ಬಳ್ಳಾರಿಯಲ್ಲಿ 5 ಕೋಟಿಗೂ ಅಧಿಕ ಹಣ ಜಪ್ತಿ ಪ್ರಕರಣ: ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 11, 2024 | 5:08 PM

ಲೋಕಸಭಾ ಚುನಾವಣೆ(Lok Sabha Elections) ಹಿನ್ನಲೆ ಅಲರ್ಟ್​ ಆಗಿರುವ ಪೊಲೀಸರು, ಏ.7 ರಂದು ಬಳ್ಳಾರಿಯಲ್ಲಿ 5 ಕೋಟಿ 60 ಲಕ್ಷ ಹವಾಲಾ(Hawala) ಹಣ, ಸೇರಿದಂತೆ ಚಿನ್ನ, ಬೆಳ್ಳಿ ಜಪ್ತಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನರೇಶ್ ಹವಾಲಾ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎಸ್ಪಿ ರಂಚಿತಕುಮಾರ ಬಂಡಾರು ಅವರು ಹೇಳಿದ್ದಾರೆ.

ಬಳ್ಳಾರಿಯಲ್ಲಿ 5 ಕೋಟಿಗೂ ಅಧಿಕ ಹಣ ಜಪ್ತಿ ಪ್ರಕರಣ: ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ
ಬಳ್ಳಾರಿ ಎಸ್ಪಿ ರಂಚಿತಕುಮಾರ ಬಂಡಾರು
Follow us on

ಬಳ್ಳಾರಿ, ಏ.11: ಲೋಕಸಭಾ ಚುನಾವಣೆ(Lok Sabha Elections) ಹಿನ್ನಲೆ ಅಲರ್ಟ್​ ಆಗಿರುವ ಪೊಲೀಸರು, ಏ.7 ರಂದು ಬಳ್ಳಾರಿಯಲ್ಲಿ 5 ಕೋಟಿ 60 ಲಕ್ಷ ಹವಾಲಾ(Hawala) ಹಣ, ಸೇರಿದಂತೆ ಚಿನ್ನ, ಬೆಳ್ಳಿ ಜಪ್ತಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನರೇಶ್ ಹವಾಲಾ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಎಸ್ಪಿ ರಂಚಿತಕುಮಾರ ಬಂಡಾರು ಅವರು ಹೇಳಿದ್ದಾರೆ. ಇಂದು(ಏ.11) ಬಳ್ಳಾರಿ ಡಿಸಿ ಕಚೇರಿಯಲ್ಲಿ ಮಾತನಾಡಿ, ‘ಬಳ್ಳಾರಿ ನಗರ ಮತ್ತು ಸುತ್ತಮುತ್ತ ಹವಾಲಾ ದಂಧೆ ನಡೆಸುತ್ತಿದ್ದ ನರೇಶ್, ಈ ಹಿಂದೆಯೂ ಹವಾಲಾ ಮೂಲಕ ಹಣ ವರ್ಗಾಯಿಸಿದ್ದ.

ಈ ಹಿನ್ನಲೆ ಕಳೆದ 3 ತಿಂಗಳಿಂದ ನರೇಶ್​ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿತ್ತು. ನಿಖರ ಮಾಹಿತಿ ಮೇರೆಗೆ ಏ.7ರಂದು ಬಳ್ಳಾರಿಯ ಕಂಬಳಿ ಬಜಾರ್​ನ ನರೇಶ್ ಮನೆ ಮೇಲೆ ಏಕಕಾಲದಲ್ಲಿ ಐಟಿ ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿ, ಆತನ ಮನೆಯಲ್ಲಿದ್ದ 5 ಕೋಟಿ 60 ಲಕ್ಷ ಹಣ, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ ಮತ್ತು 103 ಕೆಜಿ ಬೆಳ್ಳಿ ಆಭರಣ ಜಪ್ತಿ ಮಾಡಿದ್ದರು. ಬಳಿಕ ವಿಚಾರಣೆಗೆ ಹಾಜರಾಗುವಂತೆ ನರೇಶ್​ಗೆ ನೋಟಿಸ್ ನೀಡಲಾಗಿತ್ತು. ನರೇಶ್ ವಿಚಾರಣೆ ವೇಳೆ ಪೊಲೀಸರು ಸ್ಫೋಟಕ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಲೋಕಸಭಾ ಚುನಾವಣೆ 2024: ಬಳ್ಳಾರಿಯಲ್ಲಿ 5 ಕೋಟಿ ಹಣ, ಕೆಜಿಗಟ್ಟಲೆ ಚಿನ್ನ, ಮೂಟೆಗಟ್ಟಲೆ ಬೆಳ್ಳಿ ಜಪ್ತಿ

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 16 ಲಕ್ಷ ರೂ. ಸೀಜ್

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 16ಲಕ್ಷ ರೂ. ಹಣವನ್ನ ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು ಸೀಜ್ ಮಾಡಿದ್ದಾರೆ. ಇಚಲಕರಂಜಿ ಮೂಲದ ಸಂತೋಷ ಪೂಜಾರಿ, ಜ್ಞಾನೆಶ್ವರ ಪಾಟೀಲ್ ಎಂಬಿಬ್ಬರು ​ತಡರಾತ್ರಿ ಎರಡು ಲಗೇಜ್ ಬ್ಯಾಗ್​ನಲ್ಲಿ ಹಣ ಸಾಗಿಸಲು ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ ದಾಖಲೆ ಇಲ್ಲದೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಬಳಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪೊಲೀಸರು ಹಣವನ್ನು ಹಸ್ತಾಂತರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Thu, 11 April 24