ವಿಜಯನಗರ: ಹೊಸಪೇಟೆಯ ಹುಡಾ ಸರ್ಕಲ್ ಬಳಿ ಕಂಟೇನರ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 180 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ರಾಯಸಾಬ್ ಗಿರಿ ಮತ್ತು ನೀರಜ್ ಕುಮಾರ್ ಎಂಬಿಬ್ಬರನ್ನು ಚಿತ್ತವಾಡಗಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. 50 ಕೆಜಿಯ 360 ಚೀಲಗಳಲ್ಲಿದ್ದ 180 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ. ಕಂಟೇನರ್ ಮತ್ತು ಜಪ್ತಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿಯಿಂದ ಹೊಸಪೇಟೆ ಮಾರ್ಗವಾಗಿ ಗುಜರಾತ್ ಗೆ ಕಂಟೇನರ್ ನಲ್ಲಿ ಈ ಅಕ್ಕಿ ಸಾಗಿಸಲಾಗುತ್ತಿತ್ತು. ಹೊಸಪೇಟೆ ಪಟ್ಟಣದ ಚಿತ್ತವಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣದ ಕಾಶಿ ಕುರುಗೋಡಿನ ದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವ:
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಶ್ರೀ ದೊಡ್ಡಬಸವೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಜಾತ್ರೆಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭಾಗಿಯಾಗಿದ್ದರು. ದಕ್ಷಿಣದ ಕಾಶಿಯೆಂದೇ ಪ್ರಸಿದ್ದಿ ಪಡೆದ ಕುರುಗೋಡಿನ ಆದಿದೈವ ದೊಡ್ಡ ಬಸವೇಶ್ವರ ದೇವಸ್ಥಾನ ಇದೆ. ಬೃಹತಾದ ರಥಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆದು ಭಕ್ತರು ದೊಡ್ಡ ಬಸವೇಶ್ವರನ ದರ್ಶನ ಪಡೆದರು.
ಕುಮಟಾ ಗೇರು ನೆಡುತೋಪಿಗೆ ಆಕಸ್ಮಿಕ ಬೆಂಕಿ, ಹತ್ತಾರು ಎಕರೆ ಗೇರು ಗಿಡಗಳು ಅಗ್ನಿಗಾಹುತಿ
ಕಾರವಾರ: ಗೇರು ಗಿಡದ ನೆಡುತೋಪಿಗೆ ಆಕಸ್ಮಿಕವಾಗಿ ಬೆಂಕಿ ತಾಕಿದ್ದು, ಹತ್ತು ಏಕರೆಗೂ ಅಧಿಕ ಗೇರು ನೆಡುತೋಪು ಅಗ್ನಿಗಾಹುತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡ್ಕಣಿ ಕ್ರಾಸ್ ಬಳಿ ಘಟನೆ ನಡೆದಿದೆ. ಗೇರು ಬೀಜಕ್ಕಾಗಿ ಅರಣ್ಯ ಇಲಾಖೆಯಿಂದ ಟೆಂಡರ್ ಮೂಲಕ ಸುಬ್ರಾಯ ಶೆಟ್ಟಿ ಎಂಬುವವರು ಈ ನೆಡುತೋಪು ಪಡೆದಿದ್ದರು.
ಇದೀಗ ಗೇರು ನೆಡುತೋಪಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ. ಹತ್ತಾರೂ ಎಕರೆ ಗೇರು ನೆಡುತೋಪಿಗೆ ಬೆಂಕಿ ತಗುಲಿದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಕೊನೆಗೂ ಸುಮಾರು ಮೂರು ತಾಸು ಹರಸಾಹಸಪಟ್ಟು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿಯಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆ; ವರುಣನ ಆರ್ಭಟದಿಂದ ಮಾರಿಕಾಂಬಾ ಜಾತ್ರೆಗೆ ಅಡ್ಡಿ
ಉತ್ತರ ಕನ್ನಡ: ಜಿಲ್ಲೆಯ ಶಿರಸಿಯಲ್ಲಿ ಇಂದು(ಮಾರ್ಚ್ 18) ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗಿದೆ(Rain). ವರುಣನ ಆರ್ಭಟದಿಂದ ಮಾರಿಕಾಂಬಾ ಜಾತ್ರೆಗೆ (marikamba jatre) ಅಡ್ಡಿಯಾಗಿದ್ದು, ಭಾರೀ ಗಾಳಿಯಿಂದಾಗಿ ಜಾತ್ರಾ ಅಂಗಡಿಯ ಮೇಲ್ಚಾವಣಿಗಳು ಹಾರಿ ಹೋಗುತ್ತಿವೆ. ಗಾಳಿ, ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಜಾತ್ರೆಗೆ ಬಂದ ಭಕ್ತರು(Devotees) ಹರಸಾಹಸ ಪಡುತ್ತಿದ್ದಾರೆ. ಕಳೆದ ಒಂದು ತಾಸಿನಿಂದ ಎಡಬಿಡದೆ ಗಾಳಿ ಸಹಿತ ಮಳೆ ಸುರಿಯುತ್ತಿದೆ.
ಗಾಳಿಯಿಂದಾಗಿ ಹಲವು ಕಡೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಶಿರಸಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವ್ಯಾಪಕ ಮಳೆಯಾಗಿದೆ. ಭಾರೀ ಗಾಳಿ, ಮಳೆಗೆ ಶಿರಸಿ ಮಾರಿಕಾಂಬೆಯನ್ನು ಇರಿಸಿರುವ ಜಾತ್ರಾ ಗದ್ದುಗೆಯ ಚಪ್ಪರದ ಮೇಲ್ಭಾಗಕ್ಕೆ ಹಾನಿಯಾಗಿದೆ. ಶಿರಸಿ, ಸಿದ್ಧಾಪುರ ತಾಲೂಕಿನಾದ್ಯಂತ ಭಾರೀ ಮಳೆ ಮುಂದುವರಿದಿದೆ.
ಇದನ್ನೂ ಓದಿ:
ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ: ಪ್ರಧಾನಿ ಮೋದಿ ಕಮಿಟ್ಮೆಂಟ್ ದೃಢವಾಗಿದೆ- ಮಾಜಿ ಪ್ರಧಾನಿ ದೇವೇಗೌಡ ಶ್ಲಾಘನೆ
ಇದನ್ನೂ ಓದಿ:
ನವೀನ್ ದೇಹ ಸೋಮವಾರ ಆಗಮನ: ಮನೆಯಲ್ಲಿ ಪೂಜೆ ಸಲ್ಲಿಸಿ, ಮೆಡಿಕಲ್ ಕಾಲೇಜಿಗೆ ಶರೀರ ದಾನ -ನವೀನ್ ತಂದೆ ಶೇಖರಗೌಡ
Published On - 8:40 pm, Fri, 18 March 22