ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆ: 11 ಆರೋಪಿಗಳ ಬಂಧನ, 2,664 ನಕಲಿ ಛಾಪಾ ಕಾಗದ ಜಪ್ತಿ

ಛಾಪಾ ಕಾಗದ ಮೂಲಕ ಪ್ರಾಪರ್ಟಿಗಳ ಜಿಪಿಎ ಮಾಡುತಿದ್ರು. ನಾಲ್ಕು ಕಡೆ ಈ ನಕಲಿ ಛಾಪಾ ಕಾಗದ ಬಳಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆ: 11 ಆರೋಪಿಗಳ ಬಂಧನ, 2,664 ನಕಲಿ ಛಾಪಾ ಕಾಗದ ಜಪ್ತಿ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Aug 05, 2022 | 1:46 PM

ಬೆಂಗಳೂರು: ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ (printing paper) ಹಗರಣವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದು, ಹಗರಣದಲ್ಲಿ ಭಾಗಿಯಾಗಿದ್ದ ಒಟ್ಟು ಹನ್ನೊಂದು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 2664 ನಕಲಿ ಛಾಪಾ ಕಾಗದಗಳನ್ನು ವಶಕ್ಕೆ ಪಡೆಯಲಾಗಿದೆ. ಮೈಸೂರು ಒಡೆಯರ ಕಾಲದಿಂದ ಇವತ್ತಿನವರೆಗಿನ ಛಾಪಾ ಕಾಗದಗಳು ಪತ್ತೆಯಾಗಿವೆ. ಛಾಪಾ ಕಾಗದ ಮೂಲಕ ಪ್ರಾಪರ್ಟಿಗಳ ಜಿಪಿಎ ಮಾಡುತಿದ್ರು. ನಾಲ್ಕು ಕಡೆ ಈ ನಕಲಿ ಛಾಪಾ ಕಾಗದ ಬಳಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 1990, 1995, 2002, 2009 ಇಸವಿಯಲ್ಲಿ ರಿಜಿಸ್ಟರ್ ನಡೆದಿರುವಂತೆ ದಾಖಲಾತಿ ಸೃಷ್ಟಿ ಮಾಡಿದ್ದು ಬಯಲಿಗ ಬಂದಿದೆ. ನಾಲ್ಕು ಕೇಸ್​ನಲ್ಲಿ ಕೋಟ್ಯಾಂತರ ರೂ. ಬಾಳುವ ಆಸ್ತಿಗಳನ್ನು ಜಿಪಿಎ ಮಾಡಲಾಗಿದೆ. ರಾಜರ ಕಾಲದ ಪೇಪರ್​ಗಳನ್ನು ಒಂದು ಪೇಪರ್​ನ್ನು ಐದರಿಂದ ಎಂಟು ಸಾವಿರಕ್ಕೆ ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ; Bengaluru: ಬುದ್ದಿಮಾಂದ್ಯ ಮಗು ಎಂದು ನಾಲ್ಕನೇ ಮಹಡಿಯಿಂದ ಎಸೆದ ತಾಯಿ

ಆರೋಪಿಗಳಿಂದ ನೂರಕ್ಕು ಹೆಚ್ಚು ಸೀಲ್​ಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕಲಿ ಛಾಪಾ ಕಾಗದಕ್ಕೆ ನಕಲಿ ಸೀಲ್ ಹಾಕಿ ಬಳಕೆ ಮಾಡಿದ್ದಾರೆ. ಯಾವ ಯಾವ ಇಸವಿಯ ನಕಲಿ ದಾಖಲೆ ಸೃಷ್ಟಿ ಮಾಡ್ಬೇಕಿತ್ತು ಆ ಇಸವಿಯಲ್ಲಿ ಯಾವ ರೀತಿ ಸೀಲ್ ಇದೆಯೇ ಅದೇ ರೀತಿ ಸೀಲ್ ತಯಾರು ಮಾಡಲಾಗಿದೆ. ಎರಡೂ ರೀತಿಯಲ್ಲಿ ಆರೋಪಿಗಳು ವಂಚನೆ ಮಾಡಿದ್ದರು. ನಕಲಿ ಛಾಪಾ ಕಾಗದ ಬಳಿಸಿ ನಕಲಿ ದಾಖಲಾತಿಗಳನ್ನು ತಯಾರು ಮಾಡಿ ಆಸ್ತಿ ಪತ್ರ, ಜಿಪಿಎ ಮಾಡಿರುವುದು ಬಯಲಿಗೆ ಬಂದಿದೆ. ಕಂದಾಯ ಭವನದಲ್ಲಿ ಈ ದಂಧೆಯಿಂದ ಸಾಕಷ್ಟು ನಕಲಿ ದಾಖಲೆಗಳು ಪತ್ತೆಯಾಗಿವೆ. ಆರೋಪಿಗಳ ಪ್ರಕಾರ 1 ಕೋಟಿ ಮೂವತ್ತಮೂರು ಲಕ್ಷದ ಇಪತ್ತು ಸಾವಿರ ರೂ ಬಾಳುವ ನಕಲಿ ಛಾಪಾ ಕಾಗದಗಳು ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ರಾಮ್ ಜೀ ಗ್ಯಾಂಗ್

ಬೇರೆಡೆ ಗಮನ ಸೆಳೆದು ಕೃತ್ಯ ಎಸಗೊದ್ರಲ್ಲಿ ಕುಖ್ಯಾತಿ ಹೊಂದಿದ್ದ ರಾಮ್ ಜೀ ಗ್ಯಾಂಗ್ ಬೆಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದೆ. ಭಾರತದಾದ್ಯಂತ ಕಳವು ಮಾಡುವಲ್ಲಿ ಕುಖ್ಯಾತ ಗ್ಯಾಂಗ್ ಫೇಮಸ್​ ಆಗಿದ್ದು, ರಾಮ್ ಜೀ ಗ್ಯಾಂಗ್​ನ ಇಬ್ಬರು ಸದಸ್ಯರ ಬಂಧನವಾಗಿದೆ. ನಟರಾಜ್, ಗೋಕುಲ್ ಬಂಧಿತ ಆರೋಪಿಗಳು. ನಿಲ್ಲಿಸಿದ್ದ ಕಾರ್ ಗಾಜು ಹೊಡೆದು ಗ್ಯಾಂಗ್​ನ ಇಬ್ಬರು ಆರೋಪಿಗಳು ದೊಚ್ಚಿದ್ದರು. ಆರೋಪಿಗಳ ಬಂಧನದ ಬಳಿಕ ಈ ಹಿಂದಿನ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಬಂಧಿತರು ಈ ಹಿಂದೆ ತಮಿಳುನಾಡು, ರಾಜಾಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣ ಹೊಂದಿದ್ದಾರೆ. ಬಂಡೇಪಾಳ್ಯ ಪೊಲೀಸರಿಂದ ಆರೋಪಿಗಳ ಬಂಧನ ಮಾಡಲಾಗಿದೆ.

ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ನೆಲಮಂಗಲ: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ರಾಷ್ಟ್ರೀಯ ಹೆದ್ದಾರಿ4 ಮಾದನಾಯಕನಹಳ್ಳಿ ಬಳಿ ನಡೆದಿದೆ. ನೆಲಮಂಗಲದ ಮಂಜುನಾಥ್(40)ಮೃತ ದುರ್ದೈವಿ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತುಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada