ಬಳ್ಳಾರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ; 400 ಹಾಸಿಗೆಗಳ ತಾಯಿ, ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ
ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಜೊತೆಗೆ ಶಂಕುಸ್ಥಾಪನೆ ನೇರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ. ಸಿಎಂ ಗೆ ಖಡ್ಗ ನೀಡಿ ಸನ್ಮಾನಿಸಿದ ವಿಮ್ಸ್ ಆಡಳಿತ ಮಂಡಳಿ.
ಬಳ್ಳಾರಿ: ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಜನರಿಗೆ ಈ ಆಸ್ಪತ್ರೆಯಿಂದ ಅನುಕೂಲ ಆಗಲಿದೆ. ಜಿಲ್ಲೆಯು ಅಭಿವೃದ್ಧಿ ಪತದತ್ತ ಸಾಗಿದೆ. ನಾಲ್ಕು ಬೆಡ್, ತಾಯಿ ಮಕ್ಕಳ ಅಸ್ಪತ್ರೆ ರಾಜ್ಯದಲ್ಲಿ ಇದೇ ಮೊದಲು. ಹೆಚ್ಚು ಹೆಚ್ಚು ಆಸ್ಪತ್ರೆ ಮೇಲ್ದರ್ಜೆಗೆರಿಸಿದ್ದೇವೆ. ತಾಯಿ ಹಾಗೂ ಮಕ್ಕಳಲ್ಲಿ ಪೌಷ್ಟಿಕ ಆಹಾರದ ಕೊರತೆ ಕಾಣುತ್ತಿದ್ದು, ಪೌಷ್ಟಿಕ ಆಹಾರಕ್ಕಾಗಿ ವಿಶೇಷ ಅನುದಾನವನ್ನು ನೀಡುವುದರ ಮೂಲಕ ಆರೋಗ್ಯಕ್ಕೆ ನಾವು ಹೆಚ್ಚು ಒತ್ತು ನೀಡಿದ್ದೇವೆ ಎಂದಿದ್ದಾರೆ.
ಜಿಂದಾಲ್ ಕಂಪನಿ ಸಹಯೋಗದೊಂದಿಗೆ 400 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದೇವೆ. 600 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ. ಕೈಗಾರಿಕೆ ಹೆಸರಿನಲ್ಲಿ ಭೂಮಿ ವಶಪಡಿಸಿಕೊಂಡ ವಿಚಾರವಾಗಿ ಸ್ಟೀಲ್ ಉದ್ಯಮ ಮಾಡುತ್ತೇವೆ ಎಂದು ಕೈಗಾರಿಕೆಗಳು ಬಂದಿದ್ದವು, ಆದರೆ ಅವರು ಕೈಗಾರಿಕೆ ಆರಂಭ ಮಾಡಿಲ್ಲ. ಅವರಿಂದ ಭೂಮಿ ಮರಳಿ ವಶಕ್ಕೆ ಪಡೆದು ಮರಳಿ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡಲಾಗುವುದು ಎಂದು ಹೇಳಿದರು.
ಬಳ್ಳಾರಿ ಹೊಸಪೇಟೆ ರಸ್ತೆ ಕಾಮಗಾರಿ ವಿಚಾರವಾಗಿ ನಾನು ಗಡ್ಕರಿಯವರ ಜೊತೆ ಮಾತನಾಡಿದ್ದೇನೆ. ಮರು ಟೆಂಡರ್ ಮಾಡಲು ಮನವಿ ಮಾಡಿದ್ದೇನೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ನಾಳೆ ನೀತಿನ್ ಗಡ್ಕರಿ ಬೆಂಗಳೂರಿಗೆ ಬಂದಾಗ ಇನ್ನೊಮ್ಮೆ ಈ ವಿಷಯವನ್ನ ಪ್ರಸ್ತಾಪ ಮಾಡುತ್ತೇನೆ ಜೊತೆಗೆ ವಿಮಾನ ನಿಲ್ದಾಣ ಸ್ಥಾಪನೆ ವಿಚಾರದಲ್ಲಿ ಸಣ್ಣದೊಂದು ವ್ಯಾಜ್ಯ ಇದೆ. ಅದನ್ನ ಶ್ರೀಘ್ರದಲ್ಲಿಯೇ ಬಗೆಹರಿಸಿ ನಾನೇ ಅಡಿಗಲ್ಲು ಹಾಕುವೆ ಎಂದರು .
ಇನ್ನು ಸಮಾನಾಂತರ ಜಲಾಶಯ ನಿರ್ಮಾಣ ವಿಚಾರವಾಗಿ ಬಿಎಸ್ವೈ ಅವರು ಸಿಎಂ ಆಗಿದ್ದಾಗ ಡಿಪಿಆರ್ ಇಂದ ಮಾಡಲು 20ಕೋಟಿ ಅನುದಾನ ನೀಡಿದ್ದರು, ಇದು ಟಿಬಿ ಬೋರ್ಡ್ನಲ್ಲಿ ಕ್ಲೀಯರ್ ಆಗಬೇಕಿದೆ. ಆಂಧ್ರಪ್ರದೇಶ ಸಿಎಂ ಜೊತೆ ನಾನೇ ಮಾತನಾಡಿರುವೆ. ನಮ್ಮ ಮತ್ತು ಆಂಧ್ರಪ್ರದೇಶದ ನೀರಾವರಿ ಸಚಿವರು ಮಾತನಾಡಿ ರಾಜ್ಯದ ಇಚ್ಛಾಶಕ್ತಿಯಲ್ಲಿ ರಾಜಿ ಮಾಡಿಕೊಳ್ಳಲ್ಲ, ಆಂಧ್ರಪ್ರದೇಶ ಜೊತೆ ಚರ್ಚೆ ಮಾಡಿ ನಾನೇ ಬಂದು ಅಡಿಗಲ್ಲು ಹಾಕುತ್ತೇನೆ ಎಂದರು.ಇದರ ಜೊತೆಗೆ ಬಳ್ಳಾರಿಯ ಅನಂತಪುರ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾಡಳಿತ ಭವನವನ್ನ ಗಾಂಧಿ ಪ್ರತಿಮೆಗೆ ಪುಷ್ಪವನ್ನ ಸರ್ಮಪಿಸಿ ಲೋರ್ಕಾಪಣೆ ಮಾಡಿದರು.
ಇದನ್ನೂ ಓದಿ:ಸಿಎಂ ಕ್ರಿಮಿನಲ್ಗಳ ರಕ್ಷಣೆ ಮಾಡುತ್ತಾರೆ ಎಂಬ ಕಾಂಗ್ರೆಸ್ ಟ್ವೀಟ್ಗೆ ಕಿಡಿಕಾರಿದ ಶಾಸಕ ಸಿ.ಟಿ.ರವಿ
ಸಿಎಂಗೆ ವಿಮ್ಸ್ ಆಡಳಿತ ಮಂಡಳಿಯಿಂದ ಖಡ್ಗ್ ನೀಡಿ ಸನ್ಮಾನ
ವಿಮ್ಸ್ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಮಾಡಿ ನೀಡಿದ ಖಡ್ಗವನ್ನು ಸಿಎಂ ಬೊಮ್ಮಾಯಿ ಬಳ್ಳಾರಿ ದುರ್ಗಮ್ಮನಿಗೆ ಸಮರ್ಪಿಸಿದ್ದಾರೆ. ನನಗೆ ಯಾರೇ ಉಡುಗೊರೆ ನೀಡಿದರು ಅದನ್ನು ದೇವರಿಗೆ ಸಮರ್ಪಣೆ ಮಾಡುತ್ತೇನೆ. ಖಡ್ಗ ನೀಡಿದರೆ ದೇವಿಗೆ, ಗದೆ ನೀಡಿದರೆ ಆಂಜನೇಯ ದೇವರಿಗೆ ನೀಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು, ಶಾಸಕರಾದ ಸೋಮಶೇಖರ್ ರೆಡ್ಡಿ, ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ, ಸಂಸದರಾದ ವೈ ದೇವೇಂದ್ರಪ್ಪ. ಮಾಜಿ ಶಾಸಕ ಸುರೇಶಬಾಬು ಉಪಸ್ಥಿತರಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Wed, 4 January 23