ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದ ಪೊಲೀಸ್ ಪೇದೆಗಳ ವಿರುದ್ಧವೇ ಕೇಸ್ ಬುಕ್, ಕೆಲಸದಿಂದ ಸಸ್ಪೆಂಡ್

| Updated By: ವಿವೇಕ ಬಿರಾದಾರ

Updated on: Oct 26, 2022 | 8:34 PM

ದೀಪಾವಳಿ ಹಿನ್ನೆಲೆ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ನಾಲ್ವರು ಪೋಲಿಸ್​ ಪೇದೆಗಳು ದಾಳಿ ಮಾಡಿದ್ದು, ಪೇದೆಗಳು ಮೂವರು ಜೂಜುಕೋರರಿಂದ 20 ಸಾವಿರ ಹಣ ಹಾಗೂ ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.

ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದ ಪೊಲೀಸ್ ಪೇದೆಗಳ ವಿರುದ್ಧವೇ ಕೇಸ್ ಬುಕ್, ಕೆಲಸದಿಂದ ಸಸ್ಪೆಂಡ್
ಸಾಂಧರ್ಬಿಕ ಚಿತ್ರ
Follow us on

ವಿಜಯನಗರ: ಈ ದೀಪಾವಳಿ ಹಬ್ಬ ಪೊಲೀಸ್​ ಪೇದಗಳ ಪಾಲಿಗೆ ಮರೆಯಲಾರದಂತ ಹಬ್ಬವಾಗಿದೆ. ಎಲ್ಲಡೆ ಬೆಳಕು ಆವರಿಸಿದರೆ ಇವರ ಜೀವನದಲ್ಲಿ ಕತ್ತಲು ಆವರಿಸಿತು. ದೀಪಾವಳಿ (Deepavali) ಹಿನ್ನೆಲೆ ಇಸ್ಪೀಟ್  (Gambling) ಆಡುತ್ತಿದ್ದ ಅಡ್ಡೆ ಮೇಲೆ ನಾಲ್ವರು ಪೋಲಿಸ್​ ಪೇದೆಗಳು (Police Constable) ದಾಳಿ ಮಾಡಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡು ಕೆಲ ಜೂಜುಕೋರರು ಓಡಿ ಹೋಗಿದ್ದಾರೆ. ಸಿಕ್ಕಿ ಬಿದ್ದ ಮೂವರು ಜೂಜುಕೋರರ ಬಳಿ 20 ಸಾವಿರ ಹಣ ಹಾಗೂ ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.

ಬಳಿಕ ವೆಂಕಟೇಶ್ ಎಂಬವರು ಸ್ಥಳಿಯರು ಪ್ರಕರಣದ ಕುರಿತು ಮಾಹಿತಿ ಪಡೆಯಲು ಪೊಲೀಸ್​ ಠಾಣೆಗೆ ಬಂದಿದ್ದಾರೆ. ಈ ವೇಳೆ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ನಂತರ ವೆಂಕಟೇಶ್​​ ನಾಲ್ವರು ಪೊಲೀಸ್​​ ಪೇದಗಳ ವಿರುದ್ಧ ಹೊಸಪೇಟೆ ಪಟ್ಟಣ ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ನಾಲ್ವರು ಪೊಲೀಸ್​ ಪೇದೆಗಳಾದ ಮಹೇಶ. ಅಭಿಷೇಕ್. ಮಂಜುನಾಥ, ಶ್ರೀಕಾಂತರನ್ನು ಪೊಲೀಸರು ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ.

ನ್ಯಾಯಾಲಯ ನಾಲ್ವರು ಪೇದೆಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನಂತರ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ನಾಲ್ವರು ಪೇದೆಗಳನ್ನು ಅಮಾನತು ಮಾಡಿ ಎಸ್​.ಪಿ ಡಾ. ಕೆ ಅರುಣ್ ಆದೇಶ ಹೊರಡಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:33 pm, Wed, 26 October 22