ಮದುವೆ ಮನೆಯಲ್ಲೂ ರಾಮಜಪ: ರಾಮಮಂದಿರ ಉದ್ಘಾಟನೆ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಫುಲ್ ಖುಷ್
ಭಾರತದ ಶತಕೋಟಿ ರಾಮನ ಭಕ್ತರು ಕಂಡಿದ್ದ ಕನಸು ಇಂದು ನನಸಾಗಿದ್ದು, ಅಯೋಧ್ಯೆಯಲ್ಲಿ ತಲೆಎತ್ತಿ ನಿಂತಿರುವ ರಾಮ ಮಂದಿರದ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದ್ದು, ಅದರಂತೆಯೇ ಕರುನಾಡಿನ ಗಲ್ಲಿ ಗಲ್ಲಿಯಲ್ಲೂ ರಾಮೋತ್ಸವದ ಸಂಭ್ರಮ ಸಡಗರ ಮನೆ ಮಾಡಿದೆ. ಇನ್ನು ದಾವಣೆಗರೆಯಲ್ಲಿ ನಡೆದ ಮದುವೆ ಮನೆಯಲ್ಲೂ ರಾಮನನನ್ನು ಜಪಿಸಿದ್ದು, ರಾಮಮಂದಿರ ಉದ್ಘಾಟನೆಯಂದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದರಿಂದ ನವ ಜೋಡಿ ಫುಲ್ ಖುಷ್ ಆಗಿದೆ.