ಮದುವೆಯಾಗಿ ಸಂಸಾರ ಶುರು ಮಾಡಿದ್ದ ಪಾಗಲ್ ಪ್ರೇಮಿಯಿಂದ ಮಾಜಿ ಪ್ರೇಯಸಿ ಹತ್ಯೆ; ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಹಾಜರು
ಮಚ್ಚಿನಿಂದ ಪ್ರೇಯಸಿಯ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾಗಿದ್ದಾನೆ. ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ಪ್ರೇಯಸಿಯ ರುಂಡದೊಂದಿಗೆ ಬಂದ ಪಾಗಲ್ ಪ್ರೇಮಿಯನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ.
ವಿಜಯನಗರ: ಮಾಜಿ ಪ್ರೇಯಸಿ ರುಂಡ ಕಡಿದು ಆರೋಪಿ(Murder) ಪೊಲೀಸರಿಗೆ ಶರಣಾದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿಯ ಬಳಿಯ ಕನ್ನಿಬೋರನಯ್ಯನ ಹಟ್ಟಿಯಲ್ಲಿ ನಡೆದಿದೆ. ನಿರ್ಮಲಾ(23) ಭೀಕರವಾಗಿ ಕೊಲೆಯಾದ ಯುವತಿ. ಭೋಜರಾಜ್ ಎನ್ನುವ ಪಾಗಲ್ ಪ್ರೇಮಿ ತನ್ನ ಮಾಜಿ ಪ್ರೇಯಸಿಯನ್ನು ಹೀನಾಯವಾಗಿ ಕೊಲೆ ಮಾಡಿದ್ದಾನೆ.
ಬಿಎಸ್ಸಿ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು. ನಿರ್ಮಲಾಳನ್ನು ಮದುವೆ ಮಾಡಿಕೊಂಡುವಂತೆ ಆರೋಪಿ ಭೋಜರಾಜ್ ಈ ಹಿಂದೆ ಕೇಳಿದ್ದ. ಆದ್ರೆ ಯುವತಿಯ ಮನೆಯವರು ಒಪ್ಪದ ಪರಿಣಾಮ ಬೋಜರಾಜ್ ಬೇರೆ ಯುವತಿಯನ್ನ ಮದುವೆಯಾಗಿದ್ದ. 2 ತಿಂಗಳ ಹಿಂದೆ ಭೋಜರಾಜ್ನಿಗೆ ಬೇರೆ ಯುವತಿಯ ಜೊತೆ ಮದುವೆಯಾಗಿತ್ತು. ಇನ್ನೇನು ಮುಂದೆ ಇವರಿಬ್ಬರು ತಮ್ಮ ಪಾಡಿಗೆ ತಾವು ಇರ್ತಾರೆ ಎಂತ ಎಲ್ಲರೂ ಅಂದುಕೊಂಡಿದ್ದರು.
ಆದ್ರೆ ಭೋಜರಾಜನ ಮದುವೆಯಾದ ನಂತರ, ನಿರ್ಮಲಾಳ ಊರಿಗೆ ವಾಪಸ್ ಬಂದಿದ್ದಳು. ಹೀಗೆ ಬಂದ ಮೇಲೆ ಆರೋಪಿ, ನಿರ್ಮಲಾಳ ತಲೆ ಕೆಡಿಸಿದ್ದಾನೆ. ಒಪ್ಪದಿದ್ದಕ್ಕೆ ಮಚ್ಚಿನಿಂದ ಪ್ರೇಯಸಿಯ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಶರಣಾಗಿದ್ದಾನೆ. ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಠಾಣೆಗೆ ಪ್ರೇಯಸಿಯ ರುಂಡದೊಂದಿಗೆ ಬಂದ ಪಾಗಲ್ ಪ್ರೇಮಿಯನ್ನು ನೋಡಿ ಪೊಲೀಸರು ಶಾಕ್ ಆಗಿದ್ದು ಸ್ಥಳಕ್ಕೆ ಹಿರಿಯ ಪೊಲೀಸ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತಂಗಿ ಕೊಲೆಗೆ ಅಣ್ಣನ ಆಕ್ರೋಶ, ಆರೋಪಿಯನ್ನು ತಮಗೆ ಒಪ್ಪಿಸುವಂತೆ ಡೀಸೆಲ್ ಸುರಿದುಕೊಂಡ
ಇನ್ನು ಕಾನಾಹೊಸಳ್ಳಿ ಪೊಲೀಸ್ ಠಾಣೆ ಎದುರು ಹೈಡ್ರಾಮಾ ನಡೆದಿದೆ. ಠಾಣೆಗೆ ಬಂದು ಶರಣಾದ ಆರೋಪಿಯನ್ನು ತಮಗೆ ಒಪ್ಪಿಸುವಂತೆ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ನನ್ನ ತಂಗಿಯನ್ನು ಕೊಂದವನನ್ನು ನಮಗೆ ಕೊಡಿ ಅಂತ ಡಿಸೇಲ್ ಸುರಿದುಕೊಂಡ ಯುವತಿಯ ಸಹೋದರ ಶ್ರೀಕಾಂತ್ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾನೆ. ಮೃತ ನಿರ್ಮಲಾಳ ಅಣ್ಣ ಶ್ರೀಕಾಂತ್ ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರೆಡ್ಡಿ, ಸಿಪಿಐ ಸೋಮಶೇಖರ್, ವಂಸತ್ ಅಸೋದೆ, ಪಿಎಸ್ಐ ತಿಮ್ಮಣ್ಣ ಚಾಮನೂರು, ನಾಗರತ್ನ ನೇತೃತ್ವದಲ್ಲಿ ಪರಿಸ್ಥಿತಿಯನ್ನು ಕಂಟ್ರೋಲ್ಗೆ ತರಲಾಗಿದೆ. ಡೀಸೆಲ್ ಸುರಿದುಕೊಂಡಿದ್ದ ಶ್ರೀಕಾಂತ್ ಮೇಲೆ ನೀರು ಸುರಿದು, ಬಟ್ಟೆ ಕಳಚಿ ಜೀಪ್ ನಲ್ಲಿ ಆಸ್ಪತ್ರೆಗೆ ಕಳುಹಿಸಲಾಗಿದೆ.
Published On - 2:58 pm, Thu, 21 July 22