ಬಳ್ಳಾರಿ: ಕಾಂಗ್ರೆಸ್ ಬೆಂಬಲ ನೀಡದಿದ್ದಕ್ಕೆ ನಿಖಿಲ್(Nikhil Kumaraswamy), ದೇವೇಗೌಡರು(HD Deve Gowda) ಸೋತರು ಎಂದು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುರೆಕೊಪ್ಪದಲ್ಲಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯರನ್ನು ಉಪ ಮುಖ್ಯಮಂತ್ರಿ ಮಾಡಿದ್ದು H.D.ದೇವೇಗೌಡರು. ಮುಖ್ಯಮಂತ್ರಿ ಆಗೋಕೆ ಮಾತ್ರ ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋಗಿದ್ದಾರೆ. 30 ವರ್ಷದಿಂದ ನಮಗೆ ಕುಟುಂಬ ರಾಜಕಾರಣದ ಲೇಬಲ್ ಕೊಟ್ಟಿದ್ದಾರೆ ಎಂದು ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ವರುಣಾದಲ್ಲಿ ಪುತ್ರನ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ಹೊರಗೆ ಹೋಗ್ತಿದ್ದಾರೆ. ಖರ್ಗೆ ಸಿಎಂ ಆಗಲು ಬರೋಕೆ ಆಗಲ್ಲ, ಹಾಗಾಗಿ ಪುತ್ರನ ತರುತ್ತಿದ್ದಾರೆ. ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪಗೂ ಅವರ ಮಕ್ಕಳ ಬಗ್ಗೆಯೇ ಚಿಂತೆ. ಅಕ್ರಮ ಗಣಿಗಾರಿಕೆ ಹೊರಗೆ ಬರುವುದಕ್ಕೆ ಕುಮಾರಸ್ವಾಮಿಯೇ ಕಾರಣ. ನನ್ನ ವಿರುದ್ಧ 150 ಕೋಟಿ ಆರೋಪಮಾಡಿದವರು ಎಲ್ಲಿಗೆ ಹೋದರು? ಜನಾರ್ದನ ರೆಡ್ಡಿ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಯಾವುದೇ ಸಮಸ್ಯೆ ಇಲ್ಲ. ಎಲ್ಲಿ ಬೇಕಾದ್ರಲ್ಲಿ ಸ್ಪರ್ಧೆ ಮಾಡೋಕೆ ನನ್ನದು ಟೂರಿಂಗ್ ಟಾಕೀಸ್ ಅಲ್ಲ. ಸಿದ್ದರಾಮಯ್ಯ ಒಂದು ಕ್ಷೇತ್ರ ಹುಡುಕೋಕೆ ಅಗ್ತಿಲ್ಲ. ಇವರು ಸಿಎಂ ಆದವರು, ಹದಿಮೂರು ಬಾರಿ ಬಜೆಟ್ ಮಂಡಿಸಿದವರು ಎಂದು ಹೆಚ್ಡಿಕೆ ಟೀಕಿಸಿದ್ದಾರೆ.
ಇದನ್ನೂ ಓದಿ: Election News: ಬಳ್ಳಾರಿಯಲ್ಲಿ ಸಹೋದರನ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿದ ಜನಾರ್ದನ ರೆಡ್ಡಿ
ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. 2028ರಲ್ಲಿ 2 ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದ ಜನ ತಿರಸ್ಕಾರ ಮಾಡ್ತಾರೆ. 2018ರಲ್ಲಿ ಕಾಂಗ್ರೆಸ್ ಷರತ್ತು ಹಾಕಿ ಅಧಿಕಾರ ನೀಡಿತ್ತು. ಆದ್ರೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಕಾಂಗ್ರೆಸ್ ನಾಯಕರು ನನಗೆ ಬಿಡಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದರೆ ಬಡತನವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಎರಡೂ ಪಕ್ಷದ ಜೊತೆಗೆ ಸಮ್ಮಿಶ್ರ ಸರ್ಕಾರ ಮಾಡಿ ಅನುಭವ ಇದೆ. ಈಗಿರೋದು 2006ರ ಬಿಜೆಪಿ ಅಲ್ಲ, ರಾಷ್ಟ್ರ ನಾಯಕರ ಶಕ್ತಿ ಇರುವ ಬಿಜೆಪಿ. 2018ರಲ್ಲಿ ಕಾಂಗ್ರೆಸ್ ಜೊತೆ ಹೋಗಿದ್ದಕ್ಕೆ ಗುಲಾಮನಾಗಿರುವ ಹಾಗೆ ಆಯ್ತು. ಸಿದ್ದರಾಮಯ್ಯ ಅಧಿಕಾರ ಹೋದರೂ ನನಗೆ ಮನೆ ಬಿಟ್ಟು ಕೊಡಲಿಲ್ಲ. ಸಮ್ಮಿಶ್ರ ಸರ್ಕಾರ ಮಾಡಿ ಕಾಂಗ್ರೆಸ್ನವರು ಕುತ್ತಿಗೆ ಕೊಯ್ದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:41 pm, Tue, 31 January 23