ಬಳ್ಳಾರಿ: ಕೋಟೆನಾಡು ಚಿತ್ರದುರ್ಗದಲ್ಲಿ ಚಳ್ಳಕೆರೆ ಪಟ್ಟಣದಿಂದ ಭಾರತ್ ಜೋಡೋ ಯಾತ್ರೆ ಮುಂದುವರೆದಿದೆ. ಆದ್ರೆ ಮತ್ತೊಂದು ಕಡೆ ರಾಹುಲ್ ಗಾಂಧಿ ಐಕ್ಯತಾ ಯಾತ್ರೆಯ ಸ್ವಾಗತಕ್ಕಾಗಿ ಬಳ್ಳಾರಿಯಲ್ಲಿ ಹಾಕಿದ್ದ ಬ್ಯಾನರ್ಗಳನ್ನು ತೆರವು ಮಾಡಲಾಗಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಪಾಲಿಕೆ ಸಿಬ್ಬಂದಿ ಬ್ಯಾನರ್ ತೆರವು ಮಾಡಿದ್ದಾರೆ.
ನಗರದ ತುಂಬೆಲ್ಲಾ ಅನಧಿಕೃತವಾಗಿ ಹಾಕಿದ ಬ್ಯಾನರ್ ತೆರವಿಗೆ ಪಾಲಿಕೆ ಮುಂದಾಗಿದ್ದು ಪಾಲಿಕೆಯ ವರ್ತನೆ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಸೌಂದರ್ಯಕರಣಕ್ಕೆ ಅಡ್ಡಿ ಹಾಗೂ ಪ್ಲಾಸ್ಟಿಕ್ ಬಳಕೆ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದು ಜೆಸಿಬಿ ಬಳಸಿ ಬ್ಯಾನರ್ ತೆರವು ಮಾಡುತ್ತಿದ್ದಾರೆ. ಪಾಲಿಕೆ ಸಿಬ್ಬಂದಿ ರಾಶಿ ರಾಶಿ ಬ್ಯಾನರ್ ಗಳನ್ನ ಟ್ಯಾಕ್ಟರ್ ನಲ್ಲಿ ತಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ‘ಅವರಿದ್ದರೆ ಉಸಿರುಗಟ್ಟಿದಂತಾಗುತ್ತೆ’; ಸಂಜುನ ನೋಡಿದ ಅನುಗೆ ನೆನಪಾಗುತ್ತಿದ್ದಾನೆ ಆರ್ಯವರ್ಧನ್
ಪಾಲಿಕೆಯ ಕಮಿಷನರ್ ರುದ್ರೇಶ್ ನೇತೃತ್ವದಲ್ಲಿ ಸುಮಾರು 400 ಸಿಬ್ಬಂದಿಯಿಂದ ಬ್ಯಾನರ್ಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ರಾತ್ರೋ ರಾತ್ರಿ ಸಿಬ್ಬಂದಿ ದೊಡ್ಡ ದೊಡ್ಡ ಬ್ಯಾನರ್ಗಳನ್ನು ನೆಲಕ್ಕೆ ಉರುಳಿಸಿ ಅವುಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗಿದ್ದಾರೆ. ಪರ್ಮಿಷನ್ ಇಲ್ಲದೇ ಬ್ಯಾನರ್ ಹಾಕಿದ್ದಾರೆ, ಪಕ್ಷಾತೀತವಾಗಿ ಎಲ್ಲ ಬ್ಯಾನರ್ ತೆಗೆದಿದ್ದೇವೆ ಎಂದು ಪಾಲಿಕೆ ಕಮಿಷನರ್ ರುದ್ರೇಶ್ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಬ್ಯಾನರ್ ತೆರವಿಗೆ ತೀವ್ರ ಆಕ್ರೋಶ
ಇನ್ನು ಬಳ್ಳಾರಿಯಲ್ಲಿ ಕಾಂಗ್ರೆಸ್ ಯಾತ್ರೆಯ ಬ್ಯಾನರ್ ತೆರವು ಮಾಡಿದಕ್ಕೆ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ಜೆ.ಎಸ್.ಆಂಜನೇಯಲು ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರ ಅಧಿಕಾರಿಗಳನ್ನ ಬಳಸಿಕೊಂಡು ಬ್ಯಾನರ್ ತೆರವು ಮಾಡಿದ್ದಾರೆ. ನಿನ್ನೆ ಮೊನ್ನೆ ಚಿತ್ರದುರ್ಗದಲ್ಲಿ ಬಿಜೆಪಿಯವರು ಹಾಕಿದ್ದ ಬ್ಯಾನರ್ ತೆಗೆಯಲಿಲ್ಲ. ಆದ್ರೆ ಈಗ ‘ಕೈ’ ಕಾರ್ಯಕರ್ತರು ಹಾಕಿದ್ದ ಬ್ಯಾನರ್ ತೆಗೆಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಬಳ್ಳಾರಿಯನ್ನ ಮತ್ತೆ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಭಾರತ್ ಜೋಡೋ ಭಯ ಶುರುವಾಗಿದೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:01 am, Wed, 12 October 22