IT Raid: ಪಾಲುದಾರ ಮೇಲೆ ಐಟಿ ದಾಳಿ ಬಗ್ಗೆ ಸಚಿವ ಶ್ರೀರಾಮುಲು ಹೇಳಿದ್ದಿಷ್ಟು
ಸಾಕಷ್ಟು ಐಟಿ ದಾಳಿ ನಡೆಯುವುದು ಸಾಮಾನ್ಯ. ಯಾವತ್ತೆ ಐಟಿ ದಾಳಿ ನಡೆದಾಗಲೂ ಸ್ನೇಹಿತರು ಅನ್ನೋದಕ್ಕಿಂತ ಕಾನೂನು ಅದರದ್ದೆ ಪ್ರಕಾರ ಕೆಲಸ ಮಾಡುತ್ತೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ಬಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲು (Sriramulu) ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಪಾಲುದಾರಿಕೆಯ ಕೈಗಾರಿಕೆಗಳ ಮೇಲೆ ಇಂದು (ಜ. 14) ಐಟಿ ದಾಳಿ (IT Raids) ಮಾಡಿದೆ. ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಸಚಿವ ಶ್ರೀರಾಮುಲು ಮಾತನಾಡಿ, ಸಾಕಷ್ಟು ಐಟಿ ದಾಳಿ ನಡೆಯುವುದು ಸಾಮಾನ್ಯ. ಯಾವತ್ತೆ ಐಟಿ ದಾಳಿ ನಡೆದಾಗಲೂ ಸ್ನೇಹಿತರು ಅನ್ನೋದಕ್ಕಿಂತ ಕಾನೂನು ಅದರದ್ದೆ ಪ್ರಕಾರ ಕೆಲಸ ಮಾಡುತ್ತೆ. ಯಾರೆ ಎನೇ ಮಾತನಾಡಿದ್ರು ಕಾನೂನು ಪ್ರಕಾರ ಪ್ರಕ್ರಿಯೆ ನಡೆಯುತ್ತೆ. ಐಟಿ ದಾಳಿ ಬಗ್ಗೆ ನಾನು ಏನು ಮಾತನಾಡಲು ಹೋಗಲ್ಲ. ನಮ್ಮದು ಯಾವುದೇ ಕಾರ್ಖಾನೆಗಳು ಇಲ್ಲ. ನಮ್ಮದು ಯಾರ ಜೊತೆಯೂ ಪಾಲುದಾರಿಕೆಯಲ್ಲಿ ಪ್ಯಾಕ್ಟರಿ ಇಲ್ಲ. ಹಿಂದೆಯೂ ನಡೆಸಿಲ್ಲ. ಈಗಲೂ ಇಲ್ಲ. ಗಣಿಗಾರಿಕೆ ನಡೆಯುವ ವೇಳೆಯೇ ನನ್ನ ಹತ್ತಿರ ಯಾವುದು ಕೈಗಾರಿಕೆ ಇರಲಿಲ್ಲ ಎಂದು ಹೇಳಿದರು.
IT Raids: ಸಚಿವ ಶ್ರೀರಾಮುಲು, ಕೈಲಾಸ್ ವ್ಯಾಸ್ ಒಡೆತನದ ಫ್ಯಾಕ್ಟರಿ ಮೇಲೆ ಐಟಿ ದಾಳಿ
ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಪಾಲುದಾರನ ಮೇಲೆ ಐಟಿ ದಾಳಿಯಾಗಿದೆ. ಶ್ರೀರಾಮುಲು, ಸುರೇಶ್ ಬಾಬು ಒಡೆತನದ ಫ್ಯಾಕ್ಟರಿ ನಡೆಸುತ್ತಿದ್ದ ಆಪ್ತರ ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಹಾಗೂ ಕೈಲಾಸ್ ವ್ಯಾಸ್ ಸೇರಿ ಖರೀದಿಸಿರುವ ಹರಿ ಇಸ್ಪಾತ್ ಫ್ಯಾಕ್ಟರಿ ಮೇಲೂ ಸಹ ಐಟಿ ದಾಳಿಯಾಗಿದ್ದು, ಫ್ಯಾಕ್ಟರ್ ಖರೀದಿ ಹಣದ ಮೂಲ ಕೆದಕುತ್ತಿದ್ದಾರೆ.
ಇದನ್ನೂ ಓದಿ: Karnataka Assembly Election 2023 ಕೋಲಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಬಗ್ಗೆ ಶ್ರೀರಾಮುಲು ಮೊದಲ ಪ್ರತಿಕ್ರಿಯೆ
ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿರುವ ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಪಾಲುದಾರಿಕೆಯ ಕಂಪನಿಗಳ ಮೇಲೆ ದಾಳಿಯಾಗಿದ್ದು, ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 310 ಮತ್ತು 510ಪ್ಲಾಟ್ ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಸಚಿವ ಶ್ರೀರಾಮುಲು ಹಾಗೂ ಕೈಗಾರಿಕಾ ಉದ್ಯಮಿ ಕೈಲಾಸ್ ವ್ಯಾಸ್ ಸೇರಿ ಖರೀದಿಸಿರುವ ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಖರೀದಿಯ ಹಣದ ಮೂಲದ ಬಗ್ಗೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ನಾಯಿಮರಿ ಪದ ಬಳಸಿ ತಮ್ಮ ಸಂಸ್ಕೃತಿ ಪ್ರದರ್ಶಿಸಿದ್ದಾರೆ: ಬಿ ಶ್ರೀರಾಮುಲು, ಸಾರಿಗೆ ಸಚಿವ
ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಹಾಗೂ ಲಾಡ್ ಕುಟುಂಬದ ಪ್ಲಾಂಟ್ ಗಳನ್ನು ಕೈಗಾರಿಕಾ ಉದ್ಯಮಿ ಕೈಲಾಸ್ ವ್ಯಾಸ್ ಬಾಡಿಗೆ ಹಾಗೂ ಲೀಜ್ ಮೇಲೆ ನಡೆಸುತ್ತಿದ್ದರು. ಈ ಕೈಗಾರಿಕೆಗಳು ತೆರಿಗೆ ವಂಚನೆ ಮಾಡಿದ ಆರೋಪದ ಐಟಿ ದಾಳಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:11 pm, Sat, 14 January 23