AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾರ ವಂಶದವರು ಕುತಂತ್ರಿ ಅಂತ ಗೊತ್ತು’; ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಮಧ್ಯೆ ಹತ್ತಿತು ಬೆಂಕಿ

‘ಬಿಗ್ ಬಾಸ್’ ಮನೆಯಲ್ಲಿ ನಿಧಿ ಶೋಧ ಟಾಸ್ಕ್ ನೀಡಲಾಗಿದೆ. ಬಜರ್ ಆದಾಗ ಟಾರ್ಚ್ ಹಿಡಿದುಕೊಂಡು ನಿಧಿ ಶೋಧಕ್ಕೆ ಹೋಗಬೇಕು. ನಂತರ ಚಿನ್ನಕ್ಕಾಗಿ ಡೀಲಿಂಗ್ ಕೂಡ ಮಾಡಬೇಕು. ಈ ಸಂದರ್ಭದಲ್ಲಿ ಪ್ರಶಾಂತ್ ಸಂಬರ್ಗಿ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದರು ರೂಪೇಶ್ ರಾಜಣ್ಣ.

‘ಯಾರ ವಂಶದವರು ಕುತಂತ್ರಿ ಅಂತ ಗೊತ್ತು’; ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಮಧ್ಯೆ ಹತ್ತಿತು ಬೆಂಕಿ
ರೂಪೇಶ್-ಪ್ರಶಾಂತ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Oct 11, 2022 | 10:41 PM

Share

‘ಬಿಗ್ ಬಾಸ್’  (Bigg Boss)ಮನೆಯಲ್ಲಿ ವಿವಿಧ ಮನಸ್ಥಿತಿಯವರು ದೊಡ್ಮನೆಗೆ ಬಂದಿದ್ದಾರೆ. ಸಾಮಾಜಿಕ ಹೋರಾಟದ ಮೂಲಕ ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ಅವರು ಏರು ಧ್ವನಿಯಲ್ಲಿ ಮಾತನಾಡಿ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಕನ್ನಡ ಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ (Roopesh Rajanna) ಕೂಡ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇಬ್ಬರ ಮಧ್ಯೆ ಅನೇಕ ವಿಚಾರಕ್ಕೆ ಜಗಳ ಆಗುತ್ತಲೇ ಇದೆ. ಈಗ ಬಿಗ್ ಬಾಸ್ ಮನೆಯಲ್ಲಿ ಅಕ್ಟೋಬರ್ 11ರ ಎಪಿಸೋಡ್​ನಲ್ಲಿ ಇಬ್ಬರ ಮಧ್ಯೆ ಮತ್ತೆ ಕಿತ್ತಾಟ ಆರಂಭ ಆಗಿದೆ.

‘ಬಿಗ್ ಬಾಸ್’ ಮನೆಯಲ್ಲಿ ನಿಧಿ ಶೋಧ ಟಾಸ್ಕ್ ನೀಡಲಾಗಿದೆ. ಬಜರ್ ಆದಾಗ ಟಾರ್ಚ್ ಹಿಡಿದುಕೊಂಡು ನಿಧಿ ಶೋಧಕ್ಕೆ ಹೋಗಬೇಕು. ನಂತರ ಚಿನ್ನಕ್ಕಾಗಿ ಡೀಲಿಂಗ್ ಕೂಡ ಮಾಡಬೇಕು. ಈ ಸಂದರ್ಭದಲ್ಲಿ ಪ್ರಶಾಂತ್ ಸಂಬರ್ಗಿ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದರು ರೂಪೇಶ್ ರಾಜಣ್ಣ. ಈ ವಿಚಾರಕ್ಕೆ ಕಿತ್ತಾಟ ನಡೆದೇ ಇತ್ತು.

‘ನಿಮ್ಮ ರೀತಿ ಚಿಲ್ರೆ ಆಟ ಆಡಲ್ಲ. ಬಾಯಿಂದ ಮಾತುಗಳು ಬರ್ತಿವೆ, ಹೇಗೋ ತಡ್ಕೊಂಡಿದೀನಿ. ನಾನು ಏನಿದ್ದರೂ ನೇರವಾಗಿ ಡೀಲ್ ಮಾಡ್ತೀನಿ. ನಿಮ್ಮ ರೀತಿ ಹೇಡಿ ರೀತಿ ಮಾಡಲ್ಲ. ಮೊದಲ ದಿನ ನಿಮಗೆ ಕುತಂತ್ರಿ ಎಂದು ಹೇಳಿದ್ದಾರೆ. ಅದು ಸರಿಯಾಗಿಯೇ ಇದೆ’ ಎಂದರು ರೂಪೇಶ್ ರಾಜಣ್ಣ. ಇದಕ್ಕೆ ಪ್ರಶಾಂತ್ ಸಂಬರ್ಗಿ ಟೀಕೆ ಮಾಡಿದರು. ‘ಯಾರ ವಂಶ ಕುತಂತ್ರಿ ಅಂತ ಗೊತ್ತು’ ಎಂದು ಪ್ರಶಾಂತ್ ಹೇಳಿದರು. ಇದಕ್ಕೆ ರೂಪೇಶ್ ಸಿಟ್ಟಾದರು.

ಇದನ್ನೂ ಓದಿ
Image
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
Image
BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
Image
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ
Image
Bigg Boss 16: ಬಿಗ್​ ಬಾಸ್​ ನಿರೂಪಣೆಗೆ ಸಲ್ಮಾನ್​ ಖಾನ್​ ಕೇಳಿದ್ದು 1000 ಕೋಟಿ ರೂ. ಸಂಬಳ? ಆದರೆ ಆಗಿದ್ದೇ ಬೇರೆ

ಭಾಷೆ ವಿಚಾರಕ್ಕೂ ಕಿತ್ತಾಟ:

ರೂಪೇಶ್ ರಾಜಣ್ಣ ಅವರು ಪ್ರಶಾಂತ್ ಸಂಬರ್ಗಿ ಬಳಿ ಬಂದು ‘ನನ್ನಲ್ಲಿ ಏನಾದರೂ ಬದಲಾವಣೆ ಆಗಬೇಕೇ’ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಶಾಂತ್ ಸಂಬರ್ಗಿ, ‘ನಿಮ್ಮ ಬಳಿ ಇರೋದು ಒಂದೇ ಅಸ್ತ್ರ. ಅದು ಭಾಷೆಯ ಅಸ್ತ್ರ. ಬಿಗ್ ಬಾಸ್ ಮನೆಯಲ್ಲಿರುವ ಎಲ್ಲರಿಗೂ ಕನ್ನಡದ ಮೇಲೆ ಪ್ರೀತಿ ಇದೆ’ ಎಂದಿದ್ದರು. ಇದನ್ನು ಕೇಳಿ ರೂಪೇಶ್ ರಾಜಣ್ಣ ಸಿಟ್ಟಾಗಿದ್ದಾರು.

‘ಭಾಷೆ ಬತ್ತಳಿಕೆ ಇಟ್ಕೊಂಡು ಆಡಿದ್ರೆ ನಿಮಗೆ ಒಳ್ಳೆಯದಾಗಲ್ಲ. ಇಷ್ಟು ಮಾತ್ರ ಹೇಳೋಕೆ ಆಗೋದು’ ಎಂದು ಪ್ರಶಾಂತ್ ಸಂಬರ್ಗಿ ಅವರು ರೂಪೇಶ್ ರಾಜಣ್ಣಗೆ ನೇರವಾಗಿ ಹೇಳಿದ್ದರು. ಈ ಮೊದಲು ಕೂಡ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಹಾಗೂ ಪ್ರಶಾಂತ್ ಸಂಬರ್ಗಿ ಮಧ್ಯೆ ಕಿತ್ತಾಟ ನಡೆದಿತ್ತು. ಅದೂ ಭಾಷೆ ವಿಚಾರಕ್ಕೆ ಅನ್ನೋದು ವಿಚಿತ್ರ. ಈ ವಾರದ ಎಲಿಮಿನೇಷನ್​ಗೆ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಇಬ್ಬರೂ ನಾಮಿನೇಟ್ ಆಗಿದ್ದರು.

Published On - 10:12 pm, Tue, 11 October 22