‘ಅವರಿದ್ದರೆ ಉಸಿರುಗಟ್ಟಿದಂತಾಗುತ್ತೆ’; ಸಂಜುನ ನೋಡಿದ ಅನುಗೆ ನೆನಪಾಗುತ್ತಿದ್ದಾನೆ ಆರ್ಯವರ್ಧನ್​

ಮನೆಯಿಂದ ಹೊರಡುವುದಕ್ಕೂ ಮುನ್ನ ಅನುಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳಿ ಹೋಗಿದ್ದಾನೆ ಸಂಜು. ಮೊದಲ ದಿನ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಕಾರಿನ ಬಾಗಿಲನ್ನು ತಾನೇ ತೆರೆಯಲು ಬಂದಿದ್ದ

‘ಅವರಿದ್ದರೆ ಉಸಿರುಗಟ್ಟಿದಂತಾಗುತ್ತೆ’; ಸಂಜುನ ನೋಡಿದ ಅನುಗೆ ನೆನಪಾಗುತ್ತಿದ್ದಾನೆ ಆರ್ಯವರ್ಧನ್​
ಸಂಜು-ಅನು
Follow us
TV9 Web
| Updated By: ಮದನ್​ ಕುಮಾರ್​

Updated on:Oct 12, 2022 | 7:54 AM

‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಲ್ಲಿ ಅನು ಸಿರಿಮನೆ ದುಃಖದಲ್ಲಿ ಕೈ ತೊಳೆಯುತ್ತಿದ್ದಾಳೆ. ಪತಿ ಆರ್ಯವರ್ಧನ್​ನ ಕಳೆದುಕೊಂಡಿದ್ದೇನೆ ಎನ್ನುವ ಕಣ್ಣೀರಲ್ಲಿ ಅವಳಿದ್ದಾಳೆ. ಹೀಗಾಗಿ ನಿತ್ಯ ಕಣ್ಣೀರು ಹಾಕುತ್ತಿದ್ದಾಳೆ. ಆಕೆಯ ಪಾಲಕರಾದ ಸುಬ್ಬು ಹಾಗೂ ಪುಷ್ಪಾಗೆ ಅನುನ ದುಃಖವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನ್ನದೇ ಮನೆಯಲ್ಲಿ ಆಕೆಯನ್ನು ತಂದು ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಅನು ಮನೆಗೆ ಸಂಜು (ಹೊಸ ಆರ್ಯವರ್ಧನ್​) ಬಂದಿದ್ದ. ಆತನನ್ನು ನೋಡಿ ಬೇಸರ ಮಾಡಿಕೊಂಡಿದ್ದಾಳೆ ಅನು. ಆತ ತೋರುವ ಕಾಳಜಿ ಆಕೆಗೆ ಆರ್ಯವರ್ಧನ್​ನ ನೆನಪು ಮಾಡುತ್ತಿದೆ.

ಅನು ಹಾಗೂ ಆರ್ಯವರ್ಧನ್ ಮದುವೆ ಆಗಿದ್ದರು. ಆಕೆಯನ್ನು ಆರ್ಯವರ್ಧನ್ ಅತೀವವಾಗಿ ಕೇರ್ ಮಾಡುತ್ತಿದ್ದ. ಆತ ತೋರುತ್ತಿದ್ದ ಪ್ರೀತಿಗೆ ಅನು ಮರುಳಾಗಿದ್ದಳು. ಆದರೆ, ಈಗ ಗಂಡ ಇಲ್ಲ ಎಂಬ ನೋವು ಆಕೆಯನ್ನು ಕಾಡುತ್ತಿದೆ. ಹೀಗಾಗಿ, ಏನು ಮಾಡಬೇಕು ಎಂಬುದು ಆಕೆಗೆ ತಿಳಿಯುತ್ತಿಲ್ಲ. ಇದರ ಜತೆಗೆ ಸಂಜು ತೋರುತ್ತಿರುವ ಕಾಳಜಿ ಆಕೆಗೆ ಉಸಿರುಗಟ್ಟಿಸುತ್ತಿದೆ.

ಸಂಜು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದ. ಮರಳಿ ಬರುವಾಗ ಕಮಲಮ್ಮನ ವಠಾರಕ್ಕೆ ಬಂದಿದ್ದಾನೆ. ಅದು ಅನು ಮನೆ ಎಂಬ ವಿಚಾರ ಆತನಿಗೆ ಗೊತ್ತಿರಲಿಲ್ಲ. ವಠಾರದ ಎದುರಲ್ಲೇ ಸುಬ್ಬು ಎದುರಾಗಿದ್ದ. ಅವನೇ ಆತನನ್ನು ಒಳಗೆ ಕರೆದುಕೊಂಡು ಬಂದಿದ್ದ. ಮೊದಲಿನಿಂದಲೂ ಅನು ಬಗ್ಗೆ ಸಂಜುಗೆ ಒಂದು ಒಳ್ಳೆಯ ಭಾವನೆ ಇದೆ. ಆಕೆಯನ್ನು ಕಂಡರೆ ಸಂಜು ಮರುಗುತ್ತಾನೆ. ಇದು ಅನುಗೆ ಇಷ್ಟ ಆಗುತ್ತಿಲ್ಲ.

ಇದನ್ನೂ ಓದಿ
Image
ಕಮಲಮ್ಮನ ವಠಾರಕ್ಕೆ ಬಂದ ಆರ್ಯವರ್ಧನ್​; ನೆನಪಾಯಿತು ಹಳೆಯ ದಿನಗಳು
Image
‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
Image
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Image
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ

ಮನೆಯಿಂದ ಹೊರಡುವುದಕ್ಕೂ ಮುನ್ನ ಅನುಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳಿ ಹೋಗಿದ್ದಾನೆ ಸಂಜು. ಮೊದಲ ದಿನ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಕಾರಿನ ಬಾಗಿಲನ್ನು ತಾನೇ ತೆರೆಯಲು ಬಂದಿದ್ದ. ಆಸ್ಪತ್ರೆಗೆ ಬಂದಾಗಲೂ ಅನು ಬಗ್ಗೆ ಕಾಳಜಿ ತೋರಿದ್ದ. ಇದು ಅನುಗೆ ಇಷ್ಟವಾಗುತ್ತಿಲ್ಲ. ಈ ವಿಚಾರವನ್ನು ತಾಯಿ ಪುಷ್ಪಾ ಬಳಿ ಹೇಳಿಕೊಂಡಿದ್ದಾಳೆ ಅನು.

‘ಅವರು ಇದ್ದಾಗ ನನಗೆ ಉಸಿರುಗಟ್ಟಿದಂತೆ ಆಗುತ್ತದೆ. ಅವರು ತೋರಿಸುವ ಕಾಳಜಿ ನನಗೆ ಆರ್ಯ ಸರ್​​ ಅನ್ನು ನೆನಪು ಮಾಡಿಸುತ್ತದೆ. ಆರ್ಯ ಸರ್ ನನಗೆ ಯಾವಾಗಲೂ ಇಷ್ಟೇ ಪ್ರೀತಿ ತೋರುತ್ತಿದ್ದರು. ಅವರನ್ನು ಬಿಟ್ಟು ಬೇರೊಬ್ಬರು ಇಷ್ಟು ಕಾಳಜಿ ತೋರಿಸುವುದು ನನಗೆ ಇಷ್ಟ ಆಗುವುದಿಲ್ಲ’ ಎಂದಿದ್ದಾಳೆ ಅನು. ಇದಕ್ಕೆ ಪುಷ್ಪಾ ಸಿಟ್ಟಾಗಿದ್ದಾಳೆ. ‘ನಿನ್ನನ್ನು ಆರ್ಯವರ್ಧನ್ ಅವರು ಬಿಟ್ಟು ಬೇರೆ ಯಾರೂ ಕಾಳಜಿ ತೋರಬಾರದು ಎಂದರೆ ಹೇಗೆ? ಇಷ್ಟು ಸಣ್ಣ ವಿಚಾರಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಂಡರೆ ಸಮಸ್ಯೆ ಆಗುತ್ತದೆ’ ಎಂದು ಪುಷ್ಪಾ ಬುದ್ಧಿವಾದ ಹೇಳಿದ್ದಾಳೆ. ಆದರೆ, ಅನು ದುಃಖ ಮಾತ್ರ ಕಡಿಮೆ ಆಗಿಲ್ಲ.

ಝೇಂಡೆ ಗೊತ್ತಾಯಿತು ಅಸಲಿ ವಿಚಾರ?

ರಾಜ ನಂದಿನಿ ನಿವಾಸಕ್ಕೆ ಹೊಸಬನ ಎಂಟ್ರಿ ಆಗಿದೆ. ಅದುವೇ ಸಂಜು. ಈತನ ಮೂಲ ಹೆಸರು ವಿಶ್ವಾಸ್ ದೇಸಾಯಿ. ಈತ ಯಾರು? ಈತ ಇಲ್ಲಿಗೆ ಬಂದಿದ್ದು ಯಾಕೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಅನೇಕರಿಗೆ ಅನುಮಾನ ಮೂಡಿದೆ. ಆರ್ಯವರ್ಧನ್​ನ ಪಿ.ಎ. ಆಗಿದ್ದ ಮೀರಾ ಹೆಗಡೆ ಈ ಬಗ್ಗೆ ತನಿಖೆ ಮಾಡಿದ್ದಾಳೆ. ವಿಶ್ವಾಸ್ ಓದಿನಲ್ಲಿ ಮುಂದಿದ್ದ, ಬಿಸ್ನೆಸ್ ಮೈಂಡ್ ಆಗಿತ್ತು ಎಂಬಿತ್ಯಾದಿ ವಿಚಾರಗಳನ್ನು ಕಂಡು ಹಿಡಿದಿದ್ದಾಳೆ ಮೀರಾ. ಜತೆಗೆ ಆತ ಚಿಕಿತ್ಸೆ ಪಡೆದಿದ್ದು ಎಲ್ಲಿ ಎಂಬುದನ್ನೂ ಆಕೆ ಕಂಡು ಹಿಡಿದಿದ್ದಳು.

ಇದೇ ಮಾಹಿತಿ ಇಟ್ಟುಕೊಂಡು ಝೇಂಡೆ ಆ ಆಸ್ಪತ್ರೆಗೆ ತೆರಳಿದ್ದಾನೆ. ಆಸ್ಪತ್ರೆಯಲ್ಲಿ ವಿಚಾರಿಸಿದಾಗ ‘ವಿಶ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದು ನಿಜ. ಆದರೆ, ಆತ ಹೊರ ಹೋಗಿಲ್ಲ. ಆತ ಸತ್ತಿದ್ದಾನೆ’ ಎನ್ನುವ ಉತ್ತರ ಬಂತು. ಇದನ್ನು ಕೇಳಿ ಝೇಂಡೆಗೆ ಅನುಮಾನ ಬಲವಾಗಿದೆ.

Published On - 7:30 am, Wed, 12 October 22

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ