AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಹೆಣ್ಣು ಹೆತ್ತಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಿದ ಪತಿ; ಮನನೊಂದು ಮಕ್ಕಳೊಂದಿಗೆ ಕಾಲುವೆ ಜಿಗಿದ ತಾಯಿ

ತಾಲೂಕಿನ ಗುಗ್ಗರಹಟ್ಟಿ ಗ್ರಾಮದಲ್ಲಿ ನಾಲ್ಕು ಹೆಣ್ಣುಮಕ್ಕಳೇ ಹೆತ್ತಿದ್ದೀಯಾ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯ ಕಾಟಕ್ಕೆ ಬೇಸತ್ತು ಇಬ್ಬರು ಮಕ್ಕಳೊಡನೇ ಕಾಲುವೆಗೆ ಹಾರಿದ್ದಾಳೆ.

ಬಳ್ಳಾರಿ: ಹೆಣ್ಣು ಹೆತ್ತಿದ್ದಕ್ಕೆ ಹೆಂಡತಿಗೆ ಕಿರುಕುಳ ನೀಡಿದ ಪತಿ; ಮನನೊಂದು ಮಕ್ಕಳೊಂದಿಗೆ ಕಾಲುವೆ ಜಿಗಿದ ತಾಯಿ
ಸಾಂದರ್ಭಿಕ ಚಿತ್ರ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jan 13, 2023 | 3:36 PM

Share

ಬಳ್ಳಾರಿ: ತಾಲೂಕಿನ ಗುಗ್ಗರಹಟ್ಟಿ ಗ್ರಾಮದ ನಿವಾಸಿ ಲಕ್ಷ್ಮೀಗೆ 4ಹೆಣ್ಣುಮಕ್ಕಳು ಹುಟ್ಟಿದ್ದವು ಎಂಬ ಕಾರಣಕ್ಕೆ ಗಂಡ ಪ್ರತಿದಿನ ಪತ್ನಿ ಜೊತೆ ಜಗಳ ತೆಗೆಯುತ್ತಿದ್ದನು. ಈ ಕಾರಣಕ್ಕೆ ಮನನೊಂದ ಪತ್ನಿ ಲಕ್ಷ್ಮೀ ನಾಲ್ಕು ವರ್ಷದ ಮಗು ವೆನಿಲಾ ಹಾಗೂ ಎರಡು ವರ್ಷದ ಶಾಂತಿ ಜೊತೆಯಲ್ಲಿ ತಾಲೂಕಿನ ಮೋಕಾ ಬಳಿಯ LLC ಕಾಲುವೆಗೆ ಹಾರಿದ್ದಾಳೆ. 4 ವರ್ಷದ ವೆನಿಲಾ ಎಂಬ ಬಾಲಕಿಯ ರಕ್ಷಣೆ ಮಾಡಿದ್ದ ಸ್ಥಳೀಯರು ಎರಡು ವರ್ಷದ ಮಗು ಶಾಂತಿ, ತಾಯಿ ಮೃತ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

16ವರ್ಷದ ಹಿಂದೆ ಗುಗ್ಗರಟ್ಟಿ ನಿವಾಸಿ ವೀರಭದ್ರ ಜೊತೆಯಲ್ಲಿ ಮದುವೆಯಾಗಿದ್ದ ಲಕ್ಷ್ಮೀ ಮದುವೆ ಬಳಿಕ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ನಾಲ್ಕು ಹೆಣ್ಣೇ ಹುಟ್ಟಿವೆ ಎಂಬ ಕಾರಣಕ್ಕೆ ಮನೆಯಲ್ಲಿ ನಿತ್ಯ ಜಗಳ ಮಾಡುತ್ತಿದ್ದ ಪತಿ ವೀರಭದ್ರನ ಕಾಟಕ್ಕೆ ಬೇಸತ್ತು ನಿನ್ನೆ(ಜ.12) ಮಧ್ಯಾಹ್ನ ಇಬ್ಬರು ಮಕ್ಕಳ ಜೊತೆಯಲ್ಲಿ ಕಾಲುವೆಗೆ ಹಾರಿದ್ದ ಮೃತ ಲಕ್ಷ್ಮೀಯ ಪೋಷಕರು ಹಾಗೂ ಸಂಬಂಧಿಕರು ವಿಮ್ಸ್ ಆಸ್ಪತ್ರೆಯ ಶವಾಗಾರದ ಆವರಣದಲ್ಲಿ ಹೆಂಡತಿಗೆ ಕಿರುಕುಳ ನೀಡಿದ ಗಂಡ ವೀರಭದ್ರನಿಗೆ ಹಿಡಿಶಾಪ ಹಾಕಿ ಜಗಳಕ್ಕೆ ಇಳಿದಿದ್ದಾರೆ. ಬಳ್ಳಾರಿಯ ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಕುಮಗನಿಗೆ ವಿಷ ನೀಡಿ ತಾವೂ ವಿಷಸೇವಿಸಿ ವೃದ್ಧ ದಂಪತಿ ಆತ್ಮಹತ್ಯೆ

ಶಿವಮೊಗ್ಗ: ನಗರದ ಮಿಳಘಟ್ಪದ ಬಾಡಿಗೆ ಮನೆಯಲ್ಲಿ ವಾಸವಿದ್ದ ಪ್ರತಾಪ (70) ಮತ್ತು ದಾನಮ್ಮ (63) ಎಂಬ ವೃದ್ಧ ದಂಪತಿಗಳು ಕುಟುಂಬ ನಿರ್ವಹಣೆಗಾಗಿ ಪರದಾಡುತ್ತಿದ್ದರು. ಪತ್ನಿಯೇ ಕೊಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಸಾಲ ಮಾಡಿಕೊಂಡಿದ್ದ ವೃದ್ಧೆ ಕೈ ಸಾಲ ಮಾಡಿಕೊಂಡಿದ್ದರು. ಇತ್ತ ಸಾಕಿದ ಮಗನಿಗೂ ಸ್ಟ್ರೋಕ್ ಹೊಡೆದ ಹಿನ್ನಲೆ ಆತ ಕೂಡಾ ಮನೆಯಲ್ಲಿಯೇ ಹಾಸಿಗೆ ಹಿಡಿದಿದ್ದ. ಮನೆ ಬಾಡಿಗೆ ಕಟ್ಟಲು ಆಗದೇ ಇತ್ತ ಸಾಲಗಾರರ ಕಾಟವು ತಾಳಲಾರದೇ ನೊಂದ ದಂಪತಿಗಳು. ತಾವೂ ವಿಷ ಸೇವಿಸಿ ಮಗನಿಗೂ ವಿಷ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ವಸ್ಥ ಮಗ ಮಂಜುನಾಥ್​ಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ (25) ಸಾವನ್ನಪ್ಪಿದ್ದಾನೆ. ಈ ಕುರಿತು ದೊಡ್ಡಪೇಟೆ ಪೂಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Fri, 13 January 23