ಬಳ್ಳಾರಿಯಲ್ಲಿ ಶನಿವಾರ ಹೈಡ್ರಾಮಾ! ಬೆಂಗಳೂರು ರೆಸಾರ್ಟ್​ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಸದಸ್ಯರು, ಯಾರಾಗ್ತಾರೆ ಮೇಯರ್?

| Updated By: ಸಾಧು ಶ್ರೀನಾಥ್​

Updated on: Mar 18, 2022 | 6:05 PM

Bellary Mayor: ಬೆಂಗಳೂರಿನ ಖಾಸಗಿ ರೆರ್ಸಾಟ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಸದಸ್ಯರಿಂದ ವೀಕ್ಷಕರು ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ. ನಾಳೆ ಮುಂಜಾನೆ ಕಾಂಗ್ರೆಸ್ ನ ಎಲ್ಲ ಸದಸ್ಯರು ನೇರವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಬಳ್ಳಾರಿಯಲ್ಲಿ ಶನಿವಾರ ಹೈಡ್ರಾಮಾ! ಬೆಂಗಳೂರು ರೆಸಾರ್ಟ್​ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಸದಸ್ಯರು, ಯಾರಾಗ್ತಾರೆ ಮೇಯರ್?
ಡಿಕೆ ಶಿವಕುಮಾರ್​
Follow us on

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಪ್ರಕ್ರಿಯೆ ನಾಳೆ ನಡೆಯಲಿದೆ. ಚುನಾವಣೆ ನಡೆದು 10 ತಿಂಗಳ ನಂತರ ನಡೆಯುತ್ತಿರುವ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ (Bellary Congress) ಬಹುಮತ ಇದ್ದರೂ, ಒಮ್ಮತ ಮೂಡದಿರುವುದು ಪಕ್ಷದ ನಾಯಕರ (DK Shivakumar) ಆತಂಕಕ್ಕೆ‌ ಕಾರಣವಾಗಿದೆ (Bellary Mayor).

ಬಳ್ಳಾರಿ ಮಹಾನಗರ ಪಾಲಿಕೆಯ 39 ಸದಸ್ಯರ ಪೈಕಿ 21 ಸ್ಥಾನಗಳಲ್ಲಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದು, ಪಕ್ಷೇತರರಾಗಿ ಆಯ್ಕೆಯಾಗಿರುವ ಐವರು ಸದಸ್ಯರು ಸಹ ಚುನಾವಣೆ ನಂತರ ಕಾಂಗ್ರೆಸ್ ಸೇರ್ಪಡೆಗೊಂಡ ಪರಿಣಾಮ‌ ಸದಸ್ಯರ ಬಲ ಈಗ 26 ಕ್ಕೆ ಎರಿದೆ. ಜೊತೆಗೆ ಒಬ್ಬರು ಶಾಸಕರು, ಒಬ್ಬ ರಾಜ್ಯಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರ ಮತ ಬೆಂಬಲದಿಂದ 29‌ ಸದಸ್ಯರ ಮತಗಳು ಕಾಂಗ್ರೆಸ್ ಪಕ್ಷದಲ್ಲಿವೆ.

ಮತ ಸದಸ್ಯರ ಸಂಖ್ಯೆ ಆಧರಿಸಿ ಕಾಂಗ್ರೆಸ್ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಅಲಂಕರಿಸುವುದು ಖಚಿತವಾಗಿದೆ‌. ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೆ ರಾಜೇಶ್ವರಿ ಸುಬ್ಬರಾಯಡು ಹಾಗೂ ಪದ್ಮಜಾ ಮಧ್ಯೆ ಪೈಪೋಟಿ ಶುರುವಾಗಿದೆ. ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಹಿರಿಯ ಸದಸ್ಯ ಪಿ ಗಾದೆಪ್ಪ ಹಾಗೂ ಮುಲ್ಲಂಗಿ ನಂದೀಶ್ ಹೆಸರು ಪ್ರಸ್ತಾಪವಾಗಿದ್ದರೂ ಗಾದೆಪ್ಪ ಉಪಮೇಯರ್ ಆಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಳವಾಗಿದೆ.

ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ತಮ್ಮ ಆಪ್ತರಿಗೆ ಮೇಯರ್ ಸ್ಥಾನ ಕಲ್ಪಿಸಲು ಮುಂದಾಗಿದ್ದು ಪಕ್ಷದ ನಾಯಕರು ಮೇಯರ್ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ. ಈ ಮಧ್ಯೆ ಅಧಿಕಾರಕ್ಕಾಗಿ ಪರದಾಡುತ್ತಿರುವ ಬಿಜೆಪಿ ನಾಯಕರು ಕೊನೆ ಕ್ಷಣದವರೆಗೂ ಕಾಯ್ದು ನೋಡುವ ತಂತ್ರಕ್ಕೆ ಮುಂದಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಣ, ಅಧಿಕಾರ ಮತ್ತು ವಾಹನದ ಆಸೆ ತೋರಿಸಿರುವುದು ಕಾಂಗ್ರೆಸ್ ಮುಖಂಡರಲ್ಲಿ ತೀವ್ರ ಆತಂಕ ಮೂಡಿದೆ.

ಕೆಪಿಸಿಸಿ ಡಿ.ಕೆ. ಶಿವಕುಮಾರ್ ಪಕ್ಷ ನಿಷ್ಠೆ ಮತ್ತು ವಾರ್ಡ್ ಮತ್ತು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಆದ್ಯತೆ ನೀಡಬೇಕು. ಈ ಹಿನ್ನಲೆಯಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ಮೇಯರ್ ಮತ್ತು ಉಪ ಮೇಯರ್ ಹುದ್ದೆಯ ಆಕಾಂಕ್ಷಿಗಳು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದು ಒಗ್ಗಟ್ಟಿನ ಮಂತ್ರವನ್ನು ಬೋಧಿಸಿದ್ದಾರೆ.

ಮೇಯರ್ ಉಪಮೇಯರ್ ಚುನಾವಣೆ ದಿನಾಂಕ‌ ಘೋಷಣೆಯಾದ ನಂತರ ಬೆಂಗಳೂರಿನ ಖಾಸಗಿ ರೆರ್ಸಾಟ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಸದಸ್ಯರಿಂದ ವೀಕ್ಷಕರು ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ. ಮಾಜಿ ಸಚಿವ ಯು ಟಿ ಖಾದರ್, ಮಾಜಿ ಸಂಸದ ಚಂದ್ರಪ್ಪ ಹಾಗೂ ಆರ್ ಮಂಜುನಾಥ್ ಮತ್ತು ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ನಾಳೆ ಮುಂಜಾನೆ ಕಾಂಗ್ರೆಸ್ ನ ಎಲ್ಲ ಸದಸ್ಯರು ನೇರವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

Published On - 6:05 pm, Fri, 18 March 22