ಬಳ್ಳಾರಿ, ಮೇ.29: ಅಪ್ರಾಪ್ತ ಹಿಂದೂ(Hindu) ಯುವಕ, ಮುಸ್ಲಿಂ(Muslim) ಯುವತಿ ಪ್ರೀತಿಸಿ ಓಡಿಹೋದ ಘಟನೆ ಬಳ್ಳಾರಿ(Ballari) ಜಿಲ್ಲೆಯ ಸಿರಗುಪ್ಪ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಅಪ್ರಾಪ್ತರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರ ಪ್ರೀತಿ ವಿಷಯ ಇಬ್ಬರು ಮನೆಯಲ್ಲಿ ಗೊತ್ತಾಗುತ್ತಿದಂತೆ 16 ವರ್ಷದ ಮುಸ್ಲಿಂ ಯುವತಿ ಮತ್ತು 20 ವರ್ಷದ ಹಿಂದೂ ಯುವಕ ಹದಿನೈದು ದಿನಗಳ ಹಿಂದೆಯೇ ಮನೆಯಿಂದ ಎಸ್ಕೇಪ್ ಆಗಿದ್ದಾರೆ.
ಹಿಂದೂ ಯುವಕ ಪರಮೇಶ ಹಾಗೂ ಮುಸ್ಲಿಂ ಯುವತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗುತ್ತಿದಂತೆ ನಾಪತ್ತೆ ಆಗಿದ್ದಾರೆ. ಈ ಕುರಿತು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಯುವಕ ಪರಮೇಶ ವಿರುದ್ಧ ಯುವತಿ ಕಡೆಯವರು ಪ್ರಕರಣ ದಾಖಲಿಸಿದ್ದು, ಯುವತಿಯನ್ನ ಹುಡುಕಿಕೊಡುವಂತೆ ಪೋಷಕರ ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ:ಹಿಂದೂ ಬಾಲಕಿ ಜೊತೆ ಅನ್ಯ ಧರ್ಮಿಯ ಯುವಕ ಪರಾರಿ: ಲವ್ ಜಿಹಾದ್ ಆರೋಪ
ಮಂಗಳೂರು: ಕಾಸರಗೋಡಿನಲ್ಲಿ ಲವ್ ಜಿಹಾದ್ ಸದ್ದಿನ ಮಧ್ಯೆಯೇ ಶ್ರೀರಾಮ ಸೇನೆ ಸಹಾಯವಾಣಿ ಆರಂಭಿಸಿದೆ. ಲವ್ ಜಿಹಾದ್ ಮಟ್ಟ ಹಾಕಲು ಶ್ರೀರಾಮಸೇನೆ ಸಂಘಟನೆ ಹೊಸದೊಂದು ಹೆಜ್ಜೆ ಇಟ್ಟಿದೆ. ಇದು ಮಂಗಳೂರು ಸೇರಿದಂತೆ ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲಬುರಗಿ ಮತ್ತು ದಾವಣಗೆರೆ ಸೇರಿ ರಾಜ್ಯದ ಆರು ಕಡೆ ಕೇಂದ್ರ
ವಾಗಿರಿಸಿ ಕಾರ್ಯಾಚರಣೆ ನಡೆಸಲಿದ್ದು, ಸಹಾಯವಾಣಿಗೆ ಕರೆ ಮಾಡಿದವರ ಹೆಸರನ್ನು ಗೌಪ್ಯವಾಗಿರಿಸಲು ನಿರ್ಧರಿಸಿದೆ.
ಲವ್ ಜಿಹಾದ್ ಜಾಲದಲ್ಲಿ ಸಿಕ್ಕಿ ಬೀಳುವ ಯುವತಿಯರನ್ನು ಜಾಲದಿಂದ ಹೊರತರಲು ಈ ಮೂಲಕ ಪ್ರಯತ್ನಿಸಲಾಗುತ್ತಿದೆ. ಆಯಾ ಜಿಲ್ಲೆಗಳಲ್ಲಿ ವಕೀಲರು, ಕೌನ್ಸೆಲಿಂಗ್ ತಜ್ಞರು,ನಿವೃತ್ತ ಪೊಲೀಸ್ ಅಧಿಕಾರಿಗಳಿರುವ ತಂಡದಿಂದ ಕಾರ್ಯ ನಿರ್ವಹಣೆ ಮಾಡಲಿದ್ದು, ಕಾನೂನು ಬದ್ದವಾಗಿ, ಸುವ್ಯವಸ್ಥಿತವಾಗಿ ಮಾಡಲು ಯೋಜನೆ ರೂಪಿಸಲಾಗಿದೆ. ಹೆಲ್ಪ್ ಲೈನ್ ನಂಬರ್ ಹೀಗಿದ್ದು, 9090443444 ಸಂಖ್ಯೆಯ ಸಹಾಯವಾಣಿಗೆ ಶ್ರೀರಾಮ ಸೇನೆ ಅಧಿಕೃತ ಚಾಲನೆ ನೀಡಿದೆ. ದಿನದ 24 ಗಂಟೆಯೂ ಲವ್ ಜಿಹಾದ್ ಹೆಲ್ಪ್ ಲೈನ್ ಕಾರ್ಯ ನಿರ್ವಹಿಸಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Wed, 29 May 24