ಜನ ಸಾಮಾನ್ಯವಾಗಿ ಸಿದ್ದರಾಮಯ್ಯಗೆ ಸುಳ್ಳು ಸಿದ್ದರಾಮಯ್ಯ ಅಂತಾ ಹೇಳ್ತಾರೆ ಎಂದು ಸಾಕ್ಷ್ಯ ಬಿಡುಗಡೆ ಮಾಡಿದ ಬಿಜೆಪಿ! ಏನದು?
Siddaramaiah: ಬಾದಾಮಿಯಲ್ಲಿ ಸ್ಪರ್ಧೆ ಮಾಡುವಾಗ ಅಧಿಕೃತವಾಗಿ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಸಿದ್ದರಾಮಯ್ಯಗೆ ಆಗ 69 ವರ್ಷ ವಯಸ್ಸಾಗಿತ್ತು. ಹಾಗಾದರೆ ಈಗ ಸಿದ್ದರಾಮಯ್ಯಗೆ 73 ವರ್ಷ ಎಂದಾಯ್ತು! ಆದರೆ ಆತುರದ ಸಿದ್ದರಾಮೋತ್ಸವಕ್ಕಾಗಿ ಎರಡು ವರ್ಷ ಅವರಾಗಿಯೇ ಜಾಸ್ತಿ ಮಾಡಿಕೊಂಡರಾ?
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಸಿದ್ದರಾಮಯ್ಯ (Siddaramaiah) ಅವರ ಚುನಾವಣಾ ಅಫಿಡವಿಟ್ ವಿಚಾರವನ್ನು ಮುಂದಿಟ್ಟು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ಸಿದ್ದರಾಮಯ್ಯಗೆ ಈಗ ವಯಸ್ಸೆಷ್ಟು ಎಂದು ಪ್ರಶ್ನಿಸಿದ್ದಾರೆ.
ಬಾದಾಮಿಯಲ್ಲಿ ಸ್ಪರ್ಧೆ ಮಾಡುವಾಗ ಅಧಿಕೃತವಾಗಿ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಸಿದ್ದರಾಮಯ್ಯಗೆ ಆಗ 69 ವರ್ಷ ವಯಸ್ಸಾಗಿತ್ತು. ಹಾಗಾದರೆ ಈಗ ಸಿದ್ದರಾಮಯ್ಯಗೆ 73 ವರ್ಷ ಎಂದಾಯ್ತು! ಆದರೆ ಆತುರದ ಸಿದ್ದರಾಮೋತ್ಸವಕ್ಕಾಗಿ (Siddaramotsava) ಎರಡು ವರ್ಷ ಅವರಾಗಿಯೇ ಜಾಸ್ತಿ ಮಾಡಿಕೊಂಡಿದ್ದಾರೆ ಎಂದು ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
ಜನರು ಸಾಮಾನ್ಯವಾಗಿ ಸಿದ್ದರಾಮಯ್ಯಗೆ ಸುಳ್ಳು ಸಿದ್ದರಾಮಯ್ಯ ಅಂತಾ ಹೇಳುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಂದಿದೆ. ಅದೇ ಧಾಟಿಯಲ್ಲಿ ತಮಗೂ 75 ವರ್ಷ ಆಗಿದೆ ಅಂತಾ ಹೇಳಿಕೊಳ್ಳಲು ಸಿದ್ದರಾಮಯ್ಯ ಹೀಗೆ ಮಾಡಿದರಾ? ಮೊನ್ನೆ ದಾವಣಗೆರೆಯಲ್ಲಿ ಸೇರಿದ್ದ ಜನರಿಗೆ ಸಿದ್ದರಾಮಯ್ಯ ಸುಳ್ಳು ಹೇಳಿದಂತಾಯಿತಲ್ಲವಾ? ತಮ್ಮ ಹುಟ್ಟು ಹಬ್ಬವನ್ನೇ ಸುಳ್ಳು ಹೇಳಿದ್ದಾರೆ. ಹುಟ್ಟುಹಬ್ಬದ ದಿನ ತಮ್ಮ ಬಗ್ಗೆ ಮಾತಾಡಿಕೊಳ್ಳದೇ ಬಿಜೆಪಿಯನ್ನು ಹೀಯಾಳಿಸಿದ್ದಾರೆ. ನನ್ನ ಪ್ರಕಾರ ಇದು ಅತ್ಯಂತ ನೀಚತನ ಎಂದು ರವಿಕುಮಾರ್ ಹೇಳಿದ್ದಾರೆ.