Updated on: Dec 10, 2022 | 4:18 PM
ಆನಂದಸಿಂಗ್ ಹಿರಿಯ ಪುತ್ರಿ ವೈಷ್ಣವಿ ಸಿಂಗ್ ಹಾಗೂ ಯಶೋರಾಜ್ ಸಿಂಗ್ ಜಾಧೋನ್ ಮದುವೆ ಜೈಪುರ್ ಪಿಂಕ್ ಪ್ಯಾಲೇಸ್ನಲ್ಲಿ ನಡೆದಿತ್ತು. ಆರತಕ್ಷತೆ ಸಮಾರಂಭಕ್ಕೆ 200 ಅಡಿ ಉದ್ದ ,75 ಅಡಿ ಅಗಲ ವಿಸ್ತೀರ್ಣದಲ್ಲಿ ಅರಮನೆ ಮಾದರಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು.
ಆರತಕ್ಷತೆಯ ಸಮಾರಂಭಕ್ಕಾಗಿ ರಾಜಸ್ಥಾನ ಅರಮನೆ ಮಾದರಿಯಲ್ಲಿ ಸೆಟ್ ಹಾಕಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ನೂತನ ವಧು ವರರು ಅದ್ದೂರಿಯಾಗಿ ವೇದಿಕೆಗೆ ಆಗಮಿಸಿದ ನಂತರ ಗಣ್ಯರು ಹರಸಿ ಹಾರೈಸಿದರು.
ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಹಿರಿಯ ಪುತ್ರಿಯ ಮದುವೆ ಇತ್ತೀಚೆಗಷ್ಟೇ ಜೈಪುರದಲ್ಲಿ ಅದ್ದೂರಿಯಾಗಿ ಜರುಗಿತ್ತು. ಮದುವೆಯ ನಂತರ ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಆರತಕ್ಷತೆ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಕಳೆದ ಚುನಾವಣೆಯಲ್ಲಿ ಪುತ್ರನ ಮದುವೆ ಸಮಾರಂಭ ಮಾಡಿದ್ದ ಆನಂದಸಿಂಗ್ ಈ ಭಾರಿ ಮುಂದಿನ ಚುನಾವಣೆಗೂ ಮುನ್ನ ಪುತ್ರಿಯ ಮದುವೆ ಸಮಾರಂಭ ಮಾಡಿ ಕ್ಷೇತ್ರದ ಜನರಿಗೆ ಆತಿಥ್ಯ ನೀಡಿದ್ದು ವಿಶೇಷವಾಗಿತ್ತು.
ಅರಮನೆ ಮಾದರಿಯಲ್ಲಿ ಸೆಟ್ ರಾಜ ನಿರ್ಮಾಣ, ರಾಜ ರಾಣಿಯಂತೆ ಅದ್ದೂರಿಯಾಗಿ ವೇದಿಕೆಗೆ ಆಗಮಿಸಿದ ದಂಪತಿಗಳು. ನೂತನ ವಧು ವರರನ್ನ ಹರಸಿ ಹಾರೈಸಿದ ಸಾವಿರಾರು ದಂಪತಿಗಳು.
ಅದ್ದೂರಿಯಾಗಿ ನಡೆದ ಆರತಕ್ಷತೆ ಸಮಾರಂಭದಲ್ಲಿ ಬಿಜೆಪಿಯ ನಾಯಕರು. ಸ್ಥಳೀಯ ಮುಖಂಡರು ಪಾಲ್ಗೊಂಡು ನೂತನ ವಧು ವರರನ್ನ ಆರ್ಶಿವದಿಸಿದರು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.