ಸಾಜಿದ್ ಖಾನ್ ಗುಪ್ತಾಂಗಕ್ಕೆ ರೇಟಿಂಗ್ ನೀಡಲು ನಾನು ಬಿಗ್ ಬಾಸ್ ಮನೆಗೆ ಹೋಗಬೇಕು ಎಂದ ನಟಿ
ಸಾಜಿದ್ ಖಾನ್ ಅವರು ಅನುಚಿತ ವರ್ತನೆ ಮಾಡಿದ್ದಾರೆ ಎಂದು ಅನೇಕ ಹೀರೋಯಿನ್ಗಳು ಹೇಳಿದ್ದಿದೆ. ಆದರೆ, ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳು ಸುಳ್ಳು ಎಂದೇ ವಾದಿಸುತ್ತಾ ಬಂದಿದ್ದಾರೆ.
ನಿರ್ದೇಶಕ ಸಾಜಿದ್ ಖಾನ್ (Sajid Khan) ಅವರು ಸಾಕಷ್ಟು ವಿವಾದಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ವಿರುದ್ಧ ಸಾಕಷ್ಟು ಮೀಟೂ ಆರೋಪಗಳು ಕೇಳಿ ಬಂದಿವೆ. ಅನೇಕ ಹೀರೋಯಿನ್ಗಳು ನಿರ್ದೇಶಕನ ವಿರುದ್ಧ ತಿರುಗಿಬಿದ್ದಿದ್ದಾರೆ. ಈಗ ಸಾಜಿದ್ ಖಾನ್ ಅವರು ‘ಬಿಗ್ ಬಾಸ್ (Bigg Boss) ಹಿಂದಿ ಸೀಸನ್ 16’ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಶೆರ್ಲಿನ್ ಚೋಪ್ರಾ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದೂ ಸಾಜಿದ್ ಖಾನ್ ಗುಪ್ತಾಂಗಕ್ಕೆ ರೇಟಿಂಗ್ ಕೊಡೋಕೆ.
ಸಾಜಿದ್ ಖಾನ್ ಅವರು ಅನುಚಿತ ವರ್ತನೆ ಮಾಡಿದ್ದಾರೆ ಎಂದು ಅನೇಕ ಹೀರೋಯಿನ್ಗಳು ಹೇಳಿದ್ದಿದೆ. ಆದರೆ, ಅವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳು ಸುಳ್ಳು ಎಂದೇ ವಾದಿಸುತ್ತಾ ಬಂದಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿರೋದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಈ ಶೋ ನಡೆಸಿಕೊಡುವ ಸಲ್ಮಾನ್ ಖಾನ್ ವಿರುದ್ಧವೂ ಅನೇಕರು ಟೀಕೆ ಮಾಡಿದ್ದು ಇದೆ. ಈಗ ಸಲ್ಮಾನ್ ಖಾನ್ ಬಳಿ ಶೆರ್ಲಿನ್ ಮನವಿ ಮಾಡಿಕೊಂಡಿದ್ದಾರೆ. ‘ಸಲ್ಮಾನ್ ಖಾನ್ ಅವರು ಒಂದು ನಿಲುವು ತೆಗೆದುಕೊಳ್ಳಬೇಕು’ ಎಂದು ಕೋರಿದ್ದಾರೆ.
‘ಸಾಜಿದ್ ಖಾನ್ ನನಗೆ ಗುಪ್ತಾಂಗ ತೋರಿಸಿದ್ದರು. ಅದಕ್ಕೆ 0-10ರ ಅಂತರದಲ್ಲಿ ರೇಟಿಂಗ್ ನೀಡಲು ಹೇಳಿದ್ದರು. ನಾನು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಬೇಕು ಹಾಗೂ ಅವರ ಗುಪ್ತಾಂಗಕ್ಕೆ ರೇಟಿಂಗ್ ನೀಡಬೇಕು. ಕಿರುಕುಳ ನೀಡುವವನ ಜತೆ ಸಂತ್ರಸ್ತೆಯು ಹೇಗೆ ವರ್ತಿಸುತ್ತಾಳೆ ಎಂಬುದನ್ನು ಭಾರತ ನೋಡಲಿ. ದಯವಿಟ್ಟು ಒಂದು ನಿಲುವು ತೆಗೆದುಕೊಳ್ಳಿ’ ಎಂದು ಶೆರ್ಲಿನ್ ಕೋರಿದ್ದಾರೆ.
ಇದನ್ನೂ ಓದಿ: Salman Khan: ಬಾಲಿವುಡ್ ಚಿತ್ರಗಳ ಸೋಲಿನ ಬೆನ್ನಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಮಹತ್ವದ ನಿರ್ಧಾರ ತಳೆದ್ರಾ ಸಲ್ಮಾನ್ ಖಾನ್?
ಸಾಜಿದ್ ಖಾನ್ ವಿರುದ್ಧ ಶೆರ್ಲಿನ್ ಮಾತ್ರವಲ್ಲ ಅನೇಕ ಮಾಡೆಲ್ಗಳು ಹಾಗೂ ಹೀರೋಯಿನ್ಗಳು ಧ್ವನಿ ಎತ್ತಿದ್ದಾರೆ. ಆದಾಗ್ಯೂ ವಾಹಿನಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಂದೊಮ್ಮೆ ವಿರೋಧ ಹೆಚ್ಚಿದರೆ ಬಿಗ್ ಬಾಸ್ನಿಂದ ಅವರನ್ನು ಹೊರಗೆ ಕಳಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
Published On - 7:41 pm, Tue, 11 October 22