‘ನಾನು ಗೃಹ ಸಚಿವನಾದರೆ ಇವರನ್ನೆಲ್ಲಾ ಉಡಾಯಿಸಿಬಿಡುತ್ತೇನೆ; ಸಿಎಂ ಬೊಮ್ಮಾಯಿ ಗೃಹಸಚಿವರಿಗೆ ಕಠಿಣವಾಗಿ ನಿರ್ದೇಶಿಸಬೇಕು’

‘ನಾನು ಗೃಹ ಸಚಿವನಾದರೆ ಇವರನ್ನೆಲ್ಲಾ ಉಡಾಯಿಸಿಬಿಡುತ್ತೇನೆ; ಸಿಎಂ ಬೊಮ್ಮಾಯಿ ಗೃಹಸಚಿವರಿಗೆ ಕಠಿಣವಾಗಿ ನಿರ್ದೇಶಿಸಬೇಕು’
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)

ಸರ್ಕಾರ ಶಾಂತಿ ಸುವ್ಯವಸ್ಥೆಗೆ ಆದ್ಯತೆ ಕೊಡಲಿ ಎಂದು ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಹೊಸಪೇಟೆಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.

TV9kannada Web Team

| Edited By: ganapathi bhat

Apr 17, 2022 | 5:06 PM


ಬಳ್ಳಾರಿ: ಜಾತ್ಯತೀತವಾದಿಗಳು ಈಗ ಏಕೆ ಬಾಯಿ ಮುಚ್ಚಿಕೊಂಡಿದ್ದಾರೆ? ಇವರು ಸಣ್ಣ ಸಣ್ಣ ಸಂಗತಿಗಳಿಗೆ ಯಾಕೆ ಕೆರಳುತ್ತಾರೆ? ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಕೊಟ್ಟಿದು ಯಾರು? ಸ್ಟೇಟಸ್ ಹಾಕಿದವನ ವಿರುದ್ಧ ಠಾಣೆಗೆ ದೂರು ಕೊಡಲಿ. ಕಾನೂನು ಯಾಕೆ ಕೈಗೆ ತಗೆದುಕೊಳ್ಳುತ್ತಾರೆ ಇವರು? ಬೀದಿಯಲ್ಲಿ ನಿಂತು ಯಾಕೆ ಗೂಂಡಾಗಿರಿ ಮಾಡ್ತಿದ್ದಾರೆ? ಇದನ್ನು ಸಹಿಸಲು ಆಗುವುದಿಲ್ಲ ಎಂದು ಸಿ.ಟಿ. ರವಿ ಕಿಡಿಕಾರಿದ್ದಾರೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆ ರಾಜ್ಯದಲ್ಲಿ ಪುನರಾವರ್ತನೆ ಆಗುತ್ತಿದೆ. ರಾಜ್ಯದಲ್ಲಿ ಪುನರಾವರ್ತನೆ ಮಾಡುವುದನ್ನು ಸಹಿಸಲ್ಲ. ಸರ್ಕಾರ ಶಾಂತಿ ಸುವ್ಯವಸ್ಥೆಗೆ ಆದ್ಯತೆ ಕೊಡಲಿ ಎಂದು ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಹೊಸಪೇಟೆಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಯಾಕೆ ಕೆರಳಿ ನಿಂತು ಕಾನೂನು ಕೈಗೆತ್ತಿಕೊಳ್ಳುತ್ತಾರೆ? ಇಂತಹ ಘಟನೆಗಾಗಿ ಕಾಯುತ್ತಾ ಇರುತ್ತಾರಾ? ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದರು. ಇಂಥದ್ದೇ ಸಣ್ಣ ವಿಷಯಕ್ಕೆ ಗಲಭೆ ಮಾಡಿದರು. ಇವರಿಗೆ ಮಾತ್ರ ರೋಷನಾ? ಇವರಷ್ಟೇ ಉಪ್ಪು ಹುಳಿ ಖಾರ ತಿನ್ನೋದಾ‌? ನಾವು ತಿನ್ನಲ್ವಾ? ನಮ್ಮ ಆರಾಧ್ಯ ದೈವ ಸರಸ್ವತಿ ನಗ್ನವಾಗಿ ಫೋಟೋ ಮಾಡಿದ್ರು. ಹಾಗಾದ್ರೆ ನಾವು ಅವರನ್ನ ಸುಟ್ಟು ಬಿಡಬೇಕಿತ್ತಾ ಎಂದು ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.

ನಾನು ಗೃಹ ಸಚಿವನಾದರೆ ಇವರನ್ನೆಲ್ಲಾ ಉಡಾಯಿಸಿಬಿಡುತ್ತೇನೆ: ಯತ್ನಾಳ್

ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಹೊಸಪೇಟೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಥಾ ಪ್ರಕರಣಗಳಲ್ಲಿ ಸರ್ಕಾರ ಗಟ್ಟಿತನ ತೋರಿಸಬೇಕು. ಮನೆಗೆ ನುಗ್ಗಿ ಆರೋಪಿಗಳನ್ನು ಬಂಧಿಸಬೇಕು. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಲೇಬಾರದು. ಗೂಂಡಾಗಳನ್ನು ಕೂಡಲೇ ಬಂಧಿಸಬೇಕೆಂದು ಯತ್ನಾಳ್ ಒತ್ತಾಯ ಮಾಡಿದ್ದಾರೆ.

ನಾನು ಗೃಹ ಸಚಿವನಾದರೆ ಇವರನ್ನೆಲ್ಲಾ ಉಡಾಯಿಸಿಬಿಡುತ್ತೇನೆ. ಇಂತಹವರನ್ನೆಲ್ಲಾ ಸೀದಾ ಸ್ವರ್ಗಕ್ಕೆ ಕಳಿಸುತ್ತೇನೆ. ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪೂರ್ವಯೋಜಿತ ಕೃತ್ಯವಾಗಿದೆ. ಹಿಂದೂ ಮತದಾರರನ್ನು ಮತಗಟ್ಟೆಗೆ ಬರದಂತೆ ತಡೆಯುವ ಯತ್ನ. ಗೃಹ ಸಚಿವ ಆರಗ ಜ್ಞಾನೇಂದ್ರ ಹೀಗೆ ಇದ್ದರೆ ಆಗುವುದಿಲ್ಲ. ಮೃದುವಾಗಿದ್ದವರಿಗೆ ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆ, ಲೋಕೋಪಯೋಗಿ ಸಚಿವ ಸ್ಥಾನ ನೀಡುವುದು ಸೂಕ್ತ. ಸಿಎಂ ಇದೇ ರೀತಿ ಇದ್ದರೆ ಅವರಿಗೇ ಮುಂದೆ ಸಮಸ್ಯೆಯಾಗುತ್ತೆ. ಸಿಎಂ ಬೊಮ್ಮಾಯಿ ಗೃಹ ಸಚಿವರಿಗೆ ಕಠಿಣವಾಗಿ ನಿರ್ದೇಶಿಸಬೇಕು ಎಂದು ಟಿವಿ9ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಇಲ್ಲಿಯೂ ಪಿಎಫ್‌ಐ ಇದೆ, ಇವರೆಲ್ಲರ ಕೃತ್ಯ ಇದು: ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ‌ ಗಲಾಟೆ ವಿಚಾರಕ್ಕೆ ಸಂಬಂಧಿಸಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ಅತ್ಯಂತ ಹೇಯವಾಗಿದದ್ದು, ಇದೊಂದು ಕ್ರೂರ ಘಟನೆ. ಇದನ್ನು ಶ್ರೀರಾಮಸೇನೆ ಖಂಡಿಸುತ್ತದೆ. ಇಸ್ಲಾಂ ಅಂದ್ರೆ ಶಾಂತಿ, ಸೌಹಾರ್ದತೆ ಅಂತಾ ಹೇಳುತ್ತಾರೆ. ಇದೇನಾ ಶಾಂತಿ? ಇದೇನಾ ಸೌಹಾರ್ದತೆ? ಪೊಲೀಸರಿಗೆ ದೂರು ಕೊಡಬಹುದಿತ್ತು. ಧರಣಿ, ಹೋರಾಟ ಮಾಡಬಹುದಿತ್ತು. ಆದರೆ ಕೈಯಲ್ಲಿ ಕಲ್ಲು ತಗೊಂಡಿದ್ದು ಎಷ್ಟು ಸರಿ? ಇದೇನು ತಾಲಿಬಾನಾ? ಇದು ಪೂರ್ವ ನಿಯೋಜಿತ ಕೃತ್ಯ. ಮೂರು ಜನ ಎಂಎಐಎಂ ಪಾಲಿಕೆ ಸದಸ್ಯರಿದ್ದಾರೆ. ಇಲ್ಲಿಯೂ ಪಿಎಫ್‌ಐ ಇದೆ. ಇವರೆಲ್ಲರ ಕೃತ್ಯ ಇದು. ದೇವಸ್ಥಾನಗಳ ಮೇಲೆ ದಾಳಿ ಆಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರ ಜೀಪ್ ಜಖಂಗೊಳಿಸಿದ್ದಾರೆ. ಸೈನಿಕರಂತೆಯೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿದ್ದು ಎಷ್ಟು ಸರಿ? ಎಂದು ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾದಲ್ಲಿ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮುಸ್ಲಿಂರು ಹಿಂದುಗಳು ಮತ್ತು ಪೊಲೀಸರನ್ನೇ ಟಾರ್ಗೇಟ್ ಮಾಡಿ ದಾಳಿ ಮಾಡಿದ್ದಾರೆ. ಅನೇಕ ಮುಸ್ಲಿಂ ಸಮಾಜದವರ ಅಂಗಡಿಗಳಿದ್ದರು ಅವುಗಳಿಗೆ ಹಾನಿಮಾಡಿಲ್ಲ. ಪೊಲೀಸರನ್ನು ಬೆದರಿಸಲು ಅವರ ಮೇಲೆ ದಾಳಿ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಷಂಡ್ಯಂತ್ರವಿದೆ. ಪಿಎಫ್​ಐ ಇದೆಯೋ, ಬೇರೆಯವರ ಕೈವಾಡ ವಿದೆಯೋ ಅನ್ನೋದನ್ನು ಪತ್ತೆ ಮಾಡಬೇಕು. ವಿವಾದಿತ ಪೋಸ್ಟ್ ಬಗ್ಗೆ ಕೂಡಾ ಕೂಲಂಕುಷವಾಗಿ ತನಿಖೆಯಾಗಬೇಕು. ರಾಜ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆ ತರಲಿಕ್ಕೆ ಮುಸ್ಲಿಂರು ಕಾಯುತ್ತಿದ್ದರು. ವಿವಾದಾತ್ಮಕ ಪೋಸ್ಟರನ್ನೇ ದೊಡ್ಡದಾಗಿ ಮಾಡಿ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಪೊಲೀಸ್ ವಶಕ್ಕೆ 40 ಮಂದಿ, ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಣೆ

ಇದನ್ನೂ ಓದಿ: ಧರ್ಮ ಧರ್ಮಗಳ ನಡುವೆ ಬೆಂಕಿ ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಟ್ಟ ಪ್ರವೃತ್ತಿ ಸರಿಯಲ್ಲ: ಹೆಚ್​ಡಿ ಕುಮಾರಸ್ವಾಮಿ

Follow us on

Related Stories

Most Read Stories

Click on your DTH Provider to Add TV9 Kannada