ಬಳ್ಳಾರಿ: ಮಾಜಿ ಸಚಿವ ಹಾಗೂ ಗಣಿಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ (Bellary) ಜಿಲ್ಲೆಯ ಪ್ರವೇಶ ನಿರ್ಬಂಧವಿದೆ. ಹಾಗಾಗಿ ಅವರು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ (Kalyan Rajya pragathi paksha) ಸ್ಥಾಪಿಸಿ ಕೊಪ್ಪಳ ಕ್ಷೇತ್ರದಲ್ಲಿ ರಾಜಿಕೀಯವಾಗಿ ತೊಡಗಿಕೊಂಡಿದ್ದಾರೆ. ಇತ್ತ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ (Aruna Lakshmi) ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಕುರಿತಾಗಿ ಪ್ರಚಾರ ನಡೆಸಿದ್ದಾರೆ. ಇದರ ನಡುವೆ ಬಳ್ಳಾರಿ ಕ್ಷೇತ್ರದಿಂದ ಅರುಣಾ ಲಕ್ಷ್ಮಿ ಅವರನ್ನು ಕಣಕ್ಕಿಳಿಯೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಾವುಟ ಬಿಡುಗಡೆ ಮಾಡಿ ಅವರು ಮಾತನಾಡಿದ್ದಾರೆ. ಜನರಿಂದ ಜನಾರ್ದನ ರೆಡ್ಡಿ ದೂರ ಮಾಡಲು ಯಾರಿಂದಲೂ ಆಗಲ್ಲ ಎಂದರು.
ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆಯ ಪ್ರವೇಶ ನಿರ್ಬಂಧವಿದೆ. ಅವರ ಬದಲು ನಾನು ಬಳ್ಳಾರಿಯಿಂದ ಪ್ರಚಾರ ಆರಂಭಿಸುತ್ತಿದ್ದೇನೆ. ಬೆಣಕಲ್ ಗ್ರಾಮದಲ್ಲಿ ನನಗೆ ಮನೆ ಮಗಳ ಪ್ರೀತಿ ತೋರಿಸಿದ್ದೀರಿ. ನಾವು ಯಾವತ್ತೂ ಬೆಣಕಲ್ ಗ್ರಾಮದ ಜನರ ಋಣ ಮರೆಯಲ್ಲ. ರೆಡ್ಡಿಗೆ ನೋವು, ಅವಮಾನವಾದ್ರೂ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕಲ್ಯಾಣ ರಾಜ್ಯ ನಿರ್ಮಾಣ ಮಾಡಲು ಶ್ರಮಿಸೋಣ ಎಂದು ಹೇಳಿದರು.
ಇದನ್ನೂ ಓದಿ: Breaking News: ಹೊಸ ರಾಜಕೀಯ ಪಕ್ಷ ಘೋಷಿಸಿದ ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿಗೆ ರಾಜ್ಯ ಕಲ್ಯಾಣ ರಾಜ್ಯ ಆಗಬೇಕು. ಬಳ್ಳಾರಿ ರಾಜ್ಯಮಟ್ಟದಲ್ಲಿ ಅಭಿವೃದ್ಧಿಯಾಗಬೇಕು. ಜನಾರ್ದನ ರೆಡ್ಡಿಯವರು ಎನೇ ಕೆಲಸ ಮಾಡಿದ್ರು ಕುರುಬ ಸಮಾಜದ ಮನೆಯವರಿಂದ ಆರಂಭ ಮಾಡಿದ್ದಾರೆ. ಮದುವೆ ಆಗಿ 30 ವರ್ಷದ ನಂತರ ಬೆಣಕಲ್ ಗ್ರಾಮಕ್ಕೆ ಆಗಮಿಸಿರುವ ನನಗೆ ಮನೆ ಮಗಳ ಪ್ರೀತಿ ತೋರಿಸಿದ್ದೀರಿ. ಜನಾರ್ದನ ರೆಡ್ಡಿಗೆ ನೋವು, ಅವಮಾನ ಆದ್ರು ಅವರು ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಹುಟ್ಟಿದ ಸೂರ್ಯನನ್ನ ಯಾರಿಂದಲೂ ತಡೆಯಲು ಆಗಲ್ಲ. ಜನರಿಂದ ಜನಾರ್ದನ ರೆಡ್ಡಿಯನ್ನ ದೂರ ಮಾಡಲು ಆಗಲ್ಲ. ತಂದೆ ತಾಯಿ ಬಂಧು ಬಳಗ ನೀವು ಎಂದು ಅರುಣಾ ಲಕ್ಷ್ಮೀ ಹೇಳಿದರು.
ಇದನ್ನೂ ಓದಿ: ಪಕ್ಷ ಏನೇ ಹೇಳಿದ್ರು ಮಾಡುವೆ; ಪರೋಕ್ಷವಾಗಿ ಗೆಳೆಯ ಜನಾರ್ದನ ರೆಡ್ಡಿ ವಿರುದ್ಧ ಪ್ರಚಾರಕ್ಕೂ ಸಿದ್ಧ ಎಂದ ರಾಮುಲು
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪರ ನಗರದಲ್ಲಿ ಪ್ರಚಾರ ಆರಂಭಗೊಂಡಿದೆ. ಹಲವು ಕಡೆಗಳಲ್ಲಿ ಜನಾರ್ದನ ರೆಡ್ಡಿ ಹೊಸ ಪಕ್ಷದ ಬ್ಯಾನರ್ಗಳು ರಾರಾಜಿಸಲು ಆರಂಭವಾಗಿದೆ. ಹೊಸ ಪಕ್ಷ ಕಟ್ಟಿರುವ ಜನಾರ್ದನ ರೆಡ್ಡಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲು ಅಭಿಮಾನಿಗಳು ಬ್ಯಾನರ್ಗಳನ್ನು ಹಾಕುತ್ತಿದ್ದಾರೆ. ಪ್ರಮುಖ ನಾಯಕರ ಪೋಟೋ ಇಲ್ಲದೇ ಕೇವಲ ಸಣ್ಣಪುಟ್ಟ ಕಾರ್ಯಕರ್ತರ ಫೋಟೋ ಇರುವ ಬ್ಯಾನರ್ ಹಾಕಲಾಗಿದೆ. ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಹೊರತುಪಡಿಸಿ ಯಾವೊಬ್ಬ ಪ್ರಮುಖ ನಾಯಕರ ಪೋಟೋ ಬ್ಯಾನರ್ನಲ್ಲಿ ಇಲ್ಲ. ಭಾನುವಾರವೇ ಪಕ್ಷ ಘೋಷಣೆಯಾದರೂ ಇಂದು ಅಭಿಮಾನಿಗಳು ಬ್ಯಾನರ್ ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:10 pm, Sun, 1 January 23