ಮಹಾಮಾರಿ ಡೆಂಘೀ ಭೀತಿಯಲ್ಲಿ ಗಣಿನಾಡು ಬಳ್ಳಾರಿ

ಮಹಾಮಾರಿ ಡೆಂಘೀ ಭೀತಿಯಲ್ಲಿ ಗಣಿನಾಡು ಬಳ್ಳಾರಿ

ಬಳ್ಳಾರಿ: ಮಹಾಮಾರಿ ಡೆಂಘೀ ಅಟ್ಟಹಾಸ ಮಿತಿ ಮೀರಿದೆ. ಅದ್ರಲ್ಲೂ ಗಣಿನಾಡು ಬಳ್ಳಾರಿಯಲ್ಲಿ ಜಿಲ್ಲೆಯಲ್ಲಂತೂ ಡೆಡ್ಲಿ ಡೆಂಗ್ಯೂ ರುದ್ರನರ್ತನ ಮಾಡುತ್ತಿದೆ. ನಿತ್ಯ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಜನರು ಡೆಡ್ಲಿ ಡೆಂಗ್ಯೂನಿಂದ ಆತಂಕ ಪಡುವಂತಾಗಿದೆ..

ಕ್ಷಣ ಕ್ಷಣಕ್ಕೂ ಆತಂಕ.. ಭಯ.. ಯಾವಾಗ ಏನಾಗುತ್ತೋ ಏನೋ ಅನ್ನೋ ಭೀತಿ ಜೀವ ಹಿಂಡುತ್ತಿದೆ. ಯಾಕಂದ್ರೆ, ಅಂಥಾದ್ದೊಂದು ಮಹಾಮಾರಿ ಡೆಂಘೀ ಬೆಂಬಿಡದೇ ಕಾಡುತ್ತಿದೆ. ಅಮಾಯಕರನ್ನು ಬಲಿಪಡೆಯೋಕೆ ಹೊಂಚು ಹಾಕಿ ಕುಳಿತಿದೆ.

ಗಣಿನಾಡಲ್ಲಿ ಮಹಾಮಾರಿ ಡೆಂಘೀ ಅಟ್ಟಹಾಸ!
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಡೇಂಜರ್ ಡೆಂಘೀ ಹಾವಳಿ ಮಿತಿ ಮೀರಿದೆ. ಇದ್ರ ಪರಿಣಾಮ ವಿಮ್ಸ್ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳ ತುಂಬಾ ರೋಗಿಗಳೇ ತುಂಬಿದ್ದಾರೆ. ಅದ್ರಲ್ಲೂ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ ಹಾಗೂ ನೆರೆಯ ಆಂಧ್ರ ಪ್ರದೇಶದಿಂದಲೂ ಡೆಂಘೀ ಕಾಣಿಸಿಕೊಂಡವರು ಚಿಕಿತ್ಸೆ ಪಡೆಯಲು ವಿಮ್ಸ್​ಗೆ ಆಗಮಿಸುತ್ತಿದ್ದಾರೆ.

ಜಿಲ್ಲೆಯ ಪೈಕಿ ಬಳ್ಳಾರಿ ನಗರ ಹಾಗೂ ಹೊಸಪೇಟೆಯಿಂದ್ಲೇ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗುತ್ತಿವೆ. 2019 ಜನವರಿಯಿಂದ ನವೆಂಬರ್ ತಿಂಗಳವರೆಗೆ ಜಿಲ್ಲೆಯಲ್ಲಿ 3,960 ಶಂಕಿತ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ರೆ, 178 ಖಚಿತ ಡೇಂಘೀ ಪ್ರಕರಣ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕಳೆದ ವರ್ಷ ಶಂಕಿತ ಡೆಂಘೀಗೆ ಮೂವರು ಸಾವನ್ನಪ್ಪಿದ್ದಾರೆ.

ಇನ್ನು, ಅದೆಷ್ಟೋ ಮಕ್ಕಳಿಗೆ ತಾಲೂಕು ಕೇಂದ್ರಗಳಲ್ಲಿ ಸಮರ್ಪಕ ಚಿಕಿತ್ಸೆ ಸಿಗದಿರುವ ಕಾರಣ ಕೆಲವರು ಸಾವಿನ ಕದ ತಟ್ಟುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಡೆಂಘೀಗಾಗಿ ಚಿಕಿತ್ಸೆಗಾಗಿ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇಷ್ಟದ್ರೂ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಪಾಲಿಕೆಯಾಗಲೀ ಗ್ರಾಮಗಳಲ್ಲಿ, ನಗರಗಳಲ್ಲಿ ಜನರಲ್ಲಿ ನೈಮರ್ಲ್ಯ ಕುರಿತು ಜಾಗೃತಿ ಮೂಡಿಸುವುದು, ಸ್ವಚ್ಛತೆ ಕಾಪಾಡುವುದು ಸೇರಿದಂತೆ ಡೇಂಜರ್ ಡೆಂಘೀ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಅನ್ನೋ ಆರೋಪಗಳು ಕೇಳಿಬರುತ್ತಿವೆ.

ಒಟ್ನಲ್ಲಿ, ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದ್ರಿಂದ ಜನರು ಭಯಬೀತರಾಗಿದ್ದಾರೆ. ಡೆಂಘೀ ನಿಯಂತ್ರಣ ಮಾಡಬೇಕಿದ್ದ ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಪೂರ್ಣ ನಿರ್ಲಕ್ಷ್ಯವಹಿಸಿವೆ. ಇದು ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.

Click on your DTH Provider to Add TV9 Kannada