಞಾನಿಕ ಶಸ್ತ್ರಚಿಕಿತ್ಸೆ: ಎಮ್ಮೆ, ಕರು ಸಾವು

ಬಾಗಲಕೋಟೆ: ನಕಲಿ ವೈದ್ಯನ ಅವೈಜ್ಞಾನಿಕ ಶಸ್ತ್ರಚಿಕಿತ್ಸೆಯಿಂದ ಗರ್ಭಾವಸ್ಥೆಯಲ್ಲಿದ್ದ ಎಮ್ಮೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕನಸಗೇರಿ ಗ್ರಾಮದಲ್ಲಿ ನಡೆದಿದೆ. 10 ತಿಂಗಳ ಎಮ್ಮೆಗೆ ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ಮಾಡಿದ್ದು,
ತೀವ್ರ ರಕ್ತಸ್ರಾವದಿಂದ ಎಮ್ಮೆ ಮತ್ತು ಕರು ಸಾವನ್ನಪ್ಪಿದೆ. ಕನಸಗೇರಿ ಗ್ರಾಮದ ಹನುಮಂತ ಬಾಳಪ್ಪ ಪೂಜೇರಿ ಎಂಬುವರಿಗೆ ಎಮ್ಮೆ ಸೇರಿದೆ. ಘಟನೆ ಬಹಿರಂಗ ಹಿನ್ನೆಲೆ ನಕಲಿ ವೈದ್ಯನ ವಿರುದ್ಧ ಮುಧೋಳ ಪಶು ವೈದ್ಯಾಧಿಕಾರಿಗಳಿಂದ ಲೋಕಾಪುರ ಠಾಣೆಯಲ್ಲಿ ದೂರು ನೀಡಲಾಗಿದ್ದು, ನಕಲಿ ವೈದ್ಯನನ್ನು ಲೋಕಾಪುರ ಪೊಲೀಸರು ಬಂಧಿಸಿದ್ದಾರೆ. ಶಿವಾನಂದ ಮಲ್ಲಪ್ಪ ರುದ್ರಪ್ಪನವರ ಬಂಧಿತ ನಕಲಿ ವೈದ್ಯ. ಬಂಧಿತ ನಕಲಿ ವೈದ್ಯ ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮಳಗಲಿ ಗ್ರಾಮದವರು ಎನ್ನಲಾಗುತ್ತಿದೆ.

ಮಾನಸಿಕ ಖಿನ್ನತೆಯಿಂದ ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಹುಬ್ಬಳ್ಳಿ: ಮಾನಸಿಕ ಖಿನ್ನತೆಯಿಂದ ಬಾವಿಗೆ ಹಾರಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುಡಗೇರಿಯಲ್ಲಿ ಜರುಗಿದೆ. ಗುಡಗೇರಿ ಗ್ರಾಮದ ಬಾಹುಬಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಾಲೂಕಿನ ಗುಡಗೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮಾನಸಿಕವಾಗಿ ನೊಂದಿದ್ದು, ನಿನ್ನೇ ತಡ ರಾತ್ರಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು,ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ; Bengaluru: ಬುದ್ದಿಮಾಂದ್ಯ ಮಗು ಎಂದು ನಾಲ್ಕನೇ ಮಹಡಿಯಿಂದ ಎಸೆದ ತಾಯಿ

ನಿಧಿ ಆಸೆಗಾಗಿ ದೇವಸ್ಥಾನದ ಮೂರ್ತಿಯನ್ನೆ ಭಗ್ನಗೊಳಿದ ಖದೀಮರು

ಕೊಪ್ಪಳ: ನಿಧಿ ಆಸೆಗಾಗಿ ದೇವಸ್ಥಾನದ ಮೂರ್ತಿಯನ್ನೆ ಖದೀಮರು ಕಿತ್ತಿರುವಂತಹ ಘಟನೆ ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ಬಳಿ ನಡೆದಿದೆ. ಬೆಟ್ಟದ ಮೇಲಿರುವ ವಿಜಯನಗರ ಸಾಮ್ರಾಜ್ಯದ ಕಾಲದ ಐತಿಹಾಸಿಕ ದೇವಸ್ಥಾನ ಶಿವಲಿಂಗಕ್ಕೆ ಭಗ್ನವಾಗಿದೆ. ನಿಧಿಗಾಗಿ ಶೋಧಕ್ಕಾಗಿ ಶಿವಲಿಂಗ ಪ್ರತಿಷ್ಠಾನೆ ಸ್ಥಳವನ್ನು ಅಗೆದಿದ್ದಾರೆ. ಕಬ್ಬಿಣದ ಸಲಕರಣೆಗಳನ್ನು ಸ್ಥಳದಲ್ಲಿ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಬೆಳಗ್ಗೆ‌ ಪೂಜೆಗೆಂದು ಬಂದಿದ್ದ ಅರ್ಚಕ ಕೃಷ್ಣ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ‌ ಮುನಿರಾಬಾದ್ ಪೊಲೀಸರ ಭೇಟಿ ಪರಿಶೀಲನೆ ಮಾಡಿದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.