Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಬಿಜೆಪಿ ನಾಯಕಿ ಪದ್ಮಾವತಿ ಕೊಲೆ ಪ್ರಕರಣ: 13 ವರ್ಷದ ನಂತರವೂ ರೆಡ್ಡಿ ಸಹೋದರರಿಗೆ ತಪ್ಪಲಿಲ್ಲ ಕಂಟಕ, ಸಂಕಷ್ಟದಲ್ಲಿ ಜನಾ ರೆಡ್ಡಿ-ಸೋಮಶೇಖ ರೆಡ್ಡಿ

ಬಳ್ಳಾರಿಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಸದ್ದು ಸಂಚಲನ ಸೃಷ್ಟಿ ಮಾಡಿದ್ದ ಆ ಕೊಲೆ ಕೇಸ್ ಗೆ ಇದೀಗ ಹೊಸ ತಿರುವು ದೊರೆತಿದೆ.

ಬಳ್ಳಾರಿ ಬಿಜೆಪಿ ನಾಯಕಿ ಪದ್ಮಾವತಿ ಕೊಲೆ ಪ್ರಕರಣ: 13 ವರ್ಷದ ನಂತರವೂ ರೆಡ್ಡಿ ಸಹೋದರರಿಗೆ ತಪ್ಪಲಿಲ್ಲ ಕಂಟಕ, ಸಂಕಷ್ಟದಲ್ಲಿ ಜನಾ ರೆಡ್ಡಿ-ಸೋಮಶೇಖ ರೆಡ್ಡಿ
ಪದ್ಮಾವತಿ, ರೆಡ್ಡಿ ಸಹೋದರು, ಸುಬ್ಬರಾಯಡು
Follow us
ಸಾಧು ಶ್ರೀನಾಥ್​
|

Updated on: May 20, 2023 | 10:28 AM

ಅದೊಂದು ಕೊಲೆ ಪ್ರಕರಣ ರಾಜ್ಯ ರಾಜಕಾರಣದಲ್ಲೆ ಸಂಚಲನ ಸೃಷ್ಟಿಸಿತ್ತು. ಪಾಲಿಕೆಯ ಸದಸ್ಯೆಯಾಗಿದ್ದ ಆ ಮಹಿಳೆಯನ್ನ ಕೊಂದಿದ್ಯಾರು ಅನ್ನೋದು ಸಹ ಸಾಕಷ್ಟು ಸಂಶಯಕ್ಕೆ ಕಾರಣವಾಗಿತ್ತು. ಅದ್ರೆ ಆ ಕೊಲೆ ನಡೆದು 13 ವರ್ಷವಾದ ನಂತರ ಇದೀಗ ರೆಡ್ಡಿ ಸಹೋದರರಿಗೆ ಕಂಟಕ ಎದುರಾಗುವ ಲಕ್ಷಣಗಳು ಶುರುವಾಗಿವೆ. ಯೆಸ್. ಕೊಲೆಯಾದ ಪಾಲಿಕೆ ಸದಸ್ಯೆಯ ಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ರೆಡ್ಡಿ ಕುಟುಂಬದ ವಿರುದ್ದ ಸಾಕ್ಷ್ಯ ದಾಖಲಾಗಿರುವುದು ಇದೀಗ ಕೊಲೆ ಪ್ರಕರಣಕ್ಕೆ ಹೊಸ ತಿರುವು ತಂದಿದೆ

ಅದು 2010 ರ ಫೆಬ್ರವರಿ 4 ರ ರಾತ್ರಿ. ಮನೆಯಲ್ಲಿದ್ದ ಆ ಮಹಿಳೆಯನ್ನ ಯಾರೋ ಆಗುಂತಕರು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು. ಆ ಹತ್ಯೆಯ ಸುದ್ದಿ ಹೊರಬರುತ್ತಿದ್ದಂತೆ ಈಡೀ ಬಳ್ಳಾರಿ ಜಿಲ್ಲೆಯಲ್ಲೆ ಸಂಚಲನ ಸೃಷ್ಟಿಯಾಗಿತ್ತು. ಯಾಕಂದ್ರೆ ಅಂದು ಕೊಲೆಯಾಗಿದ್ದು ಬೇರೆ ಯಾರೋ ಅಲ್ಲ. ಬಳ್ಳಾರಿಯ ಅಂದಿನ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್. ಬಳ್ಳಾರಿ ಗಾಂಧಿನಗರ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ನಡೆದ ಆ ಹತ್ಯೆ ಕೇಸ್ ಇದೀಗ ಮತ್ತೆ ಸದ್ದು ಮಾಡುತ್ತಿದ್ದು, ರೆಡ್ಡಿ ಸಹೋದರರಿಗೆ ಹೊಸ ಕಂಟಕ ತಂದಿಟ್ಟಿದೆ.

ಬಳ್ಳಾರಿಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಸದ್ದು ಸಂಚಲನ ಸೃಷ್ಟಿ ಮಾಡಿದ್ದ ಆ ಕೊಲೆ ಕೇಸ್ ಗೆ ಇದೀಗ ಹೊಸ ತಿರುವು ದೊರೆತಿದೆ. ಪಾಲಿಕೆಯಲ್ಲಿ ಬಿಜೆಪಿ ಮಾಜಿ ಮಹಿಳಾ ಉಪ ಪೌರರಾಗಿದ್ದ ಪದ್ಮಾವತಿ ಯಾದವ್ ಕೊಲೆ ಪ್ರಕರಣ ನಡೆದು 13 ವರ್ಷ ಕಳೆದರೂ ಇಂದಿಗೂ ಆರೋಪಿಗಳು ಪತ್ತೆಯಾಗಿಲ್ಲ.

2012ರ ಫೆಬ್ರವರಿ 4ರಂದು ನಡೆದ ಹತ್ಯೆ ಪ್ರಕರಣವನ್ನ ಸರ್ಕಾರ ಈ ಹಿಂದೆ ಸಿಐಡಿಗೆ ವಹಿಸಿತ್ತು. ಅದ್ರೆ ತನಿಖೆಗೆ ಇಳಿದ ಸಿಐಡಿ ಅಧಿಕಾರಿಗಳು ಐದು ವರ್ಷಗಳ ಕಾಲ ತನಿಖೆ ನಡೆಸಿದರೂ ತನಿಖೆಯನ್ನ ಪೂರ್ಣಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನ ಶ್ರೀಘ್ರದಲ್ಲಿ ಪೂರ್ಣಗೊಳಿಸುವಂತೆ ಹೈಕೋರ್ಟ್ 2015ರ ಡಿಸೆಂಬರ್ 8 ರಂದು ಸಿಐಡಿಗೆ ಸೂಚನೆ ನೀಡಿತ್ತು.‌

ಆದ್ರೆ ತನಿಖೆಯ ನಂತರ ಆರೋಪಿಗಳು ಪತ್ತೆಯಾಗದ ಕಾರಣ ಸಿಐಡಿ ಅಧಿಕಾರಿಗಳು 2016ರ ಸೆಪ್ಟೆಂಬರ್ 20ರಂದು ಸಿ ರಿರ್ಪೋಟ್ ಅನ್ನ ಬಳ್ಳಾರಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿ, ಕೈ ತೊಳೆದುಕೊಂಡಿದ್ದರು. ಆದ್ರೆ ಇದೀಗ ಇದೇ ಕೊಲೆ ಪ್ರಕರಣದಲ್ಲಿ ಗಂಗಾವತಿಯ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಹಾಗೂ ಅವರ ಪತ್ನಿಯರ ವಿರುದ್ದ ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಪದ್ಮಾವತಿ ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಸುಬ್ಬರಾಯಡು ಕೊಲೆ ನಡೆದ ದಿನದಿಂದ ಹೋರಾಟಕ್ಕೆ ಇಳಿದಿದ್ದಾರೆ. ಪದ್ಮಾವತಿ ಯಾದವ್ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕ ಸೋಮಶೇಖರರೆಡ್ಡಿ, ಗಂಗಾವತಿಯ ನೂತನ ಶಾಸಕ ಗಾಲಿ ಜನಾರ್ದನರೆಡ್ಡಿ ಹಾಗೂ ಅವರ ಪತ್ನಿಯರ ಕೈವಾಡವಿದೆ ಎಂದು ಹೋರಾಟ ನಡೆಸುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಸೋಮಶೇಖರರೆಡ್ಡಿ ಪತ್ನಿ ವಿಜಯಲಕ್ಷ್ಮೀ, ಜನಾರ್ದನರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರ ನೇರವಾದ ಕೈವಾಡವಿದೆ.

ಕೊಲೆಗೆ ಅವರೇ ಪ್ರಮುಖ ಕಾರಣವೆಂದು ಸಾಕ್ಷ್ಯ ನುಡಿದಿದ್ದಾರೆ. ಅಲ್ಲದೇ ಪದ್ಮಾವತಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿದಿರುವುದಕ್ಕೆ ತಮಗೆ ಬೆದರಿಕೆಯಿದ್ದು, ತಮ್ಮ ಪ್ರಾಣಕ್ಕೆ ಅನಾಹುತವಾದರೆ ಅದಕ್ಕೆ ರೆಡ್ಡಿ ಸಹೋದರರೇ ಕಾರಣ ಅಂತಾ ಕೊಲೆಯಾದ ಪದ್ಮಾವತಿ ಸಹೋದರ ಸುಬ್ಬರಾಯಡು ಹೇಳ್ತಿದ್ದಾರೆ. ಕೊಲೆ ಪ್ರಕರಣ ನಡೆದು 13 ವರ್ಷಗಳ ನಂತರ ರೆಡ್ಡಿ ಸಹೋದರರ ವಿರುದ್ದ ನ್ಯಾಯಾಲಯದಲ್ಲೀಗ ಸಾಕ್ಷ್ಯ ದಾಖಲಾಗಿರುವುದು ರೆಡ್ಡಿ ಸಹೋದರರಿಗೆ ಸಂಕಷ್ಟು ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ.

ಪದ್ಮಾವತಿ ಯಾದವ್ ಕೊಲೆ ಪ್ರಕರಣದಲ್ಲಿ ಈಗಾಗಲೇ ಸಿಐಡಿ ಅಧಿಕಾರಿಗಳು ಸಲ್ಲಿಸಿದ ಸಿ ರಿರ್ಪೋಟ್ ವಿರುದ್ದ ಪದ್ಮಾವತಿ ಸಹೋದರ ಸುಬ್ಬರಾಯಡು ನ್ಯಾಯಾಲಯದಲ್ಲಿ ಪ್ರೊಟೆಸ್ಟ್ ಮೆಮೋ ಸಲ್ಲಿಸಿ ಹೋರಾಟಕ್ಕೆ ಇಳಿದಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಶಾಸಕ ಸೋಮಶೇಖರರೆಡ್ಡಿ ಕೈವಾಡ ಇದೆ ಅಂತಾ ಪದ್ಮಾವತಿ ಸಹೋದರ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿರುವುದು ರೆಡ್ಡಿ ಸಹೋದರರಿಗೆ ಸಂಕಷ್ಟ ತಂದಿಟ್ಟಿದೆ. ಹೀಗಾಗಿ 13 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ರೆಡ್ಡಿ ಸಹೋದರರಿಗೆ ಸಂಕಷ್ಟ ತರುತ್ತಾ ಅನ್ನೋದು ಇದೀಗ ಕುತೂಹಲ ಮೂಡಿಸಿದ್ದಂತೂ ಸುಳ್ಳಲ್ಲವಾಗಿದೆ.

ವರದಿ: ವೀರೇಶ್​​ ದಾನಿ, ಟಿವಿ9, ಬಳ್ಳಾರಿ 

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ