Vijayanagara District: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಉದ್ಘಾಟನೆ

TV9 Web
| Updated By: ganapathi bhat

Updated on:Oct 02, 2021 | 8:19 PM

Vijayanagara: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಜಿಲ್ಲೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದ್ದಾರೆ. 6 ತಾಲೂಕುಗಳನ್ನು ಒಳಗೊಂಡ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆಯಾಗಿದೆ. ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಲಾಗಿದೆ.

ಕರ್ನಾಟಕದ 31ನೇ ಮತ್ತು ನೂತನ ಜಿಲ್ಲೆಯಾಗಿ ಇಂದು (ಅಕ್ಟೋಬರ್ 2) ವಿಜಯನಗರ ಜಿಲ್ಲೆ ಉದ್ಘಾಟನೆಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಜಿಲ್ಲೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದ್ದಾರೆ. 6 ತಾಲೂಕುಗಳನ್ನು ಒಳಗೊಂಡ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆಯಾಗಿದೆ. ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಲಾಗಿದೆ.

ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಮಠಾಧೀಶರು ಭಾಗಿಯಾಗಿದ್ದಾರೆ. ಸಿಎಂ ಬೊಮ್ಮಾಯಿ ವಿಜಯಸ್ತಂಭ ಅನಾವರಣಗೊಳಿಸಿದ್ದಾರೆ. ನೂತನ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನಡೆಸಿದ್ದಾರೆ. ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರಗಳ ವಿತರಣೆ ಮಾಡಲಾಗಿದೆ. ನೂತನ ವಿಜಯನಗರ ಜಿಲ್ಲೆಯ ಜಾಲತಾಣ ಉದ್ಘಾಟನೆಯನ್ನು ಕೂಡ ಮಾಡಲಾಗಿದೆ.

ಸಚಿವ ಆನಂದ್​ ಸಿಂಗ್​ ಸಂಭ್ರಮ ಪಡುವ ಘಳಿಗೆ ಇದು. ವಿಜಯನಗರ ನೂತನ ಜಿಲ್ಲೆ ಮಾಡುವ ಮೂಲಕ ಸಚಿವ ಆನಂದ್​ ಸಿಂಗ್​ ಮತ್ತೊಂದು ಇತಿಹಾಸ ಸೃಷ್ಟಿಸಿದ್ದಾರೆ. ಸಿಂಗ್​ ನೂತನ ಜಿಲ್ಲೆಗೆ ರಾಜಕೀಯ ಜೀವನ ಮುಡಿಪಾಗಿಟ್ಟರು. ನೂತನ ಜಿಲ್ಲೆಯ ರಚನೆಗೆ ಕಾರಣರಾದ ಸಿಂಗ್​ಗೆ ಅಭಿನಂದನೆ ಎಂದು ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Vijayanagara District: ಉದಯವಾಯಿತು ವಿಜಯನಗರ ಜಿಲ್ಲೆ; ಹೊಸಪೇಟೆಯಲ್ಲಿ ಕರ್ನಾಟಕದ 31ನೇ ಜಿಲ್ಲೆಯ ಉದ್ಘಾಟನೆ

ಇದನ್ನೂ ಓದಿ: ಕರ್ನಾಟಕದ 31ನೇ ಜಿಲ್ಲೆಯಾಗಿ ಉದಯಿಸಲಿದೆ ವಿಜಯನಗರ; ಹಂಪಿ ಪರಿಕಲ್ಪನೆಯಲ್ಲಿ ವೇದಿಕೆ ಸಿದ್ಧ

Published on: Oct 02, 2021 08:16 PM