ಹಾಸನ: ಕೊರೊನಾ ಸೋಂಕು ಹೆಚ್ಚಾಗಿ ಪತ್ತೆಯಾಗಿರುವ ಶಾಲಾ ಕಾಲೇಜು ಮಾತ್ರ ಬಂದ್- ಜಿಲ್ಲಾಧಿಕಾರಿ ಹೇಳಿಕೆ
ಎಲ್ಲಾ ತಾಲೂಕಿನಲ್ಲೂ ಕೊವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಕೊವಿಡ್ ಕೇರ್ ಸೆಂಟರ್ ತೆರೆಯಲಾಗುತ್ತದೆ ಎಂದು ಹಾಸನ ಡಿಸಿ ಹೇಳಿದ್ದಾರೆ.
ಹಾಸನ: ಜಿಲ್ಲೆಯಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿವೆ. ಹಾಸನ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ. 5.45ರಷ್ಟು ಇದೆ. ಪಾಸಿಟಿವಿಟಿ ರೇಟ್ನಲ್ಲಿ ರಾಜ್ಯದಲ್ಲಿ ಹಾಸನ 8ನೇ ಸ್ಥಾನದಲ್ಲಿದೆ. ಹಾಗಾಗಿ ಇದನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಹಾಸನ ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಹೆಚ್ಚಳ ಮಾಡಿದ್ದೇವೆ. 3ನೇ ಅಲೆಗೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕುತ್ತಿದ್ದೇವೆ. ಜಿಲ್ಲೆಯ 22 ಶಾಲೆಗಳಲ್ಲಿ ಕೊರೊನಾ ಕಂಡು ಬಂದಿದೆ. ಕೊರೊನಾ ಹೆಚ್ಚಿರುವ ಶಾಲಾ ಕಾಲೇಜಿಗೆ 5 ದಿನ ರಜೆ ನೀಡುವಂತೆ ಈಗಾಗಲೇ ತಿಳಿಸಿದ್ದೇವೆ. ಕೊರೊನಾ ಹೆಚ್ಚು ಬಂದರೆ ಶಾಲಾ-ಕಾಲೇಜು ಬಂದ್ ಮಾಡುತ್ತೇವೆ ಎಂದು ಹಾಸನದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚೆಗೆ 1,630 ಕೇಸ್ ಗಳು ಬಂದಿವೆ. ಜಿಲ್ಲೆಯಲ್ಲಿ 5.45 ಪಾಸಿಟಿವಿಟಿ ರೇಟ್ ಇದೆ. ಪಾಸಿಟಿವಿಟಿ ರೇಟ್ನಲ್ಲಿ ರಾಜ್ಯದಲ್ಲಿ ಹಾಸನ 8 ನೇ ಸ್ಥಾನದಲ್ಲಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಹಾಗಾಗಿ ನಾವು ಟೆಸ್ಟಿಂಗ್ ಜಾಸ್ತಿ ಮಾಡಿದ್ದೇವೆ. ಮೂರನೇ ಅಲೆಗೆ ಪೂರ್ಣ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಎಲ್ಲಾ ತಾಲೂಕಿನಲ್ಲೂ ಕೊವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಕೊವಿಡ್ ಕೇರ್ ಸೆಂಟರ್ ತೆರೆಯಲಾಗುತ್ತದೆ ಎಂದು ಹಾಸನ ಡಿಸಿ ಹೇಳಿದ್ದಾರೆ.
ಕೊರೊನಾ ಹೆಚ್ಚು ಬಂದಿರೋ ಶಾಲಾ ಕಾಲೇಜು ಮಾತ್ರ ಕ್ಲೋಸ್
ಶಾಲಾ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್ ಕಡೆಯೂ ಹೆಚ್ಚು ಗಮನಹರಿಸಲಾಗಿದೆ. ಇತ್ತೀಚೆಗೆ ಶಾಲೆ ಕಾಲೇಜು ಮಕ್ಕಳಿಗೆ ಪಾಸಿಟಿವ್ ಬರ್ತಿದೆ. ಜಿಲ್ಲೆಯಲ್ಲಿ ಒಟ್ಟು 3,070 ಶಾಲೆಗಳಿವೆ. ಇದರಲ್ಲಿ 22 ಶಾಲೆಗಳಲ್ಲಿ ಪಾಸಿಟಿವ್ ಕಂಡು ಬಂದಿದೆ. ಒಂದು ಶಾಲೆಯಲ್ಲಿ ಮಾತ್ರ 35 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಹೆಚ್ಚು ಇರೋ ಶಾಲಾ ಕಾಲೇಜಿಗೆ ಐದು ದಿನ ರಜೆ ನೀಡುವಂತೆ ತಿಳಿಸಿದ್ದೇವೆ. ಜಿಲ್ಲೆಯಲ್ಲಿ 173 ಪದವಿ ಪೂರ್ವ ಕಾಲೇಜುಗಳಿವೆ. ನಾಲ್ಕು ಕಾಲೇಜುಗಳಲ್ಲಿ ಮಾತ್ರ ಪಾಸಿಟಿವ್ ಬಂದಿದೆ ಎಂದು ಆರ್. ಗಿರೀಶ್ ಮಾಹಿತಿ ನೀಡಿದ್ದಾರೆ.
ಶಾಲಾ ಕಾಲೇಜುಗಳಲ್ಲಿ 15 ದಿನಕ್ಕೆ ಒಂದು ಸಾರಿ ಆರ್ಟಿಪಿಸಿಆರ್ ಟೆಸ್ಟ್ ಮಾಡೋದಕ್ಕೆ ಸೂಚಿಸಿದ್ದೇವೆ. ಯಾರೂ ಕೂಡಾ ಗಾಬರಿಯಾಗೋ ಅವಶ್ಯಕತೆಯಿಲ್ಲ. ಕಲಿಕೆ ಕುಂಠಿತವಾಗಿರೋದ್ರಿಂದ ಶಾಲೆ ಕ್ಲೋಸ್ ಮಾಡೋದು ಬೇಡ ಅಂತಾ ಸಚಿವರು ಸೂಚಿಸಿದ್ದಾರೆ. ಹಾಗಾಗಿ ಕೊರೊನಾ ಹೆಚ್ಚು ಬಂದಿರೋ ಶಾಲಾ ಕಾಲೇಜುಗಳನ್ನ ಮಾತ್ರ ಕ್ಲೋಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 1ರಿಂದ 9ನೇ ತರಗತಿ ಬಂದ್; ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಬೇಸರ
ಬೆಂಗಳೂರಿನಲ್ಲಿ ಜನವರಿ 31ರ ವರೆಗೆ 1ರಿಂದ 9ನೇ ತರಗತಿ ಬಂದ್ ವಿಚಾರವಾಗಿ ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಬೇಸರ ವ್ಯಕ್ತಪಡಿಸಿದೆ. ವಿದ್ಯಾಗಮದ ಮೂಲಕ ತರಗತಿಗಳನ್ನು ನಡೆಸಬಹುದಿತ್ತು. ಆದರೆ, ರಾಜ್ಯ ಸರ್ಕಾರ ಆ ನಿರ್ಧಾರಕ್ಕೆ ಮುಂದಾಗಿಲ್ಲ. ಭೌತಿಕ ತರಗತಿ ಇಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತ ಆಗಿದ್ದಾರೆ. ಒಂದು ವೇಳೆ ಬೇರೆ ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಾದರೆ, ಆ ಭಾಗಗಳಲ್ಲಾದರೂ ವಿದ್ಯಾಗಮ ಆರಂಭಿಸಲು ಮನವಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕು ಹೆಚ್ಚಳ: ಧಾರವಾಡ, ಹುಬ್ಬಳ್ಳಿ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ಇದನ್ನೂ ಓದಿ: ಕೊರೊನಾದಿಂದ ತೀರಾ ಅಗತ್ಯ ಬಿದ್ದರೆ ಮಾತ್ರ ಶಾಲೆ ಬಂದ್ ಮಾಡಿ: ಎಲ್ಲ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಸಚಿವ ನಾಗೇಶ್ ಸಲಹೆ