ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ! ಮಕ್ಕಳಿಂದ ಮನೆಕೆಲಸ ಮಾಡಿಸಿಕೊಂಡ ಸರ್ಕಾರಿ ಶಿಕ್ಷಕ, ಶಿಕ್ಷಣ ಇಲಾಖೆಯಿಂದ ಗೇಟ್ ಪಾಸ್

| Updated By: ಸಾಧು ಶ್ರೀನಾಥ್​

Updated on: Jun 17, 2023 | 12:01 PM

ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ! ಮಕ್ಕಳಿಂದ ಮನೆಕೆಲಸ ಮಾಡಿಸಿಕೊಂಡ ಸರ್ಕಾರಿ ಶಿಕ್ಷಕ, ಶಿಕ್ಷಣ ಇಲಾಖೆಯಿಂದ ಗೇಟ್ ಪಾಸ್, ಕೊನೆಗೆ ಪರಾರಿಯಾದ ಶಿಕ್ಷಕ

ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ! ಮಕ್ಕಳಿಂದ ಮನೆಕೆಲಸ ಮಾಡಿಸಿಕೊಂಡ ಸರ್ಕಾರಿ ಶಿಕ್ಷಕ, ಶಿಕ್ಷಣ ಇಲಾಖೆಯಿಂದ ಗೇಟ್ ಪಾಸ್
ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ! ಶಿಕ್ಷಣ ಇಲಾಖೆಯಿಂದ ಶಿಕ್ಷಕನಿಗೆ ಗೇಟ್ ಪಾಸ್
Follow us on

ಮಕ್ಕಳು ದೇವರು ಸಮಾನ ಅಂತಾರೆ. ಆದ್ರೆ ದೇವರ ಸಮಾನವಾಗಿರೋ ಮಕ್ಕಳ ಬಳಿ ಆ ಶಿಕ್ಷಕ ಮಾಡಿಸಬಾರದ ಕೆಲಸ ಮಾಡಿಸಿದ್ದಾನೆ. ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿದ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಗೇಟ್ ಪಾಸ್ ನೀಡಿದೆ ನೋಡಿ. ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ (Misbehave) ವರ್ತಿಸಿದ ಶಿಕ್ಷಕ (Teacher). ಮಕ್ಕಳಿಂದ (Students) ಮನೆಕೆಲಸ ಮಾಡಿಸಿದ ಶಿಕ್ಷಕ.. ಮಕ್ಕಳ ದೂರಿನ ಮೇರೆಗೆ ಕ್ರಮ ಕೈಗೊಂಡ ಶಿಕ್ಷಣ ಇಲಾಖೆ. ಅಮಾನತಿನ (Suspend) ಬೆನ್ನಲ್ಲೆ ಪರಾರಿಯಾದ ಶಿಕ್ಷಕ. ಇದು ಸರ್ಕಾರಿ ಶಾಲಾ ಶಿಕ್ಷಕನೊಬ್ಬನ ದುವರ್ತನೆಯ ಕಥೆ.

ಈ ಪೋಟೋದಲ್ಲಿರುವ ವ್ಯಕ್ತಿಯ ಹೆಸರು ಶಾಸ್ತ್ರಿ ಕೃಷ್ಣಮೂರ್ತಿ. ಬಳ್ಳಾರಿ ಜಿಲ್ಲೆಯ ಕುರಗೋಡ್ ತಾಲೂಕಿನ ಯಲ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಸಹ ಶಿಕ್ಷಕ. ನಾಲ್ಕೈದು ವರ್ಷಗಳ ಹಿಂದೆಯಷ್ಟೇ ಶಿಕ್ಷಕರಾಗಿ ನೇಮಕಗೊಂಡಿರುವ ಕೃಷ್ಣಮೂರ್ತಿಯ ಕಿತಾಪತಿ ಒಂದಲ್ಲ‌ ಎರಡಲ್ಲ. ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡಬೇಕಾದ ಈ‌ ಶಿಕ್ಷಕ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡೋದು. ಅನುಚಿತವಾಗಿ ನಡೆದುಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ಶಾಲೆಯಲ್ಲಿ ಪಾಠ ಮಾಡೋ ಈ ಶಿಕ್ಷಕ ಮನೆಪಾಠದ ನೆಪಮಾಡಿಕೊಂಡು‌‌ ವಿದ್ಯಾರ್ಥಿನಿಯರಿಗೆ ಮನೆಗೆ ಕರೆಯಿಸಿಕೊಂಡು ಅವರ ಜೊತೆ ಅಸಭ್ಯವಾಗಿ ವರ್ತನೆ ತೋರಿದ್ದಾನೆ. ವಿದ್ಯಾರ್ಥಿಗಳ ಬಳಿ ಮನೆಕೆಲಸ ಮಾಡಿಸಿಕೊಂಡ ದೂರಿನ ಮೇರೆಗೆ ಇದೀಗ ಪರ್ಮನೆಂಟ್ ಆಗಿ ಮನೆಗೆ ಹೋಗಿದ್ದಾನೆ.

ಯಲ್ಲಾಪುರ ಗ್ರಾಮದಲ್ಲೆ ಮನೆ ಮಾಡಿಕೊಂಡಿದ್ದ ಶಾಸ್ತ್ರಿ ಕೃಷ್ಣಮೂರ್ತಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದ್ರೆ ಪತ್ನಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಶಾಲಾ‌ ಮಕ್ಕಳನ್ನ ಮನೆಗೆ ಕರೆಯಿಸಿಕೊಂಡು ಮನೆ ಕೆಲಸ ಮಾಡಿಸಿಕೊಂಡು ಮಕ್ಕಳಿಗೆ ಕಿರುಕುಳ ನೀಡಿ ಅನುಚಿತವಾಗಿ ವರ್ತನೆ ತೋರಿದ್ದಾನೆ.

ಶಾಲಾ ಮಕ್ಕಳು ಗಟ್ಟಿ ಮನಸ್ಸು ಮಾಡಿ ಪೋಷಕರು ಮತ್ತು ಎಸ್ ಡಿಎಂಸಿ ಬಳಿ ದೂರು ಹೇಳಿದ ಬಳಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ ವೇಳೆ ಶಿಕ್ಷಕ ಕೃಷ್ಣಮೂರ್ತಿಯ ಕಿತಾಪತಿ ಬಯಲಿಗೆ ಬಂದಿದೆ. ವಿದ್ಯಾರ್ಥಿಗಳ ದೂರಿನ ಮೇರೆಗೆ ಶಿಕ್ಷಣ ಇಲಾಖೆಯು ಶಿಕ್ಷಕ‌ ಕೃಷ್ಣಮೂರ್ತಿಯನ್ನ ಅಮಾನತು ಮಾಡಿ, ಇಲಾಖೆ ವಿಚಾರಣೆ ಕಾಯ್ದಿರಿಸಿದೆ. ಆದ್ರೆ ತನ್ನ ಮೇಲೆ ಆರೋಪ ಬರುತ್ತಿದ್ದಂತೆ ಶಿಕ್ಷಕ ಕೃಷ್ಣಮೂರ್ತಿ ಯಾರ ಕೈಗೂ ಸಿಗದೇ ಪರಾರಿಯಾಗಿದ್ದಾನೆ.

ಮಕ್ಕಳಿಗೆ ಸರಿಯಾಗಿ ಪಾಠ ಮಾಡಬೇಕಾದ ಶಿಕ್ಷಕ ಕೃಷ್ಣಮೂರ್ತಿಯೇ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತಿಸಿರುವುದು ಇಡಿ ಶಿಕ್ಷಕ ವೃಂದಕ್ಕೆ ಕಪ್ಪುಚುಕ್ಕೆ ತಂದಿದೆ. ಹೀಗಾಗಿ ಶಿಕ್ಷಣ ಇಲಾಖೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಕನಿಗೆ ಗೇಟ್ ಪಾಸ್ ನೀಡಿದೆ. ಹೀಗಾಗಿ ಇತಂಹ ಶಿಕ್ಷಕರ ವಿರುದ್ದ ಶಿಕ್ಷಣ ಇಲಾಖೆ ಮತ್ತಷ್ಟು ಕ್ರಮ‌ ಕೈಗೊಳ್ಳುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನ ಸರಿಪಡಿಸಲು ಮುಂದಾಗಬೇಕಿದೆ. ಆಗ ಮಾತ್ರ ಉಳಿದ ಶಿಕ್ಷಕರಿಗೆ ಗೌರವ ಮತ್ತು ಶಿಕ್ಷಣ ಇಲಾಖೆಗೆ ಉತ್ತಮ ಹೆಸರು ಬರಲಿದೆ.

ಬಳ್ಳಾರಿ ಜಿಲ್ಲಾ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ