ಚಿತ್ರದುರ್ಗ: ದಾಖಲೆ ಇಲ್ಲದೆ ಸಾಗಿಸ್ತಿದ್ದ ಲಕ್ಷಾಂತರ ರೂ. ಜಪ್ತಿ

ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿ ಹಿನ್ನಲೆ ಎಲ್ಲೆಡೆ ಚೆಕ್​ಪೋಸ್ಟ್​ ನಿರ್ಮಿಸಿ ಹದ್ದಿನ ಕಣ್ಣೀಡಲಾಗಿದೆ. ಅದರಂತೆ ಇಂದು(ಮಾ.26) ಚಿತ್ರದುರ್ಗ ತಾಲೂಕಿನ ಪಿಳ್ಳೆಕೇರನಹಳ್ಳಿ ಚೆಕ್​​ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ 35 ಸಾವಿರ ರೂ. ಜಪ್ತಿ ಮಾಡಲಾಗಿದೆ. ಇತ್ತ ಉತ್ತರ ಕನ್ನಡದಲ್ಲೂ ಎರಡು ಪತ್ಯೇಕ ಪ್ರಕರಣಗಳಲ್ಲಿ ದಾಖಲೆ ಇಲ್ಲದ ಹಣವನ್ನ ಜಪ್ತಿ ಮಾಡಲಾಗಿದೆ.

ಚಿತ್ರದುರ್ಗ: ದಾಖಲೆ ಇಲ್ಲದೆ ಸಾಗಿಸ್ತಿದ್ದ ಲಕ್ಷಾಂತರ ರೂ. ಜಪ್ತಿ
ಚಿತ್ರದುರ್ಗ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 26, 2024 | 6:27 PM

ಚಿತ್ರದುರ್ಗ, ಮಾ.26: ತಾಲೂಕಿನ ಪಿಳ್ಳೆಕೇರನಹಳ್ಳಿ ಚೆಕ್​​ಪೋಸ್ಟ್​ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ 35 ಸಾವಿರ ರೂ. ಜಪ್ತಿ ಮಾಡಲಾಗಿದೆ. ಚಿತ್ರದುರ್ಗ(Chitradurga) ತಹಶೀಲ್ದಾರ್ ನಾಗವೇಣಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿ, ಎಸ್.ಎಸ್.ಟಿ  ಹಾಗೂ ಎಫ್.ಎಸ್.ಟಿ ಟೀಮ್​ನಿಂದ ಹಣವನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯ 2 ಪ್ರತ್ಯೇಕ ಕೇಸ್‌ನಲ್ಲಿ ಹಣ ವಶಪಡಿಸಿಕೊಂಡಿರುವ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ: ಜಿಲ್ಲೆಯ 2 ಪ್ರತ್ಯೇಕ ಪ್ರಕರಣಗಳಲ್ಲಿ ಕಂದಾಯ ಅಧಿಕಾರಿಗಳು ಹಣ ವಶಪಡಿಸಿಕೊಂಡಿದ್ದಾರೆ. ಬನವಾಸಿ ಚೆಕ್‌ಪೋಸ್ಟ್‌ನಲ್ಲಿ ಪ್ರತ್ಯೇಕ ಪ್ರಕರಣದಲ್ಲಿ 6.7 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪರಶುರಾಮ ಯಲ್ಲಪ್ಪ ಎಂಬವರಿಗೆ ಸೇರಿದ 5.20ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಇದು ಉದ್ಯಮಕ್ಕೆ ಸಂಬಂಧಿಸಿದ ಹಣ ಎಂಬುದಾಗಿ ತಿಳಿಸಿದ್ದಾರೆ. ಇನ್ನು ಸೊರಬದ ನಿವಾಸಿ ರೇಣುಕಾ ನಾಗರಾಜ್ ಎಂಬುವವರಿಗೆ ಸೇರಿದ 1.50ಲಕ್ಷ ರೂ. ಜಪ್ತಿ ಮಾಡಲಾಗಿದೆ. ಇವರು ಚಿನ್ನ ಖರೀದಿಗಾಗಿ ಸೊರಬಾದಿಂದ ಶಿರಸಿಯತ್ತ ಬರುತ್ತಿದ್ದರು. ಈ ವೇಳೆ ಸೀಜ್​ ಮಾಡಲಾಗಿದೆ. ಇನ್ನು ಎರಡೂ ಪ್ರಕರಣಗಳಲ್ಲಿ ಹಣದ ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಚರಣೆ; 7 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ

2 ಸಾವಿರ ಲಂಚ ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಅಧಿಕಾರಿ

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗುಲ್ಲಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗೋವಿಂದಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಇ-ಖಾತೆ ಮಾಡಿಕೊಡಲು 5 ಸಾವಿರ ಲಂಚಕ್ಕೆ ಕಾರ್ಯದರ್ಶಿ ಬೇಡಿಕೆಯಿಟ್ಟಿದ್ದ. ಅದರಂತೆ ಇಂದು ಕಚೇರಿಯಲ್ಲಿ 2 ಸಾವಿರ ಲಂಚ ಪಡೆಯುವ ವೇಳೆ ಲೋಕಾ ಖೆಡ್ಡಾಕ್ಕೆ ಬಿದ್ದಿದ್ದಾನೆ. ಸಧ್ಯ ಗೋವಿಂದಪ್ಪನನ್ನ ವಶಕ್ಕೆ ಪಡೆದು ಲೋಕಾ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ