ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಎನ್​.ಟಿ ಬೊಮ್ಮಣ್ಣ ನಿಧನ

| Updated By: ವಿವೇಕ ಬಿರಾದಾರ

Updated on: Oct 12, 2022 | 4:06 PM

ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಎನ್​.ಟಿ ಬೊಮ್ಮಣ್ಣ ನಿಧನರಾಗಿದ್ದಾರೆ.

ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಎನ್​.ಟಿ ಬೊಮ್ಮಣ್ಣ ನಿಧನ
ಎನ್​.ಟಿ ಬೊಮ್ಮಣ್ಣ ನಿಧನ
Follow us on

ವಿಜಯನಗರ: ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ ಎನ್​.ಟಿ ಬೊಮ್ಮಣ್ಣ ನಿಧನರಾಗಿದ್ದಾರೆ. ಕಳೆದ 20 ದಿನಗಳ ಹಿಂದೆ ಪಾರ್ಶುವಾಯು ಹೊಡೆದಿತ್ತು. ಈ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಮಾಜಿ ಶಾಸಕ ಎನ್​.ಟಿ ಬೊಮ್ಮಣ್ಣ ಪತ್ನಿ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಎನ್​.ಟಿ ಬೊಮ್ಮಣ್ಣ 1985 ರಿಂದ 1994 ರವರೆಗೆ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. 2018 ರ ಜೆಡಿಎಸ್ ಅಭ್ಯರ್ಥಿಯಾಗಿ, ಎನ್. ವೈ ಗೋಪಾಲಕೃಷ್ಣ ಅವರ ವಿರುದ್ಧ ಪರಾಭವಗೊಂಡರು. 60 ರ ದಶಕದಲ್ಲಿ ರಾಜಕೀಯಕ್ಕೆ ಧುಮುಕಿದ್ದ ಅವರು, ತಾಲೂಕು ಬೋರ್ಡ್ ಅಧ್ಯಕ್ಷರಾಗಿ ನಂತರ ಶಾಸಕರಾಗಿದ್ದರು. ನಾಳ ಕೂಡ್ಲಿಗಿ ತಾಲೂಕಿನ ಸ್ವಗ್ರಾಮದಲ್ಲಿ ನರಸಿಂಹ ಗಿರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ