ಸಿದ್ಧರಾಮಯ್ಯ ಸಿಎಂ ಆಗೋ ತಿರುಕನ ಕನಸು ಕಾಣುತ್ತಿದ್ದಾರೆ: ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ

ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ​ ಅಡ್ರೆಸ್ ಇಲ್ಲದಂತಾಗಿದೆ. ಕರ್ನಾಟಕದಲ್ಲಿ ಅಡ್ರೆಸ್​​ ಹುಡುಕಲು ಕಾಂಗ್ರೆಸ್ ಪಾದಯಾತ್ರೆ ನಡೆಸಿದೆ. ಅಂಬೇಡ್ಕರ್​ ಹೆಸರು ಹೇಳುವ ಯೋಗ್ಯತೆ ಕಾಂಗ್ರೆಸ್​ಗಿಲ್ಲ.

ಸಿದ್ಧರಾಮಯ್ಯ ಸಿಎಂ ಆಗೋ ತಿರುಕನ ಕನಸು ಕಾಣುತ್ತಿದ್ದಾರೆ: ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ
ಮಾಜಿ ಸಿಎಂ ಯಡಿಯೂರಪ್ಪ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 13, 2022 | 3:07 PM

ವಿಜಯನಗರ: ಸಿದ್ದರಾಮಯ್ಯ (Siddaramaiah) ಸಿಎಂ ಆಗಬೇಕೆಂದು ತಿರುಕನ ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಯಡಿಯೂರಪ್ಪ (Yeddyurappa) ವಾಗ್ದಾಳಿ ಮಾಡಿದರು. ಹೂವಿನಹಡಗಲಿಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ವೇಳೆ ಅವರು ಮಾತನಾಡಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ​ ಅಡ್ರೆಸ್ ಇಲ್ಲದಂತಾಗಿದೆ. ಕರ್ನಾಟಕದಲ್ಲಿ ಅಡ್ರೆಸ್​​ ಹುಡುಕಲು ಕಾಂಗ್ರೆಸ್ ಪಾದಯಾತ್ರೆ ನಡೆಸಿದೆ. ಅಂಬೇಡ್ಕರ್​ ಹೆಸರು ಹೇಳುವ ಯೋಗ್ಯತೆ ಕಾಂಗ್ರೆಸ್​ಗಿಲ್ಲ. ಚುನಾವಣೆಯಲ್ಲಿ ಅಂಬೇಡ್ಕರ್​​ರನ್ನು 2 ಬಾರಿ ಸೋಲಿಸಿದರು. ಜಗಜೀವನ್​ ರಾಮ್​ರನ್ನು ಪ್ರಧಾನಿಯಾಗುವುದನ್ನ ತಡೆದರು. ಕಾಂಗ್ರೆಸ್​​​ನವರು ನೀಚರು. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಯಡಿಯೂರಪ್ಪ ಹೇಳಿದರು.

ಮೂರು ನಾಲ್ಕು ತಲೆ ಮಾರಿಗಾಗುವಷ್ಟು ಹಣ ಮಾಡಿದ್ದಾರೆಂದು ರಮೇಶ್ ಕುಮಾರ್ ಹೇಳಿದ್ದಾರೆ. ಇದಕ್ಕೆ ಯಾರು ವಿರೋಧ ( ಸೋನಿಯಾ, ರಾಹುಲ್, ಡಿಕೆಶಿ, ಸಿದ್ದರಾಮಯ್ಯ) ವ್ಯಕ್ತಿಪಡಿಸಿಲ್ಲ. ದೇಶವನ್ನು ಎಷ್ಟು ಲೂಟಿ ಮಾಡಿರಬಹುದು. ಅಧಿಕಾರಕ್ಕೆ ಬರೋ ಹಗಲುಗನಸು ಕಾಣೋ ಕೆಲಸ ಕಾಂಗ್ರೆಸ್​ನ್ನು ಸೋಲಿಸಿ. ಬಿಜೆಪಿ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ. ಯುಪಿಎ ಸರ್ಕಾರದಲಯ ಎಷ್ಟು ಹಗರಣ ಮಾಡಿದಿರಿ. 12 ಲಕ್ಷ‌ ಕೋಟಿ‌ ಲೂಟಿ‌ಮಾಡಿದರು. ರಾಬರ್ಟ್ ವಾದ್ರಾ ಎಷ್ಟು ಲೂಟಿಮಾಡಿದ್ದಾರೆ? ನ್ಯಾಶನಲ್ ಹೆರಾಲ್ಡ್ ಹಗರಣಲ್ಲಿ ತಾಯಿ ಮಗ ( ರಾಹುಲ್ ಸೋನಿಯಾ) ವಿಚಾರಣೆ ನಡೆಯುತ್ತಿದೆ ಎಂದರು.

ಮೋದಿ ಜಗತ್ತು ಕಂಡ ಅಪ್ರತಿಮ ನಾಯಕ

ಕಳೆದ ಚುನಾವಣೆ ವೇಳೆ ಹಡಗಲಿ ಕ್ಷೇತ್ರದಲ್ಲಿ‌ ಬಂಡಾಯ ಅಭ್ಯರ್ಥಿಯಿಂದಾಗಿ ಸೋಲಾಯ್ತು. ಓದೋ ಗಂಗಾಪ್ಪ ( ಪಕ್ಷೇತರ ಬಂಡಾಯ) ಚಂದ್ರನಾಯ್ಕ ಬಿಜೆಪಿ ಸೇರಿ 70 ಸಾವಿರ ಮತ ಪಡೆದಿದ್ದರು. ಮೋದಿ ಅವರು ರಾಜ್ಯದಲ್ಲಿ ಕ್ಷೇತ್ರವಾರು ಸರ್ವೆ ಮಾಡಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಕೂಡ ಸರ್ವೇ ಮಾಡುತ್ತಿದೆ. ಯಾರ ಪರವಾಗಿ ಒಲವು ಬರುತ್ತದೆ ಅವರನ್ನು ಗೆಲ್ಲಿಸಬೇಕು. ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಇದು ಇತಿಹಾಸ. ಮೋದಿ ಜಗತ್ತು ಕಂಡ ಅಪ್ರತಿಮ ನಾಯಕ. ಎಂಟು ವರ್ಷ ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಮೋದಿ ಮತ್ತು ಬೊಮ್ಮಯಿ ಸರ್ಕಾರದ ಸಾಧನೆ ಜನರಿಗೆ ತಿಳಿಸೋ ಕೆಲಸ ಮಾಡಿ. ಅಭ್ಯರ್ಥಿ ಯಾರೆಂದು ಪಕ್ಷ ಘೋಷಣೆ ಮಾಡುತ್ತದೆ ಅವರನ್ನು ಗೆಲ್ಲಿಸಿ ಎಂದು ಹೇಳಿದರು.

ತಾಂಡಾ ಅಭಿವೃದ್ಧಿಗೆ 100 ಕೋಟಿ ಅನುದಾನ ಒದಗಿಸಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ

ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣವಾಗಿದೆ. ನಾವು ಏತ ನೀರಾವರಿ ಯೋಜನೆ ಪೂರ್ಣಗೊಳಿಸಿದ್ದೇವೆ. ಅಭಿವೃದ್ಧಿಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು. ತಾಂಡಾ ಅಭಿವೃದ್ಧಿಗೆ 100 ಕೋಟಿ ಅನುದಾನ ಒದಗಿಸಿದ್ದೇನೆ ಎಂದು ಹೇಳಿದರು. ಶಿಕ್ಷಣ, ಉದ್ಯೋಗ ಎಲ್ಲದರಲ್ಲೂ ಪಾಲು ಸಿಗಬೇಕು. ಏನೂ ಮಾಡದಿರುವವರು ಇಂದು ನಮ್ಮನ್ನ ಪ್ರಶ್ನೆ ಮಾಡುತ್ತಾರೆ. 5 ಲಕ್ಷ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಆಗುತ್ತಿದೆ. ಸಾಮಾಜಿಕ ನ್ಯಾಯದ ಹೆಸರಲ್ಲಿ ಕೆಲವರು ಭಾಷಣ ಮಾಡುತ್ತಾರೆ. ಆದರೆ ನ್ಯಾಯ ಕೊಡುವ ಕೆಲಸವನ್ನು ಮಾತ್ರ ಮಾಡಲಿಲ್ಲ. ಜನರಿಂದ ಮತ ಹಾಕಿಸಿಕೊಂಡು ತಿರುಗಿ ನೋಡದೇ ಹೋದರು. ಈಗ ಮತ್ತೆ ಬರುತ್ತಿದ್ದಾರೆ, ನೀವೆಲ್ಲ ಪ್ರಶ್ನೆ ಮಾಡಬೇಕು ಎಂದರು.

ಬಳ್ಳಾರಿ ಮಣ್ಣಿನಲ್ಲಿ ದುರ್ಗಾದೇವಿಯ ಶಕ್ತಿ ಇದೆ. ಬಳ್ಳಾರಿ ಮಣ್ಣಿನ ಶಕ್ತಿ ಮುಂದಿನ ಚುನಾವಣೆಯಲ್ಲಿ ತೋರಿಸಿ. ಹೈಕಮಾಂಡ್​ಗೆ ಕಪ್ಪ ಕಾಣಿಕೆ ಸಲ್ಲಿಸುವ ಪದ್ಧತಿ ನಮ್ಮಲ್ಲಿಲ್ಲ. ಅಂತಹ ಸಂಪ್ರದಾಯಗಳು ಏನಿದ್ರು ಕಾಂಗ್ರೆಸ್​​ನಲ್ಲಿ ಮಾತ್ರ. ಕರ್ನಾಟಕವನ್ನು ಲೂಟಿ ಮಾಡಿ ಹೈಕಮಾಂಡ್​ಗೆ ಕಪ್ಪಕಾಣಿಕೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ಹರಿಹಾಯ್ದರು. ಆ ಭಾಗ್ಯ ಕೊಟ್ಟೆ ಈ ಭಾಗ್ಯ ಕೊಟ್ಟೆ ಎಂದು ಹೇಳುತ್ತಾರೆ. ಇಷ್ಟೆಲ್ಲ ಭಾಗ್ಯ ಕೊಟ್ಟರೂ ಜನರ ಯಾಕೆ ಮನೆಗೆ ಕಳುಹಿಸಿದ್ರು? ಇಂದು ರಾಜ್ಯ ಏನಾದ್ರೂ ಹಿಂದುಳಿದಿದ್ರೆ ಅದಕ್ಕೆ ಕಾರಣ ನೀವು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ