ಬಳ್ಳಾರಿ: ಜಿಲ್ಲೆಯಾದ್ಯಂತ ಜನವರಿ 13 ರಿಂದ ಅಂಗನವಾಡಿ ಶಾಲೆ, ನರ್ಸರಿ, ಪ್ರೀ ನರ್ಸರಿ ಶಾಲೆ ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬಳ್ಳಾರಿ ಡಿಸಿ ಪವನ್ ಕುಮಾರ್ ಮಾಲಪಾಟಿ ಆದೇಶ ನೀಡಿದ್ದಾರೆ. ಜಿಂದಾಲ್ ಸುತ್ತಮುತ್ತ 1- 8ನೇ ತರಗತಿವರೆಗೆ ಶಾಲೆ ಬಂದ್ ಮಾಡಿ ಆದೇಶಿಸಲಾಗಿದೆ. ಜಿಂದಾಲ್ ಸಮೂಹ ಸಂಸ್ಥೆಯ ಸುತ್ತಲಿನ ತೋರಣಗಲ್ಲು, ಸುಲ್ತಾನ್ ಪುರ, ಜಿಂದಾಲ್ ಟೌನ್‌ಶಿಪ್, ತಾರಾ ನಗರ, ಕುರೇಕೊಪ್ಪಾ, ಕುಡುತಿನಿ ಶಾಲೆಗಳು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಜಿಂದಾಲ್ ಸುತ್ತಮುತ್ತ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ರಜೆ ನೀಡಲಾಗಿದೆ.
ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಯಲ್ಲಿ 180 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಳ್ಳಾರಿ ಜಿಲ್ಲಾಡಳಿತದಿಂದ ಈ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಬಳ್ಳಾರಿ 57, ಸಂಡೂರ 35 ಹಾಗೂ ಶಿರಗುಪ್ಪದಲ್ಲಿ 5 ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ 70, ಹಗರಿಬೊಮ್ಮನಹಳ್ಳಿ 6, ಹರಪನಹಳ್ಳಿ 2 ಹಾಗೂ ಹಡಗಲಿಯಲ್ಲಿ 5 ಕೇಸ್ ಪತ್ತೆ ಆಗಿದೆ.
ಮಂಡ್ಯ ಜಿಲ್ಲೆಯ ಮೂವರು ತಹಶೀಲ್ದಾರ್ಗಳಿಗೆ ಕೊರೊನಾ
ಮಂಡ್ಯ ಜಿಲ್ಲೆಯ ಮೂವರು ತಹಶೀಲ್ದಾರ್ಗಳಿಗೆ ಕೊರೊನಾ ದೃಢವಾಗಿದೆ. ಮಂಡ್ಯ ತಹಶೀಲ್ದಾರ್ ಚಂದ್ರಶೇಖರ, ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ, ಮದ್ದೂರು ತಹಶೀಲ್ದಾರ್ ನರಸಿಂಹಮೂರ್ತಿಗೆ ಕೊರೊನಾ ದೃಢವಾಗಿದೆ. ಮೂವರು ಸೋಂಕಿತ ತಹಶೀಲ್ದಾರ್ಗಳು ಐಸೋಲೇಷನ್ ಆಗಿದ್ದಾರೆ. ತಾಲೂಕು ಕಚೇರಿ ಸಿಬ್ಬಂದಿಗೂ ಕೊರೊನಾ ಸೋಂಕಿನ ಆತಂಕ ಎದುರಾಗಿದೆ.
ಕರ್ನಾಟಕ ಗಡಿ ಪ್ರವೇಶಕ್ಕೆ ಆರ್ಟಿಪಿಸಿಆರ್ ಕಡ್ಡಾಯ ಹಿನ್ನೆಲೆ; ಜಾಳಿ ಗಡಿಯಲ್ಲಿ ಗೋವಾದ ನಾಗರಿಕರಿಂದ ಪ್ರತಿಭಟನೆ
ಕರ್ನಾಟಕ ಗಡಿ ಪ್ರವೇಶಕ್ಕೆ ಆರ್ಟಿಪಿಸಿಆರ್ ಕಡ್ಡಾಯ ಹಿನ್ನೆಲೆ ಮಾಜಾಳಿ ಗಡಿಯಲ್ಲಿ ಗೋವಾದ ನಾಗರಿಕರಿಂದ ಪ್ರತಿಭಟನೆ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಮಾಜಾಳಿ ಗಡಿಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಗೋವಾ ಪ್ರವೇಶಕ್ಕೆ ಯಾವುದೇ ಟೆಸ್ಟ್ ಕಡ್ಡಾಯಗೊಳಿಸಿಲ್ಲ. ಕರ್ನಾಟಕ ಪ್ರವೇಶಕ್ಕೆ ಟೆಸ್ಟ್ ಕಡ್ಡಾಯಗೊಳಿಸಿ ನಿತ್ಯ ಕಿರಿಕಿರಿ ಉಂಟಾಗುತ್ತಿದೆ. ನಿತ್ಯ ಕಿರಿಕಿರಿ ಕೊಡುತ್ತಿದ್ದೀರೆಂದು ಆರೋಪಿಸಿ ಪ್ರತಿಭಟನೆ ಮಾಡಲಾಗಿದೆ. ಗೋವಾ ತೆರಳುವ ವಾಹನಗಳನ್ನು ತಡೆದು ಗಡಿಯಲ್ಲಿ ಧರಣಿ ನಡೆಸಲಾಗಿದೆ. ಗಡಿಯಲ್ಲಿದ್ದ ಕರ್ನಾಟಕ ಪೊಲೀಸರ ಜತೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ: ಹಾಸನ: ಕೊರೊನಾ ಸೋಂಕು ಹೆಚ್ಚಾಗಿ ಪತ್ತೆಯಾಗಿರುವ ಶಾಲಾ ಕಾಲೇಜು ಮಾತ್ರ ಬಂದ್- ಜಿಲ್ಲಾಧಿಕಾರಿ ಹೇಳಿಕೆ
ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಳ: ಧಾರವಾಡ, ಹುಬ್ಬಳ್ಳಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
Published On - 7:34 pm, Wed, 12 January 22