ಬಳ್ಳಾರಿ: ಬಳ್ಳಾರಿಯಲ್ಲಿ (Bellary) ಇಂದು (ನ.20) ನಡೆದ ಬಿಜೆಪಿಯ ಎಸ್ಟಿ ಸಮಾವೇಶಕ್ಕೆ (BJP ST Program) ಬಂದಿದ್ದ ಯುವಕ ನೀರುಪಾಲಾಗಿದ್ದಾನೆ. ಚೆಳ್ಳಕೇರಿ ತಾಲೂಕಿನ ಗೌರಿಪುರ ಗ್ರಾಮದ ಉಮಾಪತಿ (26) ಮೃತ ಯುವಕ. ಮೃತ ಉಮಾಪತಿ ಸಮಾವೇಶದ ವೇದಿಕೆಯ ಹಿಂಭಾಗದ ಗೌತಮ ನಗರದ ಹೆಚ್ಎಲ್ಸಿ ಕಾಲುವೆಯಲ್ಲಿ ಕಾಲು ತೊಳೆಯಲು ಹೋದ ವೇಳೆ ಆಯ ತಪ್ಪಿ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಸದ್ಯ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ