BBMP Reservation: ಬಿಬಿಎಂಪಿ ವಾರ್ಡ್ವಾರು ಮೀಸಲಾತಿ ಪಟ್ಟಿ ಪ್ರಕಟ, ಕಾಂಗ್ರೆಸ್ಗೆ ಆಘಾತ
ಹಲವು ವಾರ್ಡ್ಗಳಲ್ಲಿ ಮೀಸಲಾತಿ ಬದಲಾವಣೆಯಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಆಘಾತ ಎದುರಾಗಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ವಾರ್ಡ್ವಾರು ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಹಲವು ವಾರ್ಡ್ಗಳಲ್ಲಿ ಮೀಸಲಾತಿ ಬದಲಾವಣೆಯಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಆಘಾತ ಎದುರಾಗಿದೆ. ಹಲವು ಪ್ರಮುಖ ಕಾಂಗ್ರೆಸ್ ನಾಯಕರ ವಾರ್ಡ್ಗಳಿಗೆ ಮಹಿಳಾ ಮೀಸಲಾತಿ ಬಂದಿದೆ.
ಬಿಬಿಎಂಪಿಯಲ್ಲಿ ಆಡಳಿತ ಪಕ್ಷದ ಮಾಜಿ ನಾಯಕರಾಗಿದ್ದ ಶಿವರಾಜ್ ಅವರ ವಾರ್ಡ್ಗೆ ಎಸ್ಸಿ ಮೀಸಲಾತಿ ಬಂದಿದೆ. ಈ ಹಿಂದೆ ಇಲ್ಲಿ ಬಿಸಿಎ ಮೀಸಲಾತಿ ಇತ್ತು. ಅಕ್ಕಪಕ್ಕದ ವಾರ್ಡ್ಗಳಲ್ಲೂ ಇವರಿಗೆ ಸ್ಪರ್ಧಿಸಲು ಸಾಧ್ಯವಾಗದಂತೆ ಮಹಿಳಾ ಮೀಸಲಾತಿ ಘೋಷಿಸಲಾಗಿದೆ. ಮಾಜಿ ಮೇಯರ್ ಪದ್ಮಾವತಿ ವಾರ್ಡ್ಗೆ ಬಿಸಿಎ ಮೀಸಲಾತಿ ಇತ್ತು. ಈ ಹಿಂದೆ ಇಲ್ಲಿ ಬಿಸಿಬಿ ಮೀಸಲಾತಿಯಿತ್ತು. ಪದ್ಮಾವತಿ ಸ್ಪರ್ಧಿಸಲು ಅವಕಾಶ ಸಿಗಬಾರದು ಎನ್ನುವ ಕಾರಣಕ್ಕೆ ಹೀಗೆ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಶಂಕರಮಠ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಶಿವರಾಜು ಸ್ಪರ್ಧಿಸುವ ಸಾಧ್ಯತೆಯಿತ್ತು. ಅಲ್ಲಿ ಸಾಮಾನ್ಯ ವರ್ಗಕ್ಕಿದ್ದ ಮೀಸಲಾತಿಯನ್ನು ತೆಗೆದು ಎಸ್ಸಿಗೆ ನಿಗದಿಪಡಿಸಲಾಗಿದೆ. ಇದು ಸಚಿವ ಹಾಗೂ ಕ್ಷೇತ್ರ ಶಾಸಕ ಕೆ.ಗೋಪಾಲಯ್ಯ ಅವರ ರಾಜಕೀಯ ಚಾಣಾಕ್ಷ ನಡೆ ಎಂದೇ ಹೇಳಲಾಗುತ್ತಿದೆ.
ಹೆಬ್ಬಾಳದ ಮನೋರಾಯನಪಾಳ್ಯ ವಾರ್ಡ್ನ ಅಬ್ದುಲ್ ವಾಜೀದ್ ಅವರಿಗೂ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ. ಆ ವಾರ್ಡ್ ಅನ್ನು ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಿರಿಸಲಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜಯಮಹಲ್ ವಾರ್ಡ್ನಿಂದ ಸ್ಪರ್ಧಿಸುತ್ತಿದ್ದ ಗುಣಶೇಖರ್ಗೆ ಸ್ಪರ್ಧಿಸುವ ಅವಕಾಶ ನಿರಾಕರಿಸಲಾಗಿದೆ. ಅವರ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪರಮಾಪ್ತ ಮಡಿವಾಳ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ರೆಡ್ಡಿ ವಾರ್ಡ್ ಅನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶ್ ನಗರ ವಾರ್ಡ್ನಿಂದ ಸ್ಪರ್ಧಿಸುತ್ತಿದ್ದ ಮಾಜಿ ಮೇಯರ್ ಪದ್ಮಾವತಿ ವಾರ್ಡ್ನ ಮೀಸಲಾತಿಯನ್ನು ಹಿಂದುಳಿದ ವರ್ಗಕ್ಕೆ (ಎ) ಬದಲಿಸಲಾಗಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ನ ಮತ್ತೋರ್ವ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ವಾರ್ಡ್ ಸಿಗದಂತೆ ಮಾಡಲಾಗಿದೆ. ಭೈರಸಂದ್ರ ವಾರ್ಡ್ನಿಂದ ಸ್ಪರ್ಧಿಸುವ ಆಸೆ ಇರಿಸಿಕೊಂಡಿದ್ದ ನಾಗರಾಜ್ ಅವರಿಗೂ ಅವಕಾಶ ಇಲ್ಲವಾಗಿದೆ. ಗುರಪ್ಪನಪಾಳ್ಯ ವಾರ್ಡ್ನಿಂದ ಆಯ್ಕೆಯಾಗುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಮಹಮದ್ ರಿಜ್ವಾನ್ಗೂ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆಯೇ ಇಲ್ಲದಂತಾಗಿದೆ.