ಬಳ್ಳಾರಿ: ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಸಮಾವೇಶದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆಪಿಪಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್, ಹರಿಪ್ರಸಾದ್, ಸುರ್ಜೇವಾಲ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ಡಿ.ಕೆ.ಸುರೇಶ್, ಉಗ್ರಪ್ಪ ಸೇರಿ ಪ್ರಮುಖ ನಾಯಕರು ಭಾಗಿಯಾಗಿದ್ದಾರೆ.
ಬಳ್ಳಾರಿಯಲ್ಲಿ ‘ಭಾರತ್ ಜೋಡೋ’ ಯಾತ್ರೆ ಅಂತ್ಯವಾಗಿದ್ದು ಯಾತ್ರೆ ಪ್ರಯುಕ್ತ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಬಳ್ಳಾರಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ದೇಶದ ಜನತೆಯನ್ನು ಒಂದುಗೂಡಿಸಲು ಯಾತ್ರೆ ಮಾಡಿದ್ದೇವೆ. ಬಿಜೆಪಿ, ಆರ್ಎಸ್ಎಸ್ ವಿಚಾರಧಾರೆಗಳ ವಿರುದ್ಧ ಯಾತ್ರೆ ನಡೆದಿದೆ. ಬಿಜೆಪಿ ಸರ್ಕಾರ ದೇಶವನ್ನು ವಿಭಜಿಸುವ ಕೆಲಸ ಮಾಡ್ತಿದೆ. ದೇಶದಲ್ಲಿ ಧರ್ಮ, ಜಾತಿ ನೆಪದಲ್ಲಿ ವಿಷಬೀಜ ಬಿತ್ತಲಾಗ್ತಿದೆ. ದ್ವೇಷದ ರಾಜಕಾರಣದಿಂದ ಜನ ಆತಂಕದಲ್ಲಿದ್ದಾರೆ. ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಯಾತ್ರೆ ಮಾಡ್ತಿದ್ದೇವೆ. ಪಾದಯಾತ್ರೆಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳನ್ನ ಆಲಿಸಿದ್ದೇನೆ. ರೈತರು, ಮಹಿಳೆಯರು, ಯುವಕರ ಸಮಸ್ಯೆ ಬಗ್ಗೆ ಕೇಳಿದ್ದೇನೆ. ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಲೆ ಏರಿಕೆ, ಜಿಎಸ್ಟಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಇದೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪಿಎಸ್ಐ ನೇಮಕಾತಿ ಸೇರಿದಂತೆ ಹಲವು ಹಗರಣಗಳು ನಡೆದಿವೆ. ಈ ಬಗ್ಗೆ ಬಿಜೆಪಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದರು. SC, ST ಮಿಸಲಾತಿ ಹೆಚ್ಚಳ ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್. ನ್ಯಾ.ನಾಗಮೋಹನ್ ದಾಸ್ ಸಮಿತಿ ರಚಿಸಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ. ಮೀಸಲಾತಿ ಹೆಚ್ಚಳಕ್ಕೆ ಇಷ್ಟು ವರ್ಷ ವಿಳಂಬ ಮಾಡಿದ್ದೇಕೆ? ಎಂದು ಪ್ರಶ್ನಿಸಿದರು.
ಕರ್ನಾಟಕದ ಜನತೆಗೆ ನನ್ನ ಧನ್ಯವಾದ
ನಮ್ಮ ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕ. ಚಿಕ್ಕಮಗಳೂರಿನ ಜನರು ಇಂದಿರಾ ಗಾಂಧಿರನ್ನು ಗೆಲ್ಲಿಸಿದ್ರು. ನಮ್ಮ ತಾಯಿ ಸೋನಿಯಾರನ್ನು ಬಳ್ಳಾರಿ ಜನ ಗೆಲ್ಲಿಸಿದ್ರು. ಕರ್ನಾಟಕದ ಜನತೆಗೆ ನನ್ನ ಧನ್ಯವಾದಗಳು ರಾಹುಲ್ ಗಾಂಧಿ ಧನ್ಯವಾದ ತಿಳಿಸಿದರು.
ಸಮಾವೇಶದಲ್ಲಿ ಛತ್ತೀಸ್ಗಢ ಸಿಎಂ ಬಘೇಲ್ ಭಾಷಣ ಮಾಡಿದ್ದು, ‘ಜೋಡೋ’ ಯಾತ್ರೆ 1 ಸಾವಿರ ಕಿ.ಮೀ. ಪೂರೈಸಿದೆ. ಜನರಿಗೆ ಅಧಿಕಾರ ಸಿಗಬೇಕು ಅಂತ ಸುಸ್ತಾಗದೇ ರಾಹುಲ್ ಹೆಜ್ಜೆ ಹಾಕ್ತಿದ್ದಾರೆ. ನಿರುದ್ಯೋಗ, ಬಡತನ, ಜಾತಿ ನಡುವೆ ಕಂದಕ ಅಳಿಸಲು ರಾಹುಲ್ ಗಾಂಧಿ ಜನರ ನಡುವೆ ಬಂದಿದ್ದಾರೆ. ದೇಶದಲ್ಲಿ ಕಠಿಣ ಪರಿಸ್ಥಿತಿ ಎದುರಾದಗ ಪಾದಯಾತ್ರೆಯಿಂದಲೇ ಸಮಸ್ಯೆ ಬಗೆಹರಿದಿದೆ. ಹಿಂದೆ ಈ ದೇಶದಲ್ಲಿ ಸಾಕಷ್ಟು ಯಾತ್ರೆಗಳು ನಡೆದಿವೆ. ಗಾಂಧಿ ಸೇರಿ ಹಲವು ನಾಯಕರು ಯಾತ್ರೆ ನಡೆಸಿದ್ದಾರೆ. ಅವರೆಲ್ಲ ದೇಶ ಒಂದುಗೂಡಿಸಲು ಯಾತ್ರೆ ನಡೆಸಿದ್ದಾರೆ. ಈಗ ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿರೋಧಿ ನೀತಿಗಳ ವಿರುದ್ಧ ಈ ಯಾತ್ರೆ ಎಂದು ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್ ಹೇಳಿದರು. ಇದನ್ನೂ ಓದಿ: ಬಾಗೇಪಲ್ಲಿಯಲ್ಲಿರುವ ಜಿ ಮದ್ದೇಪಲ್ಲಿಗೆ ಹೋಗಬೇಕಾದರೆ ನಿಮಗೆ ಉದ್ದ ಜಿಗಿತ ಗೊತ್ತಿರಬೇಕು!
ಭಾರತ್ ಜೋಡೋ ಸಮಾವೇಶದಲ್ಲಿ ರಾಜಸ್ಥಾನ ಸಿಎಂ ಗೆಹ್ಲೋಟ್ ಭಾಷಣ
ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮಾತನಾಡಿದ್ದು, ಇಂದಿರಾ ಗಾಂಧಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಇಂದು ಯಾತ್ರೆ 1,000 ಕಿಲೋ ಮೀಟರ್ ಪೂರ್ಣಗೊಂಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಚುನಾವಣೆಗೆ ಸ್ಪರ್ಧಿಸಿದ್ರು. ಆಗ ನಾವೆಲ್ಲಾ ಪ್ರಚಾರಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದೆವು. ಅಭೂತಪೂರ್ವ ಮತಗಳಿಂದ ಅವರನ್ನು ಗೆಲ್ಲಿಸಿ ಕಳಿಸಿದ್ದೀರಿ ಎಂದು ಇಂದಿರಾ ಗಾಂಧಿ ಅವರ ಚುನಾವಣೆ ಸಂದರ್ಭವನ್ನು ನೆನಪಿಸಿಕೊಂಡರು. ದೇಶದಲ್ಲಿ ಇಂದು ಸಂವಿಧಾನವನ್ನು ಲೇವಡಿ ಮಾಡಲಾಗುತ್ತಿದೆ. ಸಮಾಜದಲ್ಲಿ ಜಾತಿಯ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಇದನ್ನೆಲ್ಲವೂ ಕಿತ್ತಿ ಒಗೆಯೋದಕ್ಕೆ ಜೋಡೋ ಪಾದಯಾತ್ರೆ ನಡೆದಿದೆ. ದೇಶದಲ್ಲಿ ಹಿಂಸೆಯ ವಾತಾವರಣ ಇದೆ. ಈ ದೇಶದಲ್ಲಿ ಭಾತೃತ್ವದ ವಾತಾವರಣ ನಿರ್ಮಾಣ ಆಗಬೇಕು. ಇಂದಿರಾ ಗಾಂಧಿಯವರು ದೇಶಕ್ಕಾಗಿ ಪ್ರಾಣ ಕೊಟ್ಟರು. ಮುಂದಿನ ದಿನ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
‘ಜೋಡೋ’ ಯಾತ್ರೆ ಚುನಾವಣೆಗೋಸ್ಕರ ಮಾಡ್ತಿಲ್ಲ
‘ಜೋಡೋ’ ಯಾತ್ರೆ ಚುನಾವಣೆಗೋಸ್ಕರ ಮಾಡ್ತಿಲ್ಲ. ಬಿಜೆಪಿ, RSS ಧರ್ಮಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿದೆ. ರಾಹುಲ್, ಸೋನಿಯಾ ಗಾಂಧಿ ಪ್ರಯತ್ನದಿಂದ 370 ಜಾರಿಯಾಗಿದೆ. ಬಿಜೆಪಿ, RSS ಜನರಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರ ತರಬೇಕು. ಈ ರಾಜ್ಯದಲ್ಲಿರುವ ಕಮಿಷನ್ ಸರ್ಕಾರ ತೆಗೆದುಹಾಕಬೇಕು. ನಾವೆಲ್ಲ ಒಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇದನ್ನೂ ಓದಿ: ‘ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡಗೆ ಇನ್ಸೆಕ್ಯೂರ್ ಭಾವನೆ ಇರಲಿಲ್ಲ’; ನೇರ ಮಾತಲ್ಲಿ ಹೇಳಿದ್ದ ರಶ್ಮಿಕಾ
ನಿಮ್ಮ ಹೆಜ್ಜೆ ದೇಶಕ್ಕೊಂದು ಕೊಡುಗೆ: ಡಿ.ಕೆ.ಶಿವಕುಮಾರ್ ಭಾಷಣ
ಇಂದು 1 ಸಾವಿರ ಕಿಲೋಮೀಟರ್ ಪೂರ್ಣಗೊಳಿಸಿದ್ದೇವೆ. ಕಳೆದ 2 ವರ್ಷದಿಂದ ಸಹಕರಿಸಿದ ಎಲ್ಲರಿಗೂ ನಮಸ್ಕಾರಗಳು. ಯಾತ್ರೆಗೆ ಸೋನಿಯಾ ಗಾಂಧಿ ಬಂದು ದಸರಾ ಆಚರಿಸಿದ್ದಾರೆ. ಸೋನಿಯಾ ಗಾಂಧಿ ಭಾಗಿಯಾಗಿ ನಮಗೆಲ್ಲ ಶಕ್ತಿ ನೀಡಿದ್ದಾರೆ. ಅದೊಂದು ಐತಿಹಾಸಿಕ ಹೆಜ್ಜೆ. ನಮ್ಮ ರಾಜ್ಯದ ಪಾಲಿಗೆ ಇದೊಂದು ಸುವರ್ಣ ಅವಕಾಶ. ಈ ಯಾತ್ರೆ 150 ಸ್ಥಾನಗಳನ್ನ ಗೆಲ್ಲಲು ನೆರವಾಗುತ್ತೆ. ಈ ಪಾದಯಾತ್ರೆ ಖರ್ಗೆ, ಡಿಕೆಶಿ ಸಿಎಂ ಆಗುವುದಕ್ಕೆ ಅಲ್ಲ. ನಿಮ್ಮ ಹೆಜ್ಜೆ ದೇಶಕ್ಕೊಂದು ಕೊಡುಗೆ. ಈ ಹೆಜ್ಜೆ ರೈತರ ಬದುಕು, ಉದ್ಯೋಗದ ಸೃಷ್ಟಿಗೆ. ಬಿಜೆಪಿ ತೊಲಗಿಸಲು ನೀವು ಕಾರಣರಾಗಬೇಕು. ವಾಗ್ಧಾನ ನಮ್ಮದು ವಿಶ್ವಾಸ ನಿಮ್ಮದು ಎಂದು ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ಕೊಟ್ಟರು.
ದೇಶದಲ್ಲೀಗ ಭಯದ ವಾತಾವರಣ ನಿರ್ಮಾಣವಾಗಿದೆ
ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿದ್ದು ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆದಿದೆ. ಇದು ಚುನಾವಣಾ ಉದ್ದೇಶಕ್ಕೆ ಕೈಗೊಂಡ ಪಾದಯಾತ್ರೆ ಅಲ್ಲ. ಇದೊಂದು ಐತಿಹಾಸಿಕ ಪಾದಯಾತ್ರೆ. ಐಕ್ಯತಾ ಯಾತ್ರೆ ಇದೀಗ 1,000 ಕಿ.ಮೀ. ಪೂರೈಸಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಯಾತ್ರೆ ಮಾಡಿದ್ದೇವೆ. ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ವಿಷಬೀಜ ಬಿತ್ತಲಾಗ್ತಿದೆ. ದ್ವೇಷ, ಹಿಂಸೆಯ ರಾಜಕಾರಣದಿಂದ ಜನ ಆತಂಕದಲ್ಲಿದ್ದಾರೆ. ಸಂಘಪರಿವಾರ, ಹಿಂದೂ ಸಂಘಟನೆಗಳಿಂದ ಆತಂಕ ಸೃಷ್ಟಿಯಾಗಿದೆ. ಬಡವರು, ದಲಿತರು, ಹಿಂದುಳಿದವರು ಆತಂಕದಲ್ಲಿದ್ದಾರೆ. ದೇಶದಲ್ಲೀಗ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು. ಇನ್ನು ಸಿದ್ದರಾಮಯ್ಯ ಭಾಷಣದ ವೇಳೆ ಅಭಿಮಾನಿಗಳ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕೂಗು
Published On - 3:26 pm, Sat, 15 October 22