ಎಷ್ಟೇ ಎಚ್ಚರಿಕೆ ಕೊಟ್ಟರೂ ಎಗ್ಗಿಲ್ಲದೇ ನಡೆಯುತ್ತಿದೆ ದಂಧೆ; 18 ಮಟ್ಕಾ ಬುಕ್ಕಿಗಳ ಗಡಿಪಾರಿಗೆ ಪಟ್ಟಿ ಸಿದ್ದಪಡಿಸಿದ ಬಳ್ಳಾರಿ ಪೊಲೀಸರು

| Updated By: ಆಯೇಷಾ ಬಾನು

Updated on: Mar 02, 2022 | 6:41 PM

ಬಳ್ಳಾರಿ ಎಸ್ಪಿ ಸೈದಲು ಅಡಾವತ್ 18 ಜನ ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಲು ಮುಂದಾಗಿದ್ದು, ಈ ಸಂಬಂಧ ಹೀಗಾಗಲೇ ಬುಕ್ಕಿಗಳ ಗಡಿಪಾರು ಲಿಸ್ಟ್ ರೆಡಿ ಮಾಡಿದ್ದಾರೆ. ಯಾವುದೇ ಕ್ಷಣದಲ್ಲಾದ್ರೂ ಎಸ್ಪಿ ಸೈದಲು ಅಥಾವತ್‌ ಬುಕ್ಕಿಗಳನ್ನು ಗಡಿಪಾರು ಮಾಡಲಿದ್ದಾರೆ.

ಎಷ್ಟೇ ಎಚ್ಚರಿಕೆ ಕೊಟ್ಟರೂ ಎಗ್ಗಿಲ್ಲದೇ ನಡೆಯುತ್ತಿದೆ ದಂಧೆ; 18 ಮಟ್ಕಾ ಬುಕ್ಕಿಗಳ ಗಡಿಪಾರಿಗೆ ಪಟ್ಟಿ ಸಿದ್ದಪಡಿಸಿದ ಬಳ್ಳಾರಿ ಪೊಲೀಸರು
ಎಷ್ಟೇ ಎಚ್ಚರಿಕೆ ಕೊಟ್ಟರೂ ಎಗ್ಗಿಲ್ಲದೇ ನಡೆಯುತ್ತಿದೆ ದಂಧೆ; 18 ಮಟ್ಕಾ ಬುಕ್ಕಿಗಳ ಗಡಿಪಾರಿಗೆ ಪಟ್ಟಿ ಸಿದ್ದಪಡಿಸಿದ ಬಳ್ಳಾರಿ ಪೊಲೀಸರು
Follow us on

ಬಳ್ಳಾರಿ: ಜಿಲ್ಲೆಯಲ್ಲಿ ಮಟ್ಕಾ ನಿಯಂತ್ರಣಕ್ಕೆ ಮುಂದಾಗಿರುವ ಜಿಲ್ಲಾ ಪೊಲೀಸರು ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಲು ಮುಂದಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಟ್ಕಾ ಬುಕ್ಕಿಗಳನ್ನು ಗುರುತಿಸಿರುವ ಪೊಲೀಸ್ ಇಲಾಖೆ 18 ಮಟ್ಕಾ ಬುಕ್ಕಿಗಳನ್ನ ಗಡಿಪಾರು ಮಾಡಲು ಎಸ್ಪಿ ಸೈದುಲು ಅಡಾವತ್ ಪಟ್ಟಿ ಸಿದ್ಧಗೊಳಿಸಿದ್ದಾರೆ. ಮಟ್ಕಾ ಬುಕ್ಕಿಗಳಿಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ಬುಕ್ಕಿಗಳು ಎಗ್ಗಿಲ್ಲದೇ ಮಟ್ಕಾ ದಂಧೆ ನಡೆಸುತ್ತಿರುವ ಪರಿಣಾಮ ಪೊಲೀಸರು ಬುಕ್ಕಿಗಳ ಗಡಿಪಾರಿಗೆ ಪಟ್ಟಿ ರೆಡಿ ಮಾಡಿದ್ದಾರೆ.

ಬಳ್ಳಾರಿ ಎಸ್ಪಿ ಸೈದಲು ಅಡಾವತ್ 18 ಜನ ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಲು ಮುಂದಾಗಿದ್ದು, ಈ ಸಂಬಂಧ ಹೀಗಾಗಲೇ ಬುಕ್ಕಿಗಳ ಗಡಿಪಾರು ಲಿಸ್ಟ್ ರೆಡಿ ಮಾಡಿದ್ದಾರೆ. ಯಾವುದೇ ಕ್ಷಣದಲ್ಲಾದ್ರೂ ಎಸ್ಪಿ ಸೈದಲು ಅಥಾವತ್‌ ಬುಕ್ಕಿಗಳನ್ನು ಗಡಿಪಾರು ಮಾಡಲಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಗಡಿಪಾರಿಗೆ ಸಿದ್ಧವಾಗಿರುವ ಮಟ್ಕಾ ಬುಕ್ಕಿಗಳ ಹೆಸರುಗಳು ಇಂತಿವೆ.
ಬಳ್ಳಾರಿಯ ಎಪಿಎಂಸಿ ಠಾಣಾ ವ್ಯಾಪ್ತಿಯ ಸುಂಕಪ್ಪ, ಸಲೀಂ, ರಹಮಾನ್, ಹೊನ್ನೂರು ಸಾಬ್ ಹಾಗೂ ಸಿರುಗುಪ್ಪ ಠಾಣಾ ವ್ಯಾಪ್ತಿಯ ಹುಸೇನ್ ಸಾಬ್, ವೀರಭದ್ರಗೌಡ, ಮನ್ನೂರು, ತೆಕ್ಕಲಕೋಟೆ ಠಾಣಾ ವ್ಯಾಪ್ತಿಯ ಜಬ್ಬಾರ್, ಚಿದಾನಂದ, ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸೀನಾ, ಅಂಜಿ, ಹಚ್ಚೊಳಿ ಪೊಲೀಸ ಠಾಣಾ ವ್ಯಾಪ್ತಿಯ ಅಮರೇಶ್, ಗೌಸ್, ಸಿರಿಗೇರಿ ಠಾಣಾ ವ್ಯಾಪ್ತಿಯ ಅಮರೇಶ್ ವೆಂಕಟೇಶ್ ಗೌಡ, ಪಿ.ಡಿ ಹಳ್ಳಿ ಪೊಲೀಸ ಠಾಣಾ ವ್ಯಾಪ್ತಿಯ ಯರಿಸ್ವಾಮಿ, ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯ ಗುರುಸ್ವಾಮಿ, ಸಂಡೂರು ಠಾಣೆ ವ್ಯಾಪ್ತಿಯ ಕೆ ನಾಗರಾಜ್ ಸೇರಿ ಒಟ್ಟು 18 ಮಟ್ಕಾ ಬುಕ್ಕಿಗಳ ಪಟ್ಟಿ ಸಿದ್ಧವಾಗಿದೆ.

ಇದನ್ನೂ ಓದಿ: ಕೂಡಲೇ ಖಾರ್ಕಿವ್​ನಿಂದ ಹೊರಟು ಈ ಜಾಗಗಳನ್ನು ಸೇರಿಕೊಳ್ಳಿ; ಉಕ್ರೇನ್​ನಲ್ಲಿರುವ ಭಾರತೀಯರಿಗೆ ಸರ್ಕಾರ ಸೂಚನೆ

ಗಾಲಿ ಜನಾನರ್ಧನ ರೆಡ್ಡಿ ಕೈಗೆ ಕ್ರಿಕೆಟ್ ಬ್ಯಾಟ್ ಕೊಟ್ರೆ ಬಾಲನ್ನು ದೂರದವರೆಗೆ ಅಟ್ಟಬಲ್ಲರು! ಸಾಕ್ಷಿ ಇಲ್ಲಿದೆ