ಕಾಂಗ್ರೆಸ್ ಟಿಕೆಟ್ ಸಭೆಯಲ್ಲಿ ಗಲಾಟೆ : ಹೊಸಪೇಟೆ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸೇರಿ ಇಬ್ಬರ ಬಂಧನ!

ಸಭೆ ಬಳಿಕ ಹೋಟೆಲ್‌ನಿಂದ ಹೊರ ಹೋಗುವಾಗ ತನ್ನ ಮೇಲೆ ಯೋಗಲಕ್ಷ್ಮಿ ಹಾಗೂ ಆತನ ಬೆಂಬಲಿಗ ಸಂದೀಪ್ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಡಿ. ಶಿಲ್ಲಾ ಎಂಬವರು ಪೊಲೀಸರಿಗೆ ದೂರಿದ್ದಾರೆ.

ಕಾಂಗ್ರೆಸ್  ಟಿಕೆಟ್ ಸಭೆಯಲ್ಲಿ ಗಲಾಟೆ : ಹೊಸಪೇಟೆ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸೇರಿ ಇಬ್ಬರ ಬಂಧನ!
ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸೇರಿ ಇಬ್ಬರ ಬಂಧನ!
Updated By: ಸಾಧು ಶ್ರೀನಾಥ್​

Updated on: Jan 05, 2023 | 9:56 AM

ವಿಜಯನಗರ: ಇದು ಚುನಾವಣೆ ವರ್ಷ. ಸದ್ಯದಲ್ಲೇ ರಾಜ್ಯ ಅಸೆಂಬ್ಲಿಗೆ ಚುನಾವಣೆಗಳು (Karnataka Assembly Elections 2023) ಜರುಗಲಿವೆ. ಈ ಮಧ್ಯೆ ರಾಜಕೀಯ ಪಕ್ಷಗಳು ಮತ್ತು ಟಿಕೆಟ್​ ಆಕಾಂಕ್ಷಿಗಳು ಸರ್ವಪ್ರಯತ್ನ ನಡೆಸಿದ್ದಾರೆ. ಬಳ್ಳಾರಿ (bellary) ಮತ್ತು ವಿಜಯನಗರ (vijayanagara) ಜಿಲ್ಲೆಗಳ ಅಸೆಂಬ್ಲಿ ಟಿಕೆಟ್‌ (ticket) ಆಕಾಂಕ್ಷಿಗಳ ಸಭೆಯಲ್ಲಿ ಕಾಂಗ್ರೆಸ್‌ (congress) ಪಕ್ಷದ ಇಬ್ಬರು ಮಹಿಳಾ ಮುಖಂಡರು ಗಲಾಟೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಬ್ಲಾಕ್ ಕಾಂಗ್ರೆಸ್‌ನ ಮಹಿಳಾ (women) ಘಟಕದ ಅಧ್ಯಕ್ಷೆ ಯೋಗಲಕ್ಷ್ಮಿ ಸೇರಿ ಇಬ್ಬರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ (arrest).

ಹೊಸಪೇಟೆ ನಗರದ ಮಲ್ಲಿಗೆ ಹೋಟೆಲ್‌ನಲ್ಲಿ ಜನವರಿ 2 ರಂದು ಎಐಸಿಸಿ ಕಾರ್ಯದರ್ಶಿ ಶ್ರೀಧರಬಾಬು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆದ ಆಕಾಂಕ್ಷಿಗಳ ಸಭೆಯ ವೇಳೆ ಇಬ್ಬರು ಮಹಿಳಾ ಕಾರ್ಯಕರ್ತೆಯರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಯೋಗಲಕ್ಷ್ಮಿ ಹಾಗೂ ಸಂದೀಪ ಇಬ್ಬರೂ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆಂದು ದೂರು ದಾಖಲಾಗಿತ್ತು.

ಸಭೆ ಬಳಿಕ ಹೋಟೆಲ್‌ನಿಂದ ಹೊರ ಹೋಗುವಾಗ ತನ್ನ ಮೇಲೆ ಯೋಗಲಕ್ಷ್ಮಿ ಹಾಗೂ ಆತನ ಬೆಂಬಲಿಗ ಸಂದೀಪ್ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಡಿ. ಶಿಲ್ಲಾ ಎಂಬವರು ಪೊಲೀಸರಿಗೆ ದೂರಿದ್ದಾರೆ. ಜನವರಿ 3ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಯೋಗಲಕ್ಷ್ಮಿ ಮತ್ತು ಸಂದೀಪ್ ಎಂಬವರನ್ನು ಬಂಧಿಸಿದ್ದಾರೆ. ಈ ವೇಳೆ ಯೋಗಲಕ್ಷ್ಮಿ ಕೂಡ ಡಿ. ಶಿಲ್ಪಾ ಹಾಗೂ ಇತರೆ ಇಬ್ಬರ ವಿರುದ್ಧ ಪ್ರತಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ