ಬಳ್ಳಾರಿ: ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಓ ಆಗಿರುವ IAS ಅಧಿಕಾರಿ ಕೆ ಆರ್ ನಂದಿನಿ ಅವರು (Bellary ZP CEO IAS KR Nandini) ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ (Bellary District Hospital) ಮಾಡಿಸಿಕೊಂಡಿದ್ದು, ನಾರ್ಮಲ್ ಡೆಲಿವರಿ (normal delivery) ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಈ IAS ಅಧಿಕಾರಿ ಮಾದರಿಯಾಗಿದ್ದಾರೆ. ಬಳ್ಳಾರಿಯ ಗೌಸ್ ಆಸ್ಪತ್ರೆಯಲ್ಲಿ ( ಜಿಲ್ಲಾಸ್ಪತ್ರೆ ) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ನಂದಿನಿ. ನಾರ್ಮಲ್ ಡಿಲೇವರಿ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆ ನಂತರ ಅಮ್ಮ ಹಾಗೂ ಮಗು ಸುರಕ್ಷಿತವಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ. ಎನ್. ಬಸರೆಡ್ಡಿ ಹಾಗೂ ಸಿಬ್ಬಂದಿ ನಂದಿನಿ ಅವರಿಗೆ ಅಗತ್ಯ ಚಿಕಿತ್ಸೆ ಮತ್ತು ಆರೈಕೆ ಮಾಡಿದ್ದಾರೆ.
ನಂದಿನಿ ಕೋಲಾರದ ಕೆಂಬೋಡಿ ಗ್ರಾಮದವರು:
2017ನೇ ಬ್ಯಾಚಿನ ಅಧಿಕಾರಿ ಕೆ ಆರ್ ನಂದಿನಿ ಅವರು IAS ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಎರಡು ವರ್ಷಗಳ ಹಿಂದೆ ಬಳ್ಳಾರಿಗೆ ಬಂದವರು. ಅದಕ್ಕೂ ಮುನ್ನ ತಿಪಟೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದರು. ನಂದಿನಿ ಕೋಲಾರದ ಕೆಂಬೋಡಿ ಗ್ರಾಮದವರು (Kembodi village in Kolar).
ಕನ್ನಡ ಮೀಡಿಯಂನಲ್ಲಿ ವ್ಯಾಸಂಗ ಮಾಡಿರುವ ಕೆ ಆರ್ ನಂದಿನಿ ಬೆಳಗಾವಿಯ ಹೆಸರಾಂತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (Visvesvaraya Technological University -VTU) ಸಿವಿಲ್ ಎಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲ್ ಪದವಿ ಪಡೆದವರು.
4 ವರ್ಷಗಳ ಹಿಂದೆ, ಇದೇ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ…
ಇದಕ್ಕೂ ಮೊದಲು ಸರಿಯಾಗಿ 4 ವರ್ಷಗಳ ಹಿಂದೆ, ಇದೇ ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ IAS ಅಧಿಕಾರಿ ಎಸ್ ಎಸ್ ನಕುಲ್ ಅವರ ಪತ್ನಿ ಪೂಜಾ ಸಹ ಇದೇ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮತ್ತೊಬ್ಬ ಹಿರಿಯ ಐಎಎಸ್ ಡಾ. ರಾಜೇಂದ್ರ ಅವರ ಪತ್ನಿ, ಜಿಲ್ಲಾ ಮುಖ್ಯ ನ್ಯಾಯಾಧೀಶ ಬಿರಾದರ್ ಅವರ ಪುತ್ರಿ, ಮೇಯರ್ ಉಮಾದೇವಿ ಅವರ ಮಕ್ಕಳಿಗೂ ಸಹ ಜಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗಿದೆ. ಇದರೊಂದಿಗೆ ಸರ್ಕಾರಿ ಆಸ್ಪತ್ರೆಗಳು ಸುರಕ್ಷಿತವಲ್ಲ ಎಂಬ ತಪ್ಪು ಭಾವನೆಯನ್ನು ಹೋಗಲಾಡಿಸಿದರು. ಜೊತೆಗೆ ಐಎಎಸ್ ಅಂತಹ ಅಧಿಕಾರಿ ವೃಂದ ಖಾಸಗೀ ಸವಲತ್ತುಗಳಿಗೆ ಜೋತು ಬೀಳುತ್ತಾರೆ ಎಂಬ ತಪ್ಪು ಅನಿಸಿಕೆಯನ್ನೂ ದೂರ ಮಾಡಿದ್ದರು.
Also Read:
Cyclone Asani: ಮುಂದಿನವಾರ ಅಪ್ಪಳಿಸಲಿದೆ ಅಸನಿ ಚಂಡಮಾರುತ; ಹವಾಮಾನ ಇಲಾಖೆಯಿಂದ ಎಚ್ಚರಿಕೆ
Published On - 4:02 pm, Thu, 17 March 22