ನನಗೆ ಯಾವಾಗ ಯಾವಾಗ ಗಾಯ ಆಗಿದೆಯೋ, ಕೈ ಮುರಿದಿದೆಯೋ ಆಗೆಲ್ಲಾ ನನಗೆ ಅದೃಷ್ಟ ಒಲಿದಿದೆ! ಕಾಂಗ್ರೆಸ್ ಶಾಸಕ ಇ ತುಕಾರಾಂ
ಸಚಿವ ಸಿ.ಸಿ ಪಾಟೀಲ ಕಾರ್ಯವೈಖರಿಗೆ ಶಾಸಕ ತುಕಾರಾಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವ ಸಿ.ಸಿ ಪಾಟೀಲ್ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನ ಅಳವಡಿಸಿಕೊಂಡ ಸಚಿವರಾಗಿದ್ದಾರೆ.
ಬಳ್ಳಾರಿ: ಜಿಲ್ಲೆಯಲ್ಲಿ ಇಂದು ಲೋಕೋಪಯೋಗಿ ನೂತನ ಗೆಸ್ಟ್ ಹೌಸ್ ಉದ್ಘಾಟನೆ ಮಾಡಲಾಗಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಡೂರು ಶಾಸಕ ಇ ತುಕಾರಾಂ( E Tukaram) ಸಚಿವ ಸಿ.ಸಿ ಪಾಟೀಲರನ್ನು(CC Patil) ಹಾಡಿ ಹೊಗಳಿದ್ದಾರೆ. ಹಾಗೂ ತನ್ನ ಕೈ ಮುರಿತದ ಬಗ್ಗೆ ನಗೆ ಚಟಾಕಿ ಹಾರಿಸಿದ್ದಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಇ ತುಕಾರಾಂ, ನನ್ನ ಕೈ ಮುರಿದಿದೆ. ಹೀಗಾಗಿ ಬ್ಯಾಂಡೇಜ್ ಹಾಕಿದ್ದೇನೆ. ನನಗೆ ಯಾವಾಗ ಗಾಯ ಆಗಿದೆಯ್ಯೋ, ಕೈ ಮುರಿದಿದೇಯ್ಯೋ ಆಗೆಲ್ಲಾ ನನಗೆ ಅದೃಷ್ಟ ಒಲಿದಿದೆ. ಇದು ಸಿದ್ದರಾಮೋತ್ಸವದ ಎಪೆಕ್ಟ್ ಅಲ್ಲ. ಹಿಂದೆ ಕೈ ಮುರಿದಾಗ ಸಚಿವ ಆದೆ. ನಂತರ ಸಿದ್ದರಾಮಯ್ಯನವರ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಆದೆ. ಈಗ ಕೈಗೆ ಕ್ರಾಕ್ ಆಗಿದೆ. ಮುಂದೆನೂ ಅದೃಷ್ಟ ಒಲಿಯಬಹುದು ಎಂದು ಶಾಸಕ ಇ ತುಕಾರಾಂ ನಗೆ ಚಟಾಕಿ ಹಾರಿಸಿದ್ರು.
ಸಚಿವ ಸಿ.ಸಿ ಪಾಟೀಲ ಕಾರ್ಯವೈಖರಿಗೆ ಶಾಸಕ ತುಕಾರಾಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವ ಸಿ.ಸಿ ಪಾಟೀಲ್ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನ ಅಳವಡಿಸಿಕೊಂಡ ಸಚಿವರಾಗಿದ್ದಾರೆ. ಸಿ.ಸಿ ಪಾಟೀಲ ಎಲ್ಲ ಪಕ್ಷದ ಶಾಸಕರಿಗೂ ಸಮಾನವಾಗಿ ಅನುದಾನವನ್ನ ನೀಡಿದ್ದಾರೆ. ಬಸವಣ್ಣನವರ ಪ್ರಕಾರ ಕಾಯಕವೇ ಕೈಲಾಸ ಎಂದು ಕಾರ್ಯ ಮಾಡುತ್ತಿದ್ದಾರೆ ಎಂದು ಶಾಸಕ ಇ ತುಕಾರಾಂ ಸಚಿವ ಸಿ.ಸಿ ಪಾಟೀಲ್ರನ್ನ ಹಾಡಿ ಹೊಗಳಿದ್ದಾರೆ.