AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವರ ಹೆಸರಿನಲ್ಲಿ ನಕಲಿ ನೇಮಕಾತಿ ಅಧಿಸೂಚನೆ ಪ್ರಕರಣ: ಕನ್ನಡ ಶಿಕ್ಷಕ ಜ್ಞಾನದೇವ್ ಜಾಧವ್​ ಬಂಧನ

ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಸಚಿವರ ಹೆಸರಿನಲ್ಲಿ ನಕಲಿ ನೇಮಕಾತಿ ಅಧಿಸೂಚನೆ ಪ್ರಕರಣ: ಕನ್ನಡ ಶಿಕ್ಷಕ ಜ್ಞಾನದೇವ್ ಜಾಧವ್​ ಬಂಧನ
ಕನ್ನಡ ಶಿಕ್ಷಕ ಜ್ಞಾನದೇವ್ ಜಾಧವ್ ಬಂಧಿತ ಆರೋಪಿ
TV9 Web
| Edited By: |

Updated on:Aug 05, 2022 | 10:19 AM

Share

ಬೆಂಗಳೂರು: ಸಚಿವರ ಹೆಸರಿನಲ್ಲಿ ನಕಲಿ (Duplicate) ನೇಮಕಾತಿ ಅಧಿಸೂಚನೆ ಪ್ರಕರಣ ಸಂಬಂಧ ಸಂಜಯನಗರ ಪೊಲೀಸರು ಜ್ಞಾನದೇವ್ ಜಾಧವ್ ಎಂಬಾತನನ್ನು ಬಂಧನ ಮಾಡಿದ್ದಾರೆ. ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ ಮಾಡಲಾಗಿತ್ತು. ಸಚಿವರಿಗೆ ಕನ್ನಡ ಕಲಿಸುತ್ತಿದ್ದ ಆರೋಪಿ ಜ್ಞಾನದೇವ್ ಜಾಧವ್, 2019ರಲ್ಲಿ ಕನ್ನಡ ಶಿಕ್ಷಕರಾಗಿ ಪ್ರಭು ಚೌಹಾಣ್ ನೇಮಿಸಿಕೊಂಡಿದ್ದರು. ಸಚಿವರು ನನಗೆ ಆಪ್ತರೆಂದು ಹೇಳಿ ಹಲವು ಅಭ್ಯರ್ಥಿಗಳಿಗೆ ವಂಚನೆ ಮಾಡಿದ್ದು, ಇಲಾಖೆಯ FDA, SDA ಹುದ್ದೆಗಳಿಗೆ ನಕಲಿ ಆದೇಶ ಪ್ರತಿ ಸೃಷ್ಟಿ ಮಾಡಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಿದ 63 ಜನರನ್ನು ಆರೋಪಿ ಆಯ್ಕೆ ಮಾಡಿದ್ದ. 2 ರಿಂದ 4 ಲಕ್ಷ ರೂ.ಯಂತೆ 25 ಲಕ್ಷ ಹಣ ಪಡೆದು ವಂಚಿಸಿದ್ದ. ಸರ್ಕಾರಿ ನೇಮಕಾತಿ ಪ್ರಕ್ರಿಯೆ ಮಾದರಿಯಲ್ಲೇ ನಕಲಿ ನೇಮಕಾತಿ ಮಾಡಿದ್ದು, ಜುಲೈ 30ರೊಳಗೆ ಆಕ್ಷೇಪಗಳಿದ್ದರೆ ಅರ್ಜಿ ಸಲ್ಲಿಸುವಂತೆ ಇಲಾಖೆ ಹೆಸರಿನಲ್ಲಿ ಆದೇಶ ಹೊರಡಿಸಿದ್ದ. ಕೆಲ ಅಭ್ಯರ್ಥಿಗಳು ಇಲಾಖೆಗೆ ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ; ಮಾರುಕಟ್ಟೆ, ಜನನಿಬಿಡ ಪ್ರದೇಶದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ ಪೊಲೀಸ್​ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್

ಮಕ್ಕೆ ಕಂದಾಯ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ಸೂಚನೆ

ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಅಕ್ಷಯ್ ಬಾಹುಬಲಿ ಲಕ್ಕಣ್ಣಗೌಡರು ಎಂಬುವವರನ್ನು ಉಪ ತಹಾಸಿಲ್ದಾರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ನಕಲಿ ನೇಮಕಾತಿ ಆದೇಶ ಹೊರಡಿಸಲಾಗಿದೆ. ಉಪ ತಹಾಸಿಲ್ದಾರ್ ಹುದ್ದೆ ನೇಮಕಾತಿ ಮೂಲಕ ಭಡ್ತಿ ಮಾಡಲು ಸಾಧ್ಯವಿಲ್ಲ. ಇದು ಪೂರ್ಣ ಪ್ರಮಾಣದ ಮುಂಭಡ್ತಿ ಹುದ್ದೆ. ಆದರೆ ಪ್ರಧಾನ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಆದೇಶದ ಪ್ರತಿಯನ್ನ ಕಿಡಿಗೇಡಿಗಳು ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಕಛೇರಿಯಿಂದಲೇ ನಕಲಿ ಆದೇಶ ಪ್ರತಿ ಹೊರಡಿಸಲಾಗಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದ್ದವು.

ಇದನ್ನೂ ಓದಿ: BBMP Reservation: ಬಿಬಿಎಂಪಿ ವಾರ್ಡ್​ವಾರು ಮೀಸಲಾತಿ ಪಟ್ಟಿ ಪ್ರಕಟ, ಕಾಂಗ್ರೆಸ್​ಗೆ ಆಘಾತ

ನಕಲಿ ಆದೇಶ ಹೊರಡಿಸಿದ್ದ ಹಿನ್ನಲೆ ಕಾನೂನು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸುದರ್ಶನ್​ರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಕ್ಷಯ ಬಾಹುಬಲಿ ಲಕ್ಕನಗೌಡರ್ ಸೇರಿದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹೆಸರನ್ನ ದುರ್ಬಳಕೆ ಮಾಡಿಕೊಂಡವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

Published On - 10:18 am, Fri, 5 August 22