ಕುರುಗೋಡು ಠಾಣೆ ಪಿಎಸ್ಐ ಮಣಿಕಂಠ ದರ್ಪ ಪ್ರಕರಣ; ಪಿಎಸ್ಐಯನ್ನು ಅಮಾನತು ಮಾಡುವಂತೆ ಸಾರ್ವಜನಿಕರ ಪ್ರತಿಭಟನೆ

ಕುರುಗೋಡು ಠಾಣೆ ಪಿಎಸ್ಐ ಮಣಿಕಂಠ ಮಣಿಕಂಠ ದರ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಅನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಠಾಣೆ ಮುಂದೆ ನೂರಕ್ಕೂ ಹೆಚ್ಚು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದಾರೆ.

ಕುರುಗೋಡು ಠಾಣೆ ಪಿಎಸ್ಐ ಮಣಿಕಂಠ ದರ್ಪ ಪ್ರಕರಣ; ಪಿಎಸ್ಐಯನ್ನು ಅಮಾನತು ಮಾಡುವಂತೆ ಸಾರ್ವಜನಿಕರ ಪ್ರತಿಭಟನೆ
ಪಿಎಸ್​ಐ ದರ್ಪ
Edited By:

Updated on: Aug 12, 2022 | 5:34 PM

ಬಳ್ಳಾರಿ: ಕುರುಗೋಡು ಠಾಣೆ ಪಿಎಸ್ಐ ಮಣಿಕಂಠ ದರ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಅನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಠಾಣೆ ಮುಂದೆ ನೂರಕ್ಕೂ ಹೆಚ್ಚು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಕುರುಗೋಡ್ ಪೊಲೀಸ ಠಾಣೆಗೆ ಎಸ್​ಪಿ ಸ್ಥಳಕ್ಕೆ ಬರುವಂತೆ ಜನರ ಪಟ್ಟು ಹಿಡಿದಿದ್ದಾರೆ. ಮೊಹರಂ ಹಬ್ಬದ ಹಿನ್ನೆಲೆ ಕೊಳೂರು ಗ್ರಾಮದಲ್ಲಿ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣದ ಗಲಾಟೆ ಸಂಬಂಧ ಗ್ರಾಮಕ್ಕೆ ಪಿಎಸ್ಐ ಮಣಿಕಂಠ ಹೋಗಿದ್ದರು.

ಈ ವೇಳೆ ಪಿಎಸ್ಐ ಮಣಿಕಂಠ ಪಕ್ಕದಲ್ಲಿ ನಿಂತಿದ್ದ ಈರಣ್ಣನಿಗೆ ಘಟನೆಗೆ ನೀನೇ ಕಾರಣ ಅಂತಾ ಸಾರ್ವಜನಿಕವಾಗಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಕೊಳೂರು ಗ್ರಾಮದ ಕಾಲುವೆಯಲ್ಲಿ ಅನಾಮಿಕ ಶವ ನೋಡಲು ಹೋದಾಗ ಪಿಎಸ್ಐ ಈರಣ್ಣನ ಮೇಲೆ ಯೂ ಹಲ್ಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ಹಲ್ಲೆಯಿಂದಾಗಿ ಕಾಲು‌ಮುರಿದುಕೊಂಡಿದ್ದ ಈರಣ್ಣರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಳೀಯ ಶಾಸಕ ಗಣೇಶ್ ನೇತೃತ್ವದಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ಇದೀಗ ಮತ್ತೆ ಪಿಎಸ್ಐ ಮಣಿಕಂಠರಿಂದ ಈರಣ್ಣನ ಮೇಲೆ ಕ್ಷುಲ್ಲಕ ಕಾರಕ್ಕೆ ಹಲ್ಲೆ ಮಾಡಲಾಗಿದೆ.

 

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಇ ಇಲ್ಲಿ ಕ್ಲಿಕ್​ ಮಾಡಿ

Published On - 3:40 pm, Fri, 12 August 22