ಪ್ರೀತಿಗೆ ವಿರೋಧ: ಓಡಿ ಹೋಗಿ ಮದುವೆಯಾಗಿ ಬಂದ ದಂಪತಿಗೆ ವಧುವಿನ ಪೋಷಕರಿಂದ ಜೀವ ಬೆದರಿಕೆ

| Updated By: ವಿವೇಕ ಬಿರಾದಾರ

Updated on: Jan 28, 2024 | 11:03 AM

ಪ್ರೀತಿಸಿ ಮದುವೆಯಾಗಿದಕ್ಕೆ ನವ ಜೋಡಿಗಳಿಗೆ ವಧುವಿನ ಪೋಷಕರು ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ಪೋಷಕರು ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನವ ಜೋಡಿ ರಕ್ಷಣೆ ಕೋರಿ ಬಳ್ಳಾರಿ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ.

ಬಳ್ಳಾರಿ, ಜನವರಿ 28: ಪ್ರೀತಿಸಿ ಮದುವೆಯಾಗಿದಕ್ಕೆ ನವ ಜೋಡಿಗಳಿಗೆ ವಧುವಿನ ಪೋಷಕರು ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ಪೋಷಕರು ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನವ ಜೋಡಿ ರಕ್ಷಣೆ ಕೋರಿ ಬಳ್ಳಾರಿ (Bellary) ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ (SP) ಅವರಿಗೆ ಮನವಿ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಗೋನಾಳ ಗ್ರಾಮದ ನಾರಾಯಣ, ಸಿರಗುಪ್ಪ ತಾಲೂಕಿನ ಊಳೂರು ಗ್ರಾಮದ ಶಿಲ್ಪಾ ಕಳೆದ ಐದು ವರ್ಷದಿಂದ ಪ್ರೀತಿಸುತ್ತಿದ್ದಾರೆ. ಶಿಲ್ಪಾ ಬಳ್ಳಾರಿಯಲ್ಲಿ ದೊಡ್ಡಮ್ಮನ ಮನೆಯಲ್ಲಿದ್ದುಗೊಂಡು, ಹೈಸ್ಕೂಲ್ ಓದುವ ವೇಳೆ ನಾರಾಯಣನನ್ನು ಪ್ರೀತಿ ಮಾಡಲು ಆರಂಭಿಸಿದ್ದಾರೆ.

9ನೇ ತರಗತಿಯಲ್ಲಿ ಶಿಲ್ಪಾ ಅವರಿಗೆ ಪ್ರೀತಿ ಚಿಗುರಿದೆ. ಯುವಕ ನಾರಾಯಣ್​ ಜಿಲ್ಲಾ ಪಂಚಾಯಿತಿಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೇಮಿಗಳು ಒಂದೇ ಜಾತಿಯವರಾಗಿದ್ದಾರೆ. ಈ ಪ್ರೀತಿ ವಿಚಾರ ಶಿಲ್ಪಾ ಮನೆಯವರಿಗೆ ತಿಳಿದಿದೆ. ಆಗ ಶಿಲ್ಪಾ ಅಣ್ಣಂದಿರು ಇಬ್ಬರನ್ನು ಬೇರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ನಾರಾಯಾಣ ಪೋಷಕರು ಇವರ ಮದುವೆ ಒಪ್ಪಿಗೆ ನೀಡಿದ್ದಾರೆ. ಇನ್ನು ನಾರಾಯಣನನ್ನು ಮರೆಯುವಂತೆ, ಬೇರೆ ಹುಡುಗನನ್ನು ಮದುವೆಯಾಗುವಂತೆ ಶಿಲ್ಪಾರಿಗೆ ಆಕೆಯ ಅಣ್ಣಂದಿರು ಒತ್ತಡ ಹಾಕಲು ಆರಂಭಿಸಿದ್ದಾರೆ. ಆದರೆ ಶಿಲ್ಪಾ ಇದಕ್ಕೆ ಒಪ್ಪದೆ ಮನೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಟಮಟ ಮಧ್ಯಾಹ್ನ ಕಾರಿನಲ್ಲೇ ಕಾಮತೃಷೆ ತೀರಿಸಲು ಮುಂದಾದ ಜೋಡಿ, ಆಮೇಲೇನಾಯ್ತು?

ಬಳಿಕ ನಾರಾಯಣ ಮತ್ತು ಶಿಲ್ಪಾ ಓಡಿ ಹೋಗಿ ಆಂಧ್ರ ಪ್ರದೇಶ ನರಸಿಂಹ ದೇವಾಯದಲ್ಲಿ ಇಂದು (ಜ.28) ಮದುವೆಯಾಗಿದ್ದಾರೆ. ಇದೀಗ ನವ ಜೋಡಿ ಮರಳಿ ಬಳ್ಳಾರಿಗೆ ಬಂದಿದ್ದು, ಪೋಷಕರು ಶಿಲ್ಪಾಗೆ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಾರಾಯಣ ಹತ್ತಿರ ಆಸ್ತಿ ಇಲ್ಲವೆಂದು ಶಿಲ್ಪಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಶಿಲ್ಪಾ ಪಿಯುಸಿವರೆಗು ಓದಿದ್ದು, ನಾರಾಯಣ್ ಬಿ.ಕಾಂ ಪದವೀಧರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ