Siddaramotsava: ಸಿದ್ದರಾಮೋತ್ಸವದಲ್ಲಿ ಕಾಂಗ್ರೆಸ್ ಚಿಹ್ನೆಯನ್ನೇ ಬಳಸಿಲ್ಲ! ಪಕ್ಷಕ್ಕೆ ಡ್ಯಾಮೇಜ್? ಹೈಕಮಾಂಡ್‌ಗೆ ದೂರು
Siddaramaiah: ಪಕ್ಷದ ಚಿಹ್ನೆಯನ್ನು ಸಿದ್ದರಾಮೋತ್ಸವದಿಂದ ದೂರ ಇಟ್ಟಿರುವುದು ಎಷ್ಟರ ಮಟ್ಟಿಗೆ ಸರಿ? ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ, ಈ ಕಾರ್ಯಕ್ರಮ ಮಾಡುತ್ತಿರುವಾಗ ಪಕ್ಷದ ಚಿಹ್ನೆ ಬಳಸಲು ಮುಜುಗರವಾಯಿತೇ ನಿಮಗೆ? ಚಿಹ್ನೆ ಬಳಸದೇ ಇರುವುದು ಪಕ್ಷಕ್ಕೆ ಡ್ಯಾಮೇಜ್ ಮಾಡಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು: ದಾವಣಗೆರೆಯಲ್ಲಿ ನಿನ್ನೆ ನಡೆದ ಸಿದ್ದರಾಮೋತ್ಸವ (Siddaramotsava) ಭಾರೀ ಯಶಸ್ಸಿನೊಂದಿಗೆ ಸಂಪನ್ನವಾಗಿದ ಎಂದು ಸ್ವಯಂ ಕಾಂಗ್ರೆಸ್ ಪಕ್ಷ (Congress) ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ನಡೆದಿದ್ದಾರೂ ಏನು ಎಂಬುದು ತೀವ್ರ ಚರ್ಚೆಗೆ ಕಾರಣವಾಗಿದೆ. 75 ವರ್ಷದ ಸಿದ್ದರಾಮೋತ್ಸವ ಅವರಿಗಾಗಿಯೇ ನಡೆದ ಸಿದ್ದರಾಮೋತ್ಸವ ಅದಾಗಿತ್ತಾದರೂ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂಬುದಕ್ಕೆ ಸ್ವತಃ ರಾಹುಲ್ ಗಾಂಧಿ ಸಾಕ್ಷಿಯಾಗಿ, ಕಾರ್ಯಕ್ರಮ ನೆರವೇರಿದ್ದು ಗಮನಾರ್ಹವಾಗಿತ್ತು. ಆದರೆ ಪಕ್ಷಕ್ಕಿಂತ ಹೆಚ್ಚಾಗಿ ಮಾಜಿ ಮುಖ್ಯಮಂತ್ರಿ, ರಾಜ್ಯ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ (Siddaramaiah) ಅವರ ವೈಯಕ್ತಿಕ ವರ್ಚಸ್ಸು ಹೆಚ್ಚಿಸುವ ಪ್ರಯತ್ನವಷ್ಟೇ ನಡೆಯಿತಾ ಎಂಬ ಮಾತು ಇದೀಗ ಬಲವಾಗಿ ಕೇಳಿಬಂದಿದೆ. ಅಷ್ಟೇ ಆ ಅನುಮಾನ ಬಲಗೊಳ್ಳಲಿಕ್ಕೆ ಕಾರಣವಾದ ಅಂಶವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸಮಿತಿ ವಿರುದ್ದ ಹೈಕಮಾಂಡ್‌ಗೆ ದೂರು ಸಹ ನೀಡಲಾಗಿದೆ. ಸಿದ್ದರಾಮೋತ್ಸವದಲ್ಲಿ ಕಾಂಗ್ರೆಸ್ ಚಿಹ್ನೆಯನ್ನೇ ಬಳಸದ ಹಿನ್ನೆಲೆ ಸಿದ್ದರಾಮಯ್ಯ ಸಮಿತಿ ವಿರುದ್ದ ಹೈಕಮಾಂಡ್‌ಗೆ (AICC) ದೂರು ನಿಡಲಾಗಿದೆ.
ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮವು ಜನ ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಸಿದ್ದರಾಮಯ್ಯ ಇಂದು ರಾಜಕೀಯ ಗೆಲವು ಸಾಧಿಸಿರುವುದು ಕಾಂಗ್ರೆಸ್‌ನಿಂದ. ಅನ್ಯ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದ ಕೆಲ ದಿನಗಳಲ್ಲೇ ವಿಪಕ್ಷ ನಾಯಕರಾದರು. ಬಳಿಕ ಸತತ 5 ವರ್ಷಗಳ ವರೆಗೆ ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಅದಾದ ಬಳಿಕ ಮೈತ್ರಿ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಬಳಿಕ ಮತ್ತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ವಿಪಕ್ಷ ನಾಯಕರಾಗಿದ್ದಾರೆ. ಹೀಗಿರುವಾಗ ಪಕ್ಷದ ಚಿಹ್ನೆಯನ್ನು ಸಿದ್ದರಾಮೋತ್ಸವದಿಂದ ದೂರ ಇಟ್ಟಿರುವುದು ಎಷ್ಟರ ಮಟ್ಟಿಗೆ ಸರಿ? ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ, ಈ ಕಾರ್ಯಕ್ರಮ ಮಾಡುತ್ತಿರುವಾಗ ಪಕ್ಷದ ಚಿಹ್ನೆ ಬಳಸಲು ಮುಜುಗರವಾಯಿತೇ ನಿಮಗೆ? ಚಿಹ್ನೆ ಬಳಸದೇ ಇರುವುದು ಪಕ್ಷಕ್ಕೆ ಡ್ಯಾಮೇಜ್ ಮಾಡಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಯೋಜನೆಗಳ ಬಗ್ಗೆ ಮಾಹಿತಿಯಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರು ಹಗಲಿರುಳು ಪಕ್ಷ ಕಟ್ಟಲು ಶ್ರಮಿಸುತ್ತಿದ್ದಾರೆ. ಎಐಸಿಸಿ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನ ಮತದಾರರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಇನ್ನಿತಿರ ನಾಯಕರು ಒಂದೇ ಒಂದು ದಿನ ಪಕ್ಷ ಸಂಘಟನೆ ಮಾಡ್ದೆ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ. ಇವರ ಹೇಳಿಕೆಗಳಿಂದ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟವಾಗಬಹುದು ಎಂದು ಜುಲೈ 29 ರಂದೇ ರಣದೀಪ್ ಸುರ್ಜವಾಲಾಗೆ ಪತ್ರ ಬರೆಯಲಾಗಿದೆ. ಇದಾದ ಬಳಿಕ ರಾಜ್ಯ ಉಸ್ತುವಾರಿ ನಾಯಕ ಕೆ.ಸಿ. ವೇಣುಗೋಪಾಲ್‌ಗೆ ಸಹ ಪತ್ರ ಬರೆದಿದ್ದಾರೆ. ಹೀಗಾಗಿ ಒಳಗಿನ ಬಣ ಬಡಿದಾಟ ಇನ್ನೂ ಮುಗಿದಿಲ್ಲ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಎಂಬುದು ಮತ್ತೊಮ್ಮೆ ಕಣ್ಣಿಗೆ ರಾಚುತ್ತಿದೆ.