ಟ್ರಾಫಿಕ್ ಪೊಲೀಸರ ದಾಹ ನೀಗಿಸಿ ಭಗೀರಥನಾದ 60ರ ವ್ಯಕ್ತಿ, ಇದು ನಿಸ್ವಾರ್ಥ ಸೇವೆ ಎಂದ ಪೊಲೀಸ್ ಇಲಾಖೆ
ನೀರ್ ಸಾಬ್ (ವಾಟರ್ ಮ್ಯಾನ್) ಎಂದು ಕರೆಯುವ 60 ವರ್ಷ ವಯಸ್ಸಿನ ಸೈಯದ್ ಮಜೀದ್ ಅವರು ಬಳ್ಳಾರಿ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ನೀರಿನ ಬಾಟಲಿಗಳನ್ನು ನೀಡಿ, ಅವರಿಗೆ ಸಹಾಯ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಮಜೀದ್ ತಮ್ಮನ್ನು ಈ ಕಾರ್ಯದಲ್ಲಿ ತೋಡಗಿಸಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ಸಂಚಾರ ಡಿಸಿಪಿ ( ಉತ್ತರ ಬೆಂಗಳೂರು) ಸಿರಿ ಗೌರಿ ತಮ್ಮ ಕಚೇರಿಯಲ್ಲಿ ಸನ್ಮಾನ ಮಾಡಿದ್ದಾರೆ.
ಬೆಂಗಳೂರು ಈಗ ಬಿಸಿ ಬಿಸಿಯಾಗಿದೆ. ಸೂರ್ಯ ಶಾಖಕ್ಕೆ ನಲುಗಿ ಹೋಗಿದೆ. ನೀರಿನ ಹಾಹಾಕರ ಶುರುವಾಗಿದೆ. ಜನ ಮನೆಯಿಂದ ಅಥವಾ ಆಫೀಸ್ನಿಂದ ಹೊರಗೆ ಹೋಗೋದೆ ಬೇಡ ಎಸಿ, ಫ್ಯಾನ್ ಹಾಕಕೊಂಡು ಇಲ್ಲೇ ಇರುವ ಎನ್ನಿಸುತ್ತದೆ. ಆದರೆ ಈ ಬಿಸಿಲಿಗೆ ಟ್ರಾಫಿಕ್ ಪೊಲೀಸರ ಗತಿ, ಅಯ್ಯೋ ಅವರ ಪಾಡು ಯಾರಿಗೂ ಬೇಡ, ಈ ಬಿಸಿಲಿಗೂ ಅವರು ಕೆಸಲ ಮಾಡುವುದು ಅನಿವಾರ್ಯ, ಜನರಿಗಾಗಿ ಸೇವೆ ಮಾಡುವ ಅವರಿಗೆ ಇಲಾಖೆಯಿಂದ ಅನೇಕ ಸೌಲಭ್ಯಗಳನ್ನು ನೀಡುತ್ತಿಲ್ಲ. ಈ ಸಮಯದಲ್ಲಿ ಅವರಿಗೆ ಸರಿಯಾದ ಆಹಾರ ಅಥವಾ ನೀರಿನ ಪೂರೈಕೆ ಇಲ್ಲ. ಸರಿಯಾದ ವಾಶ್ ರೂಮ್ ವ್ಯವಸ್ಥೆ, ಅದರಲ್ಲೂ ಮಹಿಳೆ ಪೊಲೀಸರಿಗೆ ಮುಟ್ಟು ಅಥವಾ ಇನ್ನಿತರ ಸಮಸ್ಯೆ ಕಾಡಿದಾಗ ಅವರಿಗೆ ಬೇಕಾದ ಸೌಕರ್ಯಗಳು ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಇವುಗಳ ನಡುವೆ ಅವರು ಜನರಿಗಾಗಿ ಕೆಲಸ ಮಾಡಬೇಕಿದೆ. ಆದರೆ ಇನ್ನೊಬ್ಬ 60 ವರ್ಷದ ಅಜ್ಜ ನಮ್ಮಗಾಗಿ ಕೆಲಸ ಮಾಡುವ ಈ ಟ್ರಾಫಿಕ್ ಪೊಲೀಸರಿಗೆ ಪ್ರತಿದಿನ ನೀರು ನೀಡಿ ಅವರ ದಾಹವನ್ನು ನೀಗಿಸುತ್ತಿದ್ದಾರೆ.
ನೀರ್ ಸಾಬ್ (ವಾಟರ್ ಮ್ಯಾನ್) ಎಂದು ಕರೆಯುವ 60 ವರ್ಷ ವಯಸ್ಸಿನ ಸೈಯದ್ ಮಜೀದ್ ಅವರು ಬಳ್ಳಾರಿ ರಸ್ತೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ನೀರಿನ ಬಾಟಲಿಗಳನ್ನು ನೀಡಿ, ಅವರಿಗೆ ಸಹಾಯ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಮಜೀದ್ ತಮ್ಮನ್ನು ಈ ಕಾರ್ಯದಲ್ಲಿ ತೋಡಗಿಸಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ಸಂಚಾರ ಡಿಸಿಪಿ ( ಉತ್ತರ ಬೆಂಗಳೂರು) ಸಿರಿ ಗೌರಿ ತಮ್ಮ ಕಚೇರಿಯಲ್ಲಿ ಸನ್ಮಾನ ಮಾಡಿದ್ದಾರೆ.
Sri Syed Mujeeb 60 yrs,lovingly called ‘Neer Saab/water man’ by trfc police on Heb’l stretch,gives wtr Btls to point duty police men &w’mn,felicitated fr his gd work.👏👏.may his breed thrive🙏 pic.twitter.com/PAHPyqmnQM
— DCP Traffic North, Bengaluru (@DCPTrNorthBCP) April 3, 2024
ಇಲಾಖೆಯಿಂದ ಬೆಂಬಲ ಇಲ್ಲ:
ಪ್ರತಿ ವರ್ಷ ಈ ಸಮಯದಲ್ಲಿ ಕೆಲಸ ಮಾಡುತ್ತೇವೆ, ಆದರೆ ಈ ಬಾರಿಯ ಬಿಸಿಲಿನಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ. ಕೆಲವೊಂದು ಬಾರಿ ಟ್ರಾಫೀಕ್ ಕಡಿಮೆ ಇದ್ದಾಗ, ಸ್ವಲ್ಪ ವಿಶ್ರಾಂತಿ ಪಡೆಯುವ ಎಂದು ನೆರಳಿನ ಕಡೆ ಹೋಗಿ ನೀರು ಕುಡಿದು, ಮತ್ತೆ ಕರ್ತವ್ಯಕ್ಕೆ ಬರುತ್ತೇವೆ. ಇಲಾಖೆ ಇದಕ್ಕಾಗಿ ನಮಗಾಗಿ ಒಂದು ಚಿಕ್ಕ ಚೌಕಿಯನ್ನು ನಿರ್ಮಾಣ ಮಾಡಬೇಕು. ಇದರಿಂದ ಸೂರ್ಯನ ಶಾಖವನ್ನು ತಪ್ಪಿಸಿಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಕಾರ್ಮಿಕನಿಗೆ ಮೆಟ್ರೋದಲ್ಲಿ ಬಿಡದೆ ಅವಮಾನ ಆರೋಪ: ನಡೆದಿದ್ದೇನು? ಇಲ್ಲಿದೆ ಸತ್ಯಾಸತ್ಯತೆ
ಬೆಂಗಳೂರು ಈ ಹಿಂದೆ ಉತ್ತಮವಾಗಿತ್ತು:
ಬೆಂಗಳೂರು ಈ ಹಿಂದೆ ತುಂಬಾ ಉತ್ತಮವಾಗಿತ್ತು. ಜನರು ನಮ್ಮ ಕಷ್ಟ ನೋಡಿ ಏನಾದರೂ ಸಹಾಯ ಮಾಡುತ್ತಿದ್ದರು. ಆದರೆ ಇದೀಗ ಕೆಲವೊಂದು ಪೊಲೀಸರು, ಪೋಸ್ ನೀಡಿ, ಜನರ ಜತೆಗೆ ಅಸಭ್ಯವಾಗಿ ನಡೆದುಕೊಂಡ ಕಾರಣ ಜನ ಪೊಲೀಸರಿಂದ ದೂರ ಇದ್ದಾರೆ. ನಮ್ಮ ದಾಹ ಕಡಿಮೆ ಮಾಡಲು ಮಜ್ಜಿಗೆ, ನೀರು, ತಂಪು ಪಾನೀಯಾಗಳನ್ನು ತಂದು ನೀಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ